ಮಕ್ಕಳಲ್ಲಿ ನಾನು ಮೌಲ್ಯಗಳ ಬೀಜ ಬಿತ್ತುತ್ತಿದ್ದೇನೆ: ಮಕ್ಕಳೊಡನೆ ನವರಾತ್ರಿ ಸಂಭ್ರಮಿಸಿದ ಶಿಲ್ಪಾ ಶೆಟ್ಟಿ

Written by Soma Shekar

Published on:

---Join Our Channel---

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕಳೆದ ಕೆಲವು ದಿನಗಳಿಂದಲೂ ಸಹಾ ಬಹಳ ಬೇಸರದಲ್ಲಿ ಇದ್ದರು. ಅದಕ್ಕೆ ಕಾರಣವಾಗಿದ್ದು ಅವರ ಪತಿ ರಾಜ್ ಕುಂದ್ರಾ ಅ ಶ್ಲೀ ಲ ಸಿನಿಮಾಗಳ ತಯಾರಿಕೆ ಹಾಗೂ ಹಂಚಿಕೆ ವಿಚಾರದಲ್ಲಿ ಜೈಲು ಪಾಲಾಗಿ, ಸ್ವಲ್ಪ ಕಾಲ ಜೈಲಿನಲ್ಲೇ ಕಳೆಯಬೇಕಾಗಿ ಬಂದಿತ್ತು. ಅಲ್ಲದೇ ಪತಿ ಜೈಲು ಸೇರಿದ ಮೇಲೆ ಹೊರಗೆ ಶಿಲ್ಪಾ ಶೆಟ್ಟಿ ಮುಜುಗರ ಎದುರಿಸುವ ಪರಿಸ್ಥಿತಿ ಉಂಟಾಗಿತ್ತು.‌ ಕೆಲವು ದಿನಗಳ ಹಿಂದೆಯಷ್ಟೇ ರಾಜ್ ಕುಂದ್ರಾ ಜಾಮೀನು‌ ಪಡೆದು ಜೈಲಿನಿಂದ ಹೊರ ಬಂದಿದ್ದಾರೆ.‌ ಅದಾದ‌ ಮೇಲೆ ಅವರ ಕುಟುಂಬದಲ್ಲಿ ಒಂದು ನೆಮ್ಮದಿ ಸಿಕ್ಕಿದೆ.

ಶಿಲ್ಪಾ ಶೆಟ್ಟಿ ಅವರು ಸಹಾ‌ ಸೋಶಿಯಲ್ ಮೀಡಿಯಾಗಳ ಮೂಲಕ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಈಗ ಇವೆಲ್ಲವುಗಳ ನಂತರ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಹಾಗೂ ತಮ್ಮ ಮಕ್ಕಳೊಡನೆ ಬಹಳ ಸಂಭ್ರಮದಿಂದ ನವರಾತ್ರಿ ಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ನವರಾತ್ರಿ ಸಂಭ್ರಮಿಸಿದ ವೀಡಿಯೋ ಒಂದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಶಿಲ್ಪಾ ಶೆಟ್ಟಿ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.

ಶಿಲ್ಪಾ ಅವರು ತಮ್ಮ ಪೋಸ್ಟ್ ನಲ್ಲಿ, ನನ್ನ ಮಕ್ಕಳು ಮತ್ತು ನಂಬಿಕೆ, ಕೆಲವು ವಿಷಯಗಳನ್ನು ಆಚರಿಸದ ಹೊರತು ನಮ್ಮ ಮುಂದಿನ ತಲೆಮಾರುಗಳಿಗೆ ಅದನ್ನು ನಾವು ತಲುಪಿಸಲು ಸಾಧ್ಯವಿಲ್ಲ. ನಮ್ಮ ತಂದೆ ತಾಯಿ ನಮ್ಮನ್ನು ಬೆಳೆಸಿದ ರೀತಿಯಲ್ಲೇ ಮೌಲ್ಯ ಮತ್ತು ಸಂಪದ್ರಾಯಗಳ ಜೊತೆ ನನ್ನ ಮಕ್ಕಳು ಸಹಾ ಬೆಳೆಯಬೇಕೆಂಬುದು ನನಗೆ ಬಹಳ ಮುಖ್ಯವಾಗಿದೆ. ನನ್ನ ಇಬ್ಬರು ಮಕ್ಕಳಲ್ಲೂ ನಾನು ನಂಬಿಕೆಯ ಬೀಜ ಎಳೆಯ ವಯಸ್ಸಿನಲ್ಲಿಯೇ ಬಿತ್ತುತ್ತಿದ್ದೇನೆ. ಏಕೆಂದರೆ ಅದು ಬೆಳೆದು ದೊಡ್ಡವರಾದಂತೆ ಮಕ್ಕಳಲ್ಲಿ ಆಳವಾಗಿ ಬೇರು ಬಿಡುತ್ತದೆ.

https://www.instagram.com/p/CU4tTNBjpHn/?utm_medium=copy_link

ಹಾಗೆ ಬೇರು ಬಿಟ್ಟ ಮೌಲ್ಯಗಳು ನಮ್ಮ ಜೀವನದಲ್ಲಿ ಗೆಲುವನ್ನು ಅನುಭವಿಸಲು ಹಾಗೂ ದೇವರಿಗೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳಲು ನಮಗೆ ನೆರವನ್ನು ನೀಡುತ್ತದೆ ಎಂದು ಬರೆದುಕೊಂಡು ನಟಿ ಶಿಲ್ಪಾ ಶೆಟ್ಟಿ ಮಕ್ಕಳೊಡನೆ ಹಬ್ಬ ಆಚರಿಸಿದ, ದೇವರ ಪೂಜೆ ಆರಾಧನೆ ಮಾಡಿದ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ವೀಡಿಯೋ ನೋಡಿ ಅವರ ಅಭಿಮಾನಿಗಳು ಸಹಾ ಶಿಲ್ಪಾ ಅವರಿಗೆ ನವರಾತ್ರಿ ಶುಭಾಶಯವನ್ನು ಕೋರಿದ್ದಾರೆ.

Leave a Comment