ಕೋಡಿ ಮಠದ ಶ್ರೀ ಗಳು ಎಂದರೆ ಇತ್ತೀಚಿನ ದಿನಗಳಲ್ಲಿ ತಟ್ಟನೆ ನೆನಪಾಗುವುದು ಅವರ ಭವಿಷ್ಯವಾಣಿಗಳು. ಹೌದು ಕೋಡಿ ಮಠದ ಶ್ರೀ ಗಳು ಆಗಾಗ ವಿವಿಧ ವಿಷಯಗಳ ಕುರಿತಾಗಿ ಭವಿಷ್ಯ ವಾಣಿ ನುಡಿಯುತ್ತಲೇ ಬರುತ್ತಿದ್ದಾರೆ. ವಿಶೇಷ ಏನೆಂದರೆ ಕೆಲವೊಂದು ವಿಷಯಗಳನ್ನು ಒಂದಕ್ಕೊಂದು ತಳಕು ಹಾಕಿ ನೋಡಿ ಕೆಲವರು ಕೋಡಿ ಮಠದ ಶ್ರೀ ಗಳ ಪ್ರತಿಯೊಂದು ಭವಿಷ್ಯವಾಣಿಯು ಸಹಾ ನಿಜವಾಗುತ್ತದೆ ಎನ್ನುತ್ತಾರೆ. ಪ್ರತಿ ಬಾರಿ ಕೋಡಿ ಶ್ರೀ ಗಳು ನುಡಿಯುವ ಭವಿಷ್ಯವಾಣಿ ಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಸದ್ದು ಸುದ್ದಿಯಾಗುತ್ತಲೇ ಇರುತ್ತದೆ.
ಇದೀಗ ಕೋಡಿ ಶ್ರೀಗಳು ಮತ್ತೊಮ್ಮೆ ಪ್ರಸ್ತುತ ಹವಾಮಾನ ವಿಷಯವಾಗಿ, ರಾಜ್ಯದ ರಾಜಕೀಯದ ಬಗ್ಗೆ ಹಾಗೂ ಮಾಹಾಮಾರಿ ಕೊರೊನಾ ವಿಚಾರವಾಗಿ ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಕೋಡಿ ಮಠದ ಶ್ರೀ ಗಳು ಹಾಸನ ಜಿಲ್ಲೆಯ, ಅರಸೀಕೆರೆ ತಾಲೂಕಿನಲ್ಲಿ ನಡೆದಂತಹ ಮಾಡಾಳು ಗೌರಮ್ಮನ ಉತ್ಸವದಲ್ಲಿ ಪಾಲ್ಗೊಂಡು ಅನಂತರ ಮಾದ್ಯಮಗಳ ಜೊತೆ ಮಾತನಾಡುತ್ತಾ ಕೆಲವು ಆಸಕ್ತಿಕರ ಹಾಗೂ ಆ ತಂ ಕ ಕಾರಿ ವಿಷಯಗಳನ್ನು ಮಾತನಾಡಿದ್ದಾರೆ.
ಕೋಡಿ ಮಠದ ಶ್ರೀ ಗಳು ಭವಿಷ್ಯವಾಣಿಯ ಮೂಲಕ ಒಂದು ಎಚ್ಚರಿಕೆಯನ್ನು ಸಹಾ ನೀಡಿದ್ದಾರೆ ಎನ್ನಬಹುದು. ಶ್ರೀ ಗಳು ಮೊದಲು ತಾನು ಈ ಹಿಂದೆ ನುಡಿದಿದ್ದ ಒಂದು ಭವಿಷ್ಯವಾಣಿಯನ್ನು ಕುರಿತಾಗಿ ಸ್ಮರಿಸುತ್ತಾ, ತಾನು ಈ ಹಿಂದೆ ಭೂಟಪದಿಂದ ಒಂದು ದೇಶ ಕಾಣೆಯಾಗುತ್ತದೆ ಎಂದು ನುಡಿದಿದ್ದೆ, ಈಗ ಆಫ್ಘಾನಿಸ್ತಾನ ದ ಪರಿಸ್ಥಿತಿ ನೋಡಿದರೆ ಅಂತಹ ಲಕ್ಷಣಗಳೇ ಕಾಣುತ್ತಿವೆ ಎಂದು ಅವರು ಉದಾಹರಿಸಿದ್ದಾರೆ.
ಆಫ್ಘನಿಸ್ತಾನದ ಪರಿಸ್ಥಿತಿ ಒಂದು ಭ ಯವನ್ನು ಹುಟ್ಟು ಹಾಕಿದ್ದು, ಇದು ಜಗತ್ತಿನಾದ್ಯಂತ ಇದ್ದು, ಇನ್ನೂ ಹೆಚ್ಚು ಕಾಡುತ್ತದೆ ಎಂದು ಭವಿಷ್ಯವಾಣಿ ನುಡಿದಿದ್ದು, ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗಲಿದ್ದು, ಭೂಮಿ ನಡುಗಲಿದೆ, ಹಾಗೂ ಆಪತ್ತುಗಳು ಇನ್ನೂ ಕೂಡಾ ಕಳೆದು ಹೋಗಿಲ್ಲ ಎಂದಿರುವ ಅವರು ಕಾರ್ತಿಕ ಮಾಸದ ವರೆಗೂ ಇದೆಲ್ಲಾ ಹೀಗೆ ಇರುತ್ತದೆ ಎಂದಿದ್ದಾರೆ.
ಇನ್ನು ಮಹಾಮಾರಿ ಕೊರೊನಾ ವಿಚಾರವಾಗಿ ಮಾತನಾಡಿದ ಅವರು ಕೊರೊನಾದ ಭೀ ತಿ ಯು ಇನ್ನೂ ಎರಡು ವರ್ಷಗಳು ಹೀಗೆ ಮುಂದುವರೆಯಲಿದ್ದು, ಅದು ರೂಪಾಂತರಗಳನ್ನು ಹೊಂದುತ್ತಾ ಸಾಗುತ್ತದೆ ಎನ್ನುವ ಭವಿಷ್ಯವಾಣಿ ನುಡಿಯುವ ಮೂಲಕ ಕೊರೊನಾ ಬಗ್ಗೆ ಜನರು ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ.
ಅಲ್ಲದೇ ಕೊರೊನಾ ದಿಂದ ಪ್ರಾಣ ಕಳೆದಕೊಂಡ ಅತೃಪ್ತ ಆತ್ಮಗಳು ಮುಂದೆ ಜನರನ್ನು ಕಾಡಲಿದೆ ಎಂದಿದ್ದು, ಇದರಿಂದಾಗಿ ಇನ್ನಷ್ಟು ಸಾವು ನೋವುಗಳು ಸಂಭವಿಸಲಿದೆ ಎಂದಿದ್ದಾರೆ. ಇನ್ನು ರಾಜಕೀಯದ ವಿಚಾರದಲ್ಲಿ ಅವರು ಮುಖ್ಯಮಂತ್ರಿ ಬೊಮ್ಮಾಯಿಯವರು ಗೊಂಬೆಯಾಗಿದ್ದು, ಸೂತ್ರಧಾರ ಯಡಿಯೂರಪ್ಪನವರಾಗಿದ್ದು ಸರ್ಕಾರ ನಡೆಸಿಕೊಂಡು ಹೋಗುತ್ತಾರೆ ಎಂದಿದ್ದಾರೆ.