ಭೇಟಿಯಾಗದೇ ಅಪಾಯಕಾರಿ ಖೈದಿಗೆ ಹೃದಯ ಕೊಟ್ಟ ಸೈಕಾಲಜಿ ವಿದ್ಯಾರ್ಥಿನಿ, ಮಾಡಿದಳು ಅವನಿಗಾಗಿ ಇಂತ ಕೆಲಸ!!

0 4

ಪ್ರೀತಿ ಎನ್ನುವುದೊಂದು ಅದ್ಭುತವಾದ ಶಕ್ತಿ, ಪ್ರೀತಿ ಎನ್ನುವುದು ಯಾರಿಗೆ ಬೇಕಾದರೂ ಆಗಬಹುದು. ಪ್ರೀತಿ ಎನ್ನುವುದು ಧರ್ಮ, ಜಾತಿ, ಬಣ್ಣ, ಎತ್ತರ ಯಾವುದನ್ನೂ ನೋಡುವುದಿಲ್ಲ. ಪ್ರೀತಿ ಎಲ್ಲೋ, ಹೇಗೆ ಬೇಕಾದರೂ ಸಂಭವಿಸಬಹುದಾಗಿದೆ. ಕೆಲವರಿಗೆ ಯಾರದ್ದೂ ಧ್ವನಿ ಇಷ್ಟವಾಗಿ ಪ್ರೀತಿ ಹುಟ್ಟ ಬಹುದು, ಇನ್ನೂ ಕೆಲವರಿಗೆ ಯಾರದ್ದೋ ಕೂದಲು ಇಷ್ಟವಾಗಿ ಪ್ರೀತಿ ಹುಟ್ಟಬಹುದು. ಮತ್ತೆ ಕೆಲವರಿಗೆ ಯಾರದ್ದೋ ಕಣ್ಣಿನಲ್ಲಿನ ಕಾಂತಿಯು ಸೆಳೆದು ಪ್ರೇಮಾಂಕುರವಾಗಬಹುದು. ಇದೆಲ್ಲವುಗಳು ಮಾತ್ರವೇ ಅಲ್ಲದೇ ಒಬ್ಬರ ಅಭ್ಯಾಸ, ಹವ್ಯಾಸಗಳು ಸಹಾ ಇಷ್ಟವಾಗಿ ಪ್ರೇಮ ಮೂಡಬಹುದು.

ಈಗ ಇಂಗ್ಲೆಂಡ್ ನಲ್ಲಿ ಪ್ರೇಮಾಂಕುರದ ಒಂದು ವಿಚಿತ್ರ ಘಟನೆಯು ಈಗ ಸುದ್ದಿಯಾಗಿ, ಎಲ್ಲರ ಗಮನವನ್ನು ಸೆಳೆದಿದೆ. ದಿ ಮಿರರ್ ನ ವರದಿಯ ಪ್ರಕಾರ ಸೈಕಾಲಜಿಯ ಒಬ್ಬ ಬ್ರಿಟಿಪ್ ವಿದ್ಯಾರ್ಥಿನಿಗೆ ಒಬ್ಬ ಅ ಪಾ ಯ ಕಾರಿ ಖೈದಿಯೊಡನೆ ಪ್ರೇಮಾಂಕುರವಾಗಿದೆ. ಇಲ್ಲಿ ವಿಚಿತ್ರ ಏನೆಂದರೆ ಇಲ್ಲಿ ಸೈಕಾಲಜಿ ಓದುತ್ತಿರುವ ಯುವತಿಯು ಖೈದಿಯನ್ನು ಭೇಟಿ ಮಾಡದೆಯೇ ಆತನನ್ನು ಪ್ರೇಮಿಸಲು ಆರಂಭಿಸಿರುವುದು. ಹೀಗೆ ನೋಡದೆಯೇ ಖೈದಿಯನ್ನು ಪ್ರೇಮಿಸಿದ ಯುವತಿ ಆತ‌ನಿಗಾಗಿ ಮಾಡಿದ ಕೆಲಸ ಈಗ ಎಲ್ಲರಿಗೂ ಅಚ್ಚರಿ ಯನ್ನು ಉಂಟು ಮಾಡಿದೆ.

ಜೈಕಿ ಮೆಕ್ ಡೊನಾಲ್ಡ್ ಎನ್ನುವ 30 ವರ್ಷದ ಸೈಕಾಲಜಿ ವಿದ್ಯಾರ್ಥಿನಿಯು 2019 ರಲ್ಲಿ ಸೈನ್ ಎ ಪ್ರಿಸ್ನರ್ ನಲ್ಲಿ ಸೈನ್ ಅಪ್ ಆಗಿದ್ದಳು. ಇದರ ನಂತರ ಆಕೆ 31 ವರ್ಷ ವಯಸ್ಸಿನ ಅಲೆಕ್ಸಾಂಡರ್ ಹೆಸರಿನ ಖೈದಿಯೊಡನೆ ಮಾತನಾಡಲು ಆರಂಭಿಸಿದ್ದಾಳೆ. ಹೀಗೆ ಲೂಟಿ ಪ್ರಕರಣದಲ್ಲಿ ಬಂ ಧಿ ತನಾಗಿದ್ದ ಖೈ ದಿಯ ಜೊತೆ ಮಾತನಾಡುತ್ತಾ, ಮಾತನಾಡುತ್ತಾ ಜೈಕಿ ಗೆ ಅಲೆಕ್ಸಾಂಡರ್ ನ ಧ್ವನಿಯು ಬಹಳ ಇಷ್ಟವಾಗತೊಡಗಿದ್ದು, ಆತನ ಧ್ವನಿ ಅವಳನ್ನು ಆಕರ್ಷಿಸಿದೆ. ಜೈಕಿಗೆ ಅವನ ಧ್ವನಿ ಎಷ್ಟು ಇಷ್ಟವಾಯಿತೆಂದರೆ ಆತನಿಗೆ ತನ್ನ ಹೃದಯವನ್ನೇ ಕೊಟ್ಟು ಬಿಟ್ಟಳು.

ಖೈ ದಿ ಯನ್ನು ಭೇಟಿ ಮಾಡದೆಯೇ ಮೂರು ತಿಂಗಳ ಕಾಲ ಮಾತನಾಡುತ್ತಿದ್ದ ಜೈಕಿ ಗೆ ಅಲೆಕ್ಸಾಂಡರ್ ನ ಮೇಲೆ ಯಾವ ಮಟ್ಟಕ್ಕೆ ಪ್ರೀತಿ ಬೆಳೆಯಿತು ಎಂದರೆ ಆಕೆ ತನ್ನ ಎದೆಯ ಮೇಲೆ ಅಲೆಕ್ಸಾಂಡರ್ ನ ಹೆಸರನ್ನೇ ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ನಂತರ ಆಕೆ ತನ್ನ ಮನಸ್ಸನ್ನು ಗೆದ್ದ ಅ ಪ ರಾ ಧಿಯನ್ನು ಭೇಟಿ ಮಾಡಲು ಅಮೆರಿಕಾ ತಲುಪಿದ್ದಾಳೆ. ಮೊದಲ ಬಾರಿಗೆ ಜೈಲಿನಲ್ಲೇ ಭೇಟಿ ಮಾಡಿದ್ದಾರೆ ಈ ಜೋಡಿ. ಆಗ ಜೈಲಿನಲ್ಲೇ ಅಲೆಕ್ಸಾಂಡರ್ ಜೈಕಿ ಗೆ ಪ್ರಪೋಸ್ ಮಾಡಿದ್ದಾನೆ. ಅಲೆಕ್ಸಾಂಡರ್ ಶಿ ಕ್ಷೆ 2025 ಕ್ಕೆ ಪೂರ್ತಿಯಾಗಲಿದ್ದು, ಆತ ಹೊರಗೆ ಬಂದ ಮೇಲೆ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.