ಮಂದಿರ ಮತ್ತು ಮಸೀದಿಯಲ್ಲಿ ಏಕಕಾಲಕ್ಕೆ ಲೌಡ್ ಸ್ಪೀಕರ್ ತೆಗೆದು ಮೆರೆದರು ಸೌಹಾರ್ದತೆ

Entertainment Featured-Articles News

ದೇಶದ ಅನೇಕ ಕಡೆಗಳಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕೂಡಾ ಧಾರ್ಮಿಕ ವಿಚಾರವಾಗಿ ಧರ್ಮ ಧರ್ಮಗಳ ನಡುವೆ ಒಂದು ಅಸಮಾಧಾನ ಉಂಟಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಮತೀಯ ವಿಚಾರಗಳಿಂದಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ನಮ್ಮ‌ ರಾಜ್ಯದಲ್ಲಂತೂ ಹಿಜಾಬ್ ನಿಂದ ಆರಂಭವಾದ ಗ ಲ ಭೆ ಯು ಈಗ ಧರ್ಮ ದಂಗಲ್ ನ ಸ್ವರೂಪವನ್ನು ಪಡೆದಿದೆ. ಪ್ರತಿ ದಿನವೂ ಮತೀಯ ವಿಚಾರಗಳ ಕಾರಣಗಳಿಂದ ನಡೆಯುತ್ತಿರುವ ಸಾಮಾಜಿಕ ಶಾಂತಿ ಕದಡುತ್ತಿರುವ ವಿಚಾರಗಳ ಸುದ್ದಿಗಳು ಮಾದ್ಯಮಗಳಲ್ಲಿ ವರದಿಯಾಗುತ್ತಲೇ ಇದೆ.

ಈಗ ಇಂತಹ ಒಂದು ಅಸಮಾಧಾನದ ವಾತಾವರಣದ ನಡುವೆಯೇ ಮಧ್ಯಪ್ರದೇಶದಲ್ಲಿ ನಡೆದಿರುವ ಘಟನೆಯೊಂದು ಮತೀಯ ಸೌಹಾರ್ದತೆಯನ್ನು ಮೆರೆಯುವ ಮೂಲಕ ಎಲ್ಲರ ಗಮನವನ್ನು ಸೆಳೆದಿರುವುದು ಮಾತ್ರವೇ ಅಲ್ಲದೇ ಫೋಟೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ಜನರಿಂದ ಮೆಚ್ಚುಗೆಗಳು ಸಹಾ ಹರಿದು ಬರುತ್ತಿವೆ. ಹಾಗಾದರೆ ಏನು ಈ ವಿಷಯ?? ಇಷ್ಟಕ್ಕೂ ಅಲ್ಲಿ ನಡೆದಿದ್ದಾರೂ ಏನು ? ತಿಳಿಯೋಣ ಬನ್ನಿ.

ಮಧ್ಯಪ್ರದೇಶದ ಝಾನ್ಸಿಯ ಬಾರಗಾಂವ್ ನ ಗಾಂಧಿ ಚೌಕದಲ್ಲಿ ಇರುವ ಎರಡು ದೊಡ್ಡ ಧಾರ್ಮಿಕ ಸ್ಥಾನಗಳಾದ ಶ್ರೀ ರಾಮ ಜಾನಕಿ ಮಂದಿರ ಹಾಗೂ ಸುನ್ನಿ ಜಾಮಾ ಮಸೀದಿಯ ಮುಖ್ಯಸ್ಥರು ಒಂದು ಸಮಾಲೋಚನೆಯನ್ನು ನಡೆಸುವ ಮೂಲಕ ಒಂದು ಪ್ರಮುಖವಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇತ್ತೀಚಿಗೆ ಧಾರ್ಮಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ವಿಚಾರವಾಗಿ ಎದ್ದಿರುವ ವಿ ವಾ ದಕ್ಕೆ ಒಂದು ಸೌಹಾರ್ದಯುತವಾದ ಪರಿಹಾರವನ್ನು ನೀಡಲು ಇಲ್ಲಿನ ಧಾರ್ಮಿಕ ಮುಖಂಡರು, ಮಂದಿರದ ಅರ್ಚಕರು ಮತ್ತು ಮಸೀದಿಯ ಧಾರ್ಮಿಕ ಮುಖ್ಯಸ್ಥರು ಮುಂದಾಗಿದ್ದಾರೆ.

ಶ್ರೀ ರಾಮ ಜಾನಕಿ ಮಂದಿರ ಮತ್ತು ಸುನ್ನಿ ಜಾಮಾ ಮಸೀದಿ ಎರಡೂ ಕಡೆಗಳಲ್ಲಿ ಸಹಾ ಏಕಕಾಲದಲ್ಲಿ ಲೌಡ್ ಸ್ಪೀಕರ್ ಗಳನ್ನು ತೆಗೆದು ಹಾಕಿದ್ದಾರೆ. ಈ ಮೂಲಕ ಎರಡು ಪ್ರಮುಖ ಧಾರ್ಮಿಕ ಸ್ಥಳಗಳ ಮುಖಂಡರು ಸಮಾಜದಲ್ಲಿ ಒಂದು ಸಾಮರಸ್ಯವನ್ನು ಮೆರೆಯುವ ಕಡೆಗೆ ಹೆಜ್ಜೆಯನ್ನು ಇಟ್ಟಿದ್ದಾರೆ. ಈ ಮೂಲಕ ಲೌಡ್ ಸ್ಪೀಕರ್ ವಿಚಾರವಾಗಿ ಎದ್ದಿರುವ ವಿ ವಾ ದಕ್ಕೆ ಒಂದು ಶಾಂತಿಯುತವಾದಂತಹ ಪರಿಹಾರವನ್ನು ಕಂಡುಕೊಂಡು ಮಾದರಿಯಾಗಿದ್ದಾರೆ.‌

Leave a Reply

Your email address will not be published.