Mangli: ತೆಲುಗಿನಲ್ಲಿ ಸಾಕಷ್ಟು ಹೆಸರನ್ನು ಮಾಡಿರುವ ಗಾಯಕಿ ಮಂಗ್ಲಿ(Singer Mangli) ಕನ್ನಡ ಹಾಡಿನ ಮೂಲಕ ಇಲ್ಲಿನವರಿಗೂ ಸಹಾ ಪರಿಚಯವಾಗಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲಿ ಹಾಡುಗಳನ್ನು ಹಾಡುವ ಮೂಲಕ ಇತ್ತೀಚಿನ ದಿನಗಳಲ್ಲಿ ಮಂಗ್ಲಿ(Mangli) ಬಹುಭಾಷಾ ಗಾಯಕಿಯಾಗಿ ಸಹಾ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಾರೆ. ಮಂಗ್ಲಿ ಅವರು ವಿಭಿನ್ನ ಶೈಲಿಯ ಗಾಯನಕ್ಕೆ ಫಿದಾ ಆಗಿರುವವರ ಸಂಖ್ಯೆ ಸಹಾ ಹೆಚ್ಚಾಗಿಯೇ ಇದೆ. ಕರ್ನಾಟಕದಲ್ಲೂ ಮಂಗ್ಲಿ ಗಾಯನ ಮೆಚ್ಚಿರುವ ಅಭಿಮಾನಿಗಳು ಇದ್ದು, ಅದಕ್ಕೆ ಸಾಕ್ಷಿ ಎನ್ನುವಂತೆ ಇತ್ತೀಚಿಗೆ ಅವರು ಚಿಕ್ಕಬಳ್ಳಾಪುರ ಉತ್ಸವದಲ್ಲಿ ಭಾಗವಹಿಸಿದ್ದರು. ಇದೀಗ ಬಳ್ಳಾರಿ ಉತ್ಸವಕ್ಕೆ ಅವರು ಆಗಮಿಸಿದ್ದರು.
ಮಂಗ್ಲಿ ಅವರು ಬಳ್ಳಾರಿ ಉತ್ಸವದಲ್ಲಿ(Bellary utsava) ಹಾಡಿ, ಅಭಿಮಾನಿಗಳನ್ನು ಮತ್ತು ಸಂಗೀತ ಪ್ರಿಯರನ್ನು ರಂಜಿಸಲು ಆಗಮಿಸಿದ್ದರು. ಆದರೆ ಈ ವೇಳೆಯಲ್ಲಿ ಮಂಗ್ಲಿ ಅವರ ಕಾರಿನ ಮೇಲೆ ಧಾ ಳಿ ನಡೆಸಿರುವ ಕಿಡಿಗೇಡಿಗಳು, ಗಾಯಕಿಯ ಕಾರಿನ ಗಾಜನ್ನು ಒಡೆದು ಹಾಕಿದ್ದಾರೆ. ಈ ಘಟನೆಯು ಶನಿವಾರ ರಾತ್ರಿ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆದಿದೆ. ವೇದಿಕೆ ಮೇಲೆ ಹಾಡು ಹೇಳಿ ಮುಗಿಸಿದ ಮಂಗ್ಲಿ ಅಲ್ಲಿಂದ ಕೆಳಗೆ ಇಳಿದು ಬರುವಾಗ ಅವರನ್ನು ನೋಡಲು ಯುವಕರು ಮುಗಿ ಬಿದ್ದಿದ್ದರು ಎನ್ನಲಾಗಿದೆ.
ಅದು ಮಾತ್ರವೇ ಅಲ್ಲದೇ ವೇದಿಕೆಯ ಹಿಂಭಾಗದಲ್ಲಿ ಇದ್ದ ಮೇಕಪ್ ಟೆಂಟ್ ಗೆ ಸಹಾ ಪುಂಡರು ನುಗ್ಗಿದ್ದರು ಎನ್ನಲಾಗಿದ್ದು, ಈ ವೇಳೆ ಅವರನ್ನು ನಿಯಂತ್ರಣ ಮಾಡಲು ಪೋಲಿಸರು ಲಘು ಲಾ ಠಿ ಪ್ರಹಾರವನ್ನು ಮಾಡಬೇಕಾಯಿತು. ನಂತರ ಮಂಗ್ಲಿ ಹೋಗುತ್ತಿದ್ದ ಕಾರಿಗೆ ಪುಂಡರು ಕಲ್ಲನ್ನು ಎಸೆದಿದ್ದಾರೆ. ಇದರಿಂದಾಗಿ ಕಾರಿನ ಗಾಜು ಒಡೆದಿದೆ ಎನ್ನಲಾಗಿದೆ. ಬಳ್ಳಾರಿ ಉತ್ಸವ ಬಹಳ ಅದ್ದೂರಿಯಾಗಿ ನಡೆಯುತ್ತಿದ್ದು, ಅನುಶ್ರೀ, ಅರ್ಜುನ್ ಜನ್ಯಾ ಇನ್ನೂ ಮೊದಲಾದ ಜನಪ್ರಿಯ ಸೆಲೆಬ್ರಿಟಿಗಳು ಈ ಉತ್ಸವದಲ್ಲಿ ಭಾಗವಹಿಸಿದ್ದಾರೆ ಎನ್ನಲಾಗಿದೆ.