HomeEntertainmentಕಾರು ಮೇಲೆ ಯಾರೂ ಕಲ್ಲು ಎಸೆದಿಲ್ಲ: ಸುಳ್ಳು ಸುದ್ದಿ ಹರಡಬೇಡಿ ಎಂದು ಫೈರ್ ಆದ ಮಂಗ್ಲಿ...

ಕಾರು ಮೇಲೆ ಯಾರೂ ಕಲ್ಲು ಎಸೆದಿಲ್ಲ: ಸುಳ್ಳು ಸುದ್ದಿ ಹರಡಬೇಡಿ ಎಂದು ಫೈರ್ ಆದ ಮಂಗ್ಲಿ ಕೊಟ್ರು ಸ್ಪಷ್ಟನೆ

ಕೆಲವೇ ದಿನಗಳ ಹಿಂದೆ ಬಳ್ಳಾರಿಯಲ್ಲಿ ನಡೆದ ಬಳ್ಳಾರಿ ಉತ್ಸವ(Bellary Utsav), ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್(Puneet Raj Kumar) ಅವರ ಪುತ್ಥಳಿ ಅನಾವರಣ ವೇಳೆ, ಈ ಉತ್ಸವಕ್ಕೆ ಹಾಜರಾಗಿದ್ದ ಗಾಯಕಿ ಮಂಗ್ಲಿ(Singer Mangli) ಕುರಿತಾದ ವಿಚಾರವೊಂದು ಮಾದ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಹೌದು, ಬಳ್ಳಾರಿ ಉತ್ಸವದಲ್ಲಿ ತನ್ನ ಹಾಡುಗಳ ಮೂಲಕ ಸಂಗೀತ ಪ್ರಿಯರನ್ನು ರಂಜಿಸಲು ಬಂದಿದ್ದ ಮಂಗ್ಲಿ ಅವರಿಗೆ ಒಂದು ಸಮಸ್ಯೆ ಎದುರಾಗಿತ್ತು ಎನ್ನುವ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು, ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳು ಸಹಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಂದಿತ್ತು.

ಬಳ್ಳಾರಿ ಉತ್ಸವದ ವೇಳೆ ಕಿಡಿಗೇಡಿಗಳು ಮಂಗ್ಲಿ ಅವರ ಕಾರಿಗೆ(Mangli Car Attack) ಮುತ್ತಿಗೆಯನ್ನು ಹಾಕಿದ್ದರು, ಅನಂತರ ಕಲ್ಲು ತೂರಾಟ ಮಾಡಿದ್ದರು, ಮೇಕಪ್ ಟೆಂಟ್ ಬಳಿ ಪೋಲಿಸರು ಯುವಕರ ಮೇಲೆ ಲಘು ಲಾ ಠಿ ಪ್ರ ಹಾ ರ ಮಾಡಿದ್ದರು ಎನ್ನುವ ಸುದ್ದಿಗಳಾಗಿದ್ದವು. ಅಲ್ಲದೇ ಯುವಕರ ಕಲ್ಲು ತೂರಾಟದ ಪರಿಣಾಮವಾಗಿ ಮಂಗ್ಲಿ ಅವರ ಕಾರಿನ ಗಾಜು ಪುಡಿ ಪುಡಿಯಾಗಿತ್ತು ಎನ್ನುವ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈಗ ಈ ಸುದ್ದಿಯ ಕುರಿತಾಗಿ ಮಂಗ್ಲಿ ಸ್ವತಃ ತಾನೇ ಸ್ಪಷ್ಟನೆ ನೀಡಿದ್ದಾರೆ.

ನಟಿ ಮಂಗ್ಲಿ ಬಳ್ಳಾರಿ ಉತ್ಸವದಲ್ಲಿ ಭಾಗಿಯಾಗಿದ್ದ ವೇಳೆ ಅವರು ವೇದಿಕೆ ಇಳಿದು ಬರುವಾಗಲೇ ಅವರನ್ನು ನೋಡಲು ಯುವಕರ ದಂಡು ಮುಗಿ ಬಿದ್ದಿತ್ತು, ಅನಂತರ ವೇದಿಕೆ ಹಿಂಭಾಗದ ಮೇಕಪ್ ಟೆಂಟ್ ಮೇಲೆ ಯುವಕರ ಗುಂಪು ಬಂದು ಉಂಟಾದ ಗದ್ದಲದಲ್ಲಿ ಲಘು ಲಾ ಠಿ ಪ್ರಹಾರವನ್ನು(lathi charge) ಪೋಲಿಸರು ಮಾಡಿದ್ದರು. ಅನಂತರ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿ ಗಾಯಕಿಯ ಕಾರಿನ ಗಾಜು ಒಡೆದಿದ್ದರು ಎನ್ನಲಾಗಿತ್ತು.

ಇದನ್ನೂ ಓದಿ: ಪಠಾಣ್ vs ಕ್ರಾಂತಿ: ಬೆಂಗಳೂರಿನಲ್ಲೇ ಅಡ್ವಾನ್ಸ್ ಬುಕ್ಕಿಂಗ್ ನಲ್ಲಿ ಕ್ರಾಂತಿಯನ್ನು ಹಿಂದಿಕ್ಕಿದ ಪಠಾಣ್! ಏನಿದು ಶಾಕಿಂಗ್ ಸುದ್ದಿ?

ಈ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಸ್ಪಷ್ಟನೆ ನೀಡಿರುವ ಮಂಗ್ಲಿ(Mangli clarification), “ನನ್ನ ಕಾರಿನ ಮೇಲೆ ಕಲ್ಲು ತೂರಾಟ ಮಾಡಲಾಗಿದೆ ಎನ್ನುವುದು ಸುಳ್ಳು, ಅದೊಂದು ಗಾಳಿ ಸುದ್ದಿ. ಅಂತಹ ಘಟನೆ ನಡೆದಿಲ್ಲ. ನನ್ನ ಇಮೇಜ್ ಹಾಳು ಮಾಡಲು ಇಂತಹ ಸುದ್ದಿ ಹಬ್ಬಿಸಿದ್ದಾರೆ. ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಪೋಲಿಸ್ ಇಲಾಖೆ ನನ್ನನ್ನು ಗೌರವದಿಂದ ನೋಡಿಕೊಂಡಿದ್ದು, ಲಾಠಿ ಚಾ ರ್ಜ್ ನಡೆದಿಲ್ಲ. ಸುಳ್ಳು ಸುದ್ದಿ ಹಬ್ಬಿಸಬೇಡಿ” ಎಂದು ಹೇಳಿದ್ದಾರೆ.

ಬಳ್ಳಾರಿ ಜಿಲ್ಲಾ ಎಸ್ಪಿ ರಂಜಿತ್ ಕುಮಾರ್ ಬಂಡಾರ (Ranjith Kumar Bandara) ಅವರು ಮಾತನಾಡಿ, ಕಾರಿನ ಮೇಲೆ ಯಾವುದೋ ವಸ್ತು ಬಿದ್ದ ಕಾರಣಕ್ಕೆ ಅದರ ಗಾಜು ಒಡೆದಿದೆ. ಗಾಯಕಿಯ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ ಎನ್ನುವುದು ಸುಳ್ಳು, ಇದೊಂದು ಸುಳ್ಳು ಸುದ್ದಿ, ಆ ರೀತಿ ಘಟನೆ ನಡೆದಿಲ್ಲ, ಪೋಲಿಸರು ಮತ್ತು ಅಭಿಮಾನಿಗಳ ನಡುವೆ ಯಾವುದೇ ಮಾತಿನ ಚ ಕ ಮಕಿ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಗಾಯಕಿ ಮಂಗ್ಲಿ(singer Mangli) ಚಿಕ್ಕಬಳ್ಳಾಪುರ ಉತ್ಸವದಲ್ಲಿ ಭಾಗಿಯಾಗಿದ್ದ ವೇಳೆ, ಕನ್ನಡ ಯಾಕೆ.? ತೆಲುಗು ಬರುತ್ತೆ, ಎಂದು ಹೇಳಿಕೆ ನೀಡಿದ್ದು ಕನ್ನಡಿಗರ ಕೋಪಕ್ಕೆ ಕಾರಣವಾಗಿತ್ತು. ಮಂಗ್ಲಿ ಕನ್ನಡಿಗರಿಗೆ ಅಗೌರವ ತೋರಿದ್ದಾರೆ ಎನ್ನುವ ಕಾರಣಕ್ಕೆ ಬಳ್ಳಾರಿ ಉತ್ಸವದ ವೇಳೆ ಕನ್ನಡಿಗರು ಅವರ ಕಾರಿನ ಮೇಲೆ ಕಲ್ಲು ತೂರಾಟ ಮಾಡಿದ್ದರು ಎಂದು ಹೇಳಲಾಗಿತ್ತು. ಆದರೆ ಈಗ ಎಲ್ಲದಕ್ಕೂ ಸ್ಪಷ್ಟನೆ ಸಿಕ್ಕಿದೆ.

- Advertisment -