ಮಂಗಳ ಗೌರಿ ಮದುವೆ ಸೀರಿಯಲ್ ಪ್ರೇಕ್ಷಕರಿಗೆ ಶೀಘ್ರದಲ್ಲೇ ಕಾದಿದೆ ದೊಡ್ಡ ಶಾಕ್: ಇದ್ರಿಂದ ಬೇಸರ ಆದರೂ ಆಗಬಹುದು

Written by Soma Shekar

Published on:

---Join Our Channel---

ಕನ್ನಡ ಕಿರುತೆರೆ ಎಂದ ಕೂಡಲೇ ಮೊದಲು ನೆನಪಾಗುವುದು ಸೀರಿಯಲ್ ಗಳು. ವಿವಿಧ ಖಾಸಗಿ ವಾಹಿನಿಗಳಲ್ಲಿ ಹಲವು ಸೀರಿಯಲ್ ಗಳು ಪ್ರಸಾರವಾಗುತ್ತಿದ್ದು, ಇವುಗಳಲ್ಲಿ ಕೆಲವು ಸೀರಿಯಲ್ ಗಳು ಜನಪ್ರಿಯತೆಯ ಉತ್ತುಂಗವನ್ನು ಏರಿದೆ. ಟಿ ಆರ್ ಪಿ ಗಳಿಕೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಮೂಲಕ ಟಾಪ್ ಸೀರಿಯಲ್ ಗಳಾಗಿ ಹೊರಹೊಮ್ಮಿವೆ. ಜನರ ಮನಸ್ಸನ್ನು ರಂಜಿಸುತ್ತಿವೆ ಹಾಗೂ ಮನೆ ಮನೆ ಮಾತಾಗಿವೆ. ಇಂತಹ ಸೀರಿಯಲ್ ಗಳ ಕಲಾವಿದರ ಜನಪ್ರಿಯತೆ ಕೂಡಾ ಕಡಿಮೆಯೇನಿಲ್ಲ.

ಕಿರುತೆರೆಯ ಜನಪ್ರಿಯ ಸೀರಿಯಲ್ ಗಳಲ್ಲಿನ ತಮ್ಮ ಪಾತ್ರಗಳ ಮೂಲಕವೇ ಅನೇಕ ಕಲಾವಿದರು ಜನರ ಆದರಾಭಿಮಾನಗಳನ್ನು ಗಳಿಸಿಕೊಂಡಿದ್ದಾರೆ. ಪಾತ್ರಗಳ ಮೂಲಕವೇ ಗುರ್ತಿಸಲ್ಪಡುತ್ತಾರೆ. ಇಂತಹ ಟಾಪ್ ಸೀರಿಯಲ್ ಗಳಲ್ಲಿ ಒಂದಾಗಿ, ಕನ್ನಡ ಕಿರುತೆರೆ ಪ್ರೇಕ್ಷಕರ ಮನಸ್ಸನ್ನು ಗೆದ್ದು ಮುಂದುವರೆದಿರುವ ಸೀರಿಯಲ್ ಗಳಲ್ಲಿ ಮಂಗಳ ಗೌರಿ ಮದುವೆ ಸೀರಿಯಲ್ ಕೂಡಾ ಒಂದಾಗಿದೆ. ಇಂತಹ ಜನಪ್ರಿಯ ಸೀರಿಯಲ್ ನ ಬಗ್ಗೆ ಒಂದು ಕುತೂಹಲಕಾರಿ ಸುದ್ದಿ ಹೊರ ಬಂದಿದ್ದು, ಅಭಿಮಾನಿಗಳಿಗೆ ಕೊಂಚ ಬೇಸರ ಮೂಡಿಸಿದೆ.

ಮಂಗಳ ಗೌರಿ ಮದುವೆ ಧಾರಾವಾಹಿಯ ಲೀಡ್ ರೋಲ್ ನಲ್ಲಿ ಅಂದರೆ ಇನ್ಸ್‌ಪೆಕ್ಟರ್ ರಾಜೀವ್ ಪಾತ್ರದ ಮೂಲಕ ಹೆಸರಾಗಿರುವ ನಟ ಗಗನ್ ಚಿನ್ನಪ್ಪ ಅವರು ಈ ಸೀರಿಯಲ್ ನಿಂದ ಹೊರಗೆ ಬರಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡಿದೆ. ಉದ್ಯಮ ವರದಿಗಳ ಪ್ರಕಾರ ನಟ ಗಗನ್ ಚಿನ್ನಪ್ಪ ಅವರು ಮಂಗಳ ಗೌರಿ ಮದುವೆ ಸೀರಿಯಲ್ ನ ತಮ್ಮ ಪಾತ್ರಕ್ಕೆ ಗುಡ್ ಬೈ ಹೇಳುತ್ತಿದ್ದಾರೆ ಎನ್ನಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ಎಲ್ಲೆಡೆ ಸುತ್ತುತ್ತಿದೆ.

ಗಗನ್ ಚಿನ್ನಪ್ಪ ಅವರು ಸೀರಿಯಲ್ ನಿಂದ ಹೊರ ಬರುವರು ಎನ್ನುವ ಸುದ್ದಿಯಿಂದ ಅವರ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಇನ್ನು ಈ ಬಗ್ಗೆ ವಾಹಿನಿಯು ಅಧಿಕೃತವಾಗಿ ಹೇಳಿಲ್ಲವಾದರೂ, ಶೀಘ್ರದಲ್ಲೇ ಬದಲಾವಣೆ ಪ್ರೇಕ್ಷಕರ ಕಣ್ಮುಂದೆ ಬರಲಿದೆ ಎನ್ನಲಾಗಿದೆ. ಗಗನ್ ಚಿನ್ನಪ್ಪ ಈ ಸೀರಿಯಲ್ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರು ನಟನೆಗೆ ಈ ಪಾತ್ರದ ಮೂಲಕವೇ ಪ್ರವೇಶ ಮಾಡಿದ್ದು ಹೌದು. ಇನ್ನು ಗಗನ್ ಅವರ ಪಾತ್ರಕ್ಕೆ ಬರುವ ನಟ ಯಾರು ಎನ್ನುವುದಕ್ಕೆ ಉತ್ತರ ಕಾದು ನೋಡಬೇಕಿದೆ.

Leave a Comment