ಮಂಗಳವಾರ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ: ಮಾಡಿದರೆ ಸಂಕಷ್ಟಗಳಿಗೆ ಗುರಿಯಾಗುವಿರಿ
ವಾರದ ಮೂರನೇ ದಿನ ಮಂಗಳವಾರ. ಈ ದಿನವು ದುರ್ಗಾದೇವಿ ಮತ್ತು ಆಂಜನೇಯಸ್ವಾಮಿಗೆ ಮೀಸಲಾದ ದಿನ. ಮಂಗಳವಾರ ಹಲವು ಭಕ್ತರು ಕೆಲವೆಡೆ ಹನುಮಂತನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಮಂಗಳವಾರ ಕುಜ ಗ್ರಹಕ್ಕೆ ಸಂಬಂಧಿಸಿದ ದಿನ. ಮಂಗಳವಾರದಂದು ವೀರಾಂಜನೇಯನನ್ನು ವಿಶೇಷವಾಗಿ ಆರಾಧನೆ ಮಾಡಿದರೆ ಎಲ್ಲಾ ಕಷ್ಟಗಳಿಂದ ಹನುಮ ನಮ್ಮನ್ನು ರಕ್ಷಿಸುತ್ತಾನೆ ಎಂಬುದು ಭಕ್ತರ ನಂಬಿಕೆ. ಮಂಗಳವಾರದಂದು ವಿಶೇಷ ಪೂಜೆಗಳನ್ನು ಮಾಡುವುದರಿಂದ ಸಾಂಸಾರಿಕ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ ಎನ್ನಲಾಗಿದೆ.
ಮಂಗಳವಾದ ಒಂದಷ್ಟು ಕೆಲಸಗಳನ್ನು ಮಾಡುವುದಕ್ಕೆ ನಿಷೇಧವಿದೆ. ಒಂದು ವೇಳೆ ಮಂಗಳವಾರ ಅಂತಹ ಕೆಲಸಗಳನ್ನು ಮಾಡಿದಲ್ಲಿ ಇದರಿಂದಾಗಿ ಅಂಗಾರಕನ ಕೆಟ್ಟ ದೃಷ್ಟಿ ಬಿದ್ದು, ಅನಿಷ್ಟವು ನಡೆಯುತ್ತದೆ ಇದರ ಪರಿಣಾಮವಾಗಿ, ಮನೆಯಲ್ಲಿ, ಆರ್ಥಿಕ ಸಮಸ್ಯೆಗಳು ಹೆಚ್ಚಾಗುತ್ತವೆ. ಅದರಿಂದಾಗಿ ಮನೆಯಲ್ಲಿ ಶಾಂತಿಯ ಕೊರತೆ ಎದುರಾಗುವುದು. ಹಾಗಾದರೆ ಬನ್ನಿ ಮಂಗಳವಾರದಂದು ಯಾವ ಯಾವ ಕೆಲಸಗಳನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ.
ಸಾಲ ಮಾಡಬೇಡಿ : ಮಂಗಳವಾರದಂದು ಸಾಲ ಮಾಡುವ ತಪ್ಪನ್ನು ಎಂದೂ ಮಾಡಬೇಡಿ. ಶಾಸ್ತ್ರದ ಪ್ರಕಾರ ಮಂಗಳವಾರ ಮಾಡಿದ ಸಾಲವನ್ನು ಮರುಪಾವತಿ ಮಾಡುವುದು ಬಹಳ ಕಷ್ಟ ಎನ್ನಲಾಗಿದೆ. ಮಂಗಳವಾರದ ದಿನ ಸಾಲ ಮಾಡಿದರೆ ಅದರ ಹೊರೆ ಹೆಚ್ಚಾಗುವುದು ಎನ್ನಲಾಗಿದೆ, ಮರು ಪಾವತಿ ಮಾಡಲು ಅನೇಕ ಸಮಸ್ಯೆಗಳು ಎದುರಾಗುತ್ತವೆ ಎಂದು ಸಹಾ ಹೇಳಲಾಗಿದೆ.
ಹೊಸ ಬಟ್ಟೆ ಖರೀದಿಸಬೇಡಿ : ಮಂಗಳವಾರದ ದಿನ ಹೊಸ ಬಟ್ಟೆಯನ್ನು ಖರೀದಿ ಮಾಡಬೇಡಿ. ಅದೇ ರೀತಿ ಹೊಸ ಬಟ್ಟೆಯನ್ನು ಧರಿಸಬಾರದು. ಈ ದಿನದಂದು ಹೊಸ ಬಟ್ಟೆಗಳನ್ನು ಧರಿಸುವುದರಿಂದ ಇತರ ಕಾರಣಗಳಿಂದ ಬಟ್ಟೆ ಹರಿಯುತ್ತದೆ ಎನ್ನಲಾಗಿದ್ದು, ಈ ದಿನ ಧರಿಸುವ ಹೊಸ ಬಟ್ಟೆಗಳು ಹೆಚ್ಚು ಕಾಲ ಉಳಿಯುವುದಿಲ್ಲ. ಹಿಂದೂ ಸಂಪ್ರದಾಯದ ಪ್ರಕಾರ, ಶುಕ್ರವಾರದಂದು ಹೊಸ ಬಟ್ಟೆಗಳನ್ನು ಖರೀದಿಸುವುದು ಅಥವಾ ಧರಿಸುವುದು ಮಂಗಳಕರ ಎಂದು ಪರಿಗಣಿಸಲಾಗುತ್ತದೆ.
ಹೇರ್ ಕಟ್ : ಮಂಗಳವಾರ ಮರೆತೂ ಸಹಾ ಹೇರ್ ಕಟ್, ಶೇವಿಂಗ್, ಉಗುರು ಕತ್ತರಿಸುವುದು ಇಂತಹ ಕೆಲಸಗಳನ್ನು ಮಾಡಬೇಡಿ. ಏಕೆಂದರೆ ಈ ಕೆಲಸಗಳು ನಿಮ್ಮ ಆಯುಷ್ಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಮಂಗಳವಾರ ಶೇವಿಂಗ್ ಮಾಡುವುದರಿಂದ ದೈಹಿಕ ಸಮಸ್ಯೆಗಳು ಎದುರಾಗಬಹುದು. ಶಾಸ್ತ್ರಗಳ ಪ್ರಕಾರ ಮಂಗಳವಾರ ಈ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.