ಭಿಕ್ಷೆ ಬೇಡಲಾರೆ ಎಂದು ಸ್ವಾಭಿಮಾನದ ಬದುಕಿಗಾಗಿ ಈ ಅಜ್ಜಿ ಮಾಡಿದ ಕೆಲಸ ನೋಡಿ ಹೇಗಿದೆ: ನಿಜವಾದ ಸ್ಪೂರ್ತಿ ಇವರು

Written by Soma Shekar

Published on:

---Join Our Channel---

ಜೀವನದಲ್ಲಿ ಸಮಸ್ಯೆಗಳು ಎದುರಾಯಿತು ಎಂದರೆ ಕೆಲವರು ಅಲ್ಲಿಗೆ ತಮ್ಮ ಜೀವನವೇ ಮುಗಿದು ಹೋಯಿತೆನ್ನುವ ಹಾಗೆ ತಮ್ಮ ಜೀವನದ ಮೇಲೆ ವಿರಕ್ತರಾಗಿಬಿಡುತ್ತಾರೆ. ಆಕಾಶವೇ ಕಳಚಿ ತಮ್ಮ ತಲೆಯ ಮೇಲೆ ಬಿತ್ತು ಎನ್ನುವ ಹಾಗೆ ಚಿಂತೆಯಲ್ಲೇ ಸಮಯ ಕಳೆಯುತ್ತಾ, ಜೀವನವನ್ನು ಇನ್ನಷ್ಟು ಮತ್ತಷ್ಟು ದುರ್ಬರ ಮಾಡಿಕೊಳ್ಳುತ್ತಾರೆ. ಆದರೆ ಇಂತಹವರ ನಡುವೆಯೇ ಕೆಲವರು ತಮ್ಮೆಲ್ಲಾ ಸವಾಲುಗಳನ್ನು ಎದುರಿಸಿ ಮುಂದೆ ಸಾಗುವ ಪ್ರಯತ್ನವನ್ನು ಮಾಡುತ್ತಾರೆ. ಆದರೆ ಅಂತಹವರು ಕಾಣುವುದು ತೀರಾ ವಿರಳವೆಂದೇ ಹೇಳಬಹುದು.

ಆದರೆ ಇಂತಹ ಜನರು ಜೀವನದಲ್ಲಿ ಎದುರಾಗುವು ಸಮಸ್ಯೆಗಳನ್ನು ನಗುತ್ತಲೇ ಎದುರಿಸಲು ಸಜ್ಜಾಗಿ ಬಿಡುತ್ತಾರೆ. ಸವಾಲುಗಳನ್ನು ಎದುರಿಸಿ ತಮ್ಮದೇ ಆದ ಸ್ವಾವಲಂಬಿ ಜೀವನವನ್ನು ಕಟ್ಟಿಕೊಳ್ಳಲು ಮುಂದಾಗುತ್ತಾರೆ ಹಾಗೂ ಆ ಮೂಲಕ ಅನೇಕರಿಗೆ ಜೀವನದ ಮೇಲೆ ಹತಾಶರಾಗದ ಹಾಗೆ ಸ್ಪೂರ್ತಿಯನ್ನು ನೀಡುತ್ತಾರೆ. ಪ್ರಸ್ತುತ ಸೋಷಿಯಲ್ ಮೀಡಿಯಾಗಳಲ್ಲಿ ಅಂತಹುದೇ ಸ್ಪೂರ್ತಿಯನ್ನು ನೀಡುವ ಸ್ವಾವಲಂಬಿ ಅಜ್ಜಿಯ ಫೋಟೋ ವೈರಲ್ ಆಗಿದೆ. ಪುಣೆಯ ರಸ್ತೆಗಳಲ್ಲಿ ಈ ಸ್ಪೂರ್ತಿಯ ಚಿಲುಮೆಯಾದ ಅಜ್ಜಿಯ ಜೀವನ ನಡೆದಿದೆ.

ಹೌದು, ಆ ಅಜ್ಜಿಯ ಹೆಸರು ರತನ್ ಎಂದಾಗಿದ್ದು, ಉದ್ಯಮಿಯೊಬ್ಬರಾದ ಶಿಖಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಜ್ಜಿಯ ಫೋಟೋವನ್ನು ಹಂಚಿಕೊಂಡು ಅದ್ಭುತ ವಿಚಾರವೊಂದನ್ನು ಬರೆದುಕೊಂಡಿದ್ದಾರೆ. ಪುಣೆಯ ರಸ್ತೆಗಳಲ್ಲಿ ಅಜ್ಜಿ ಪೆನ್ನುಗಳನ್ನು ಮಾರಾಟ ಮಾಡುತ್ತಿದ್ದು, ಅವರ ಬಾಕ್ಸ್ ಮೇಲೆ, ನಾನು ಭಿಕ್ಷೆ ಬೇಡಲು ಬಯಸುವುದಿಲ್ಲ. ಹತ್ತು ರೂಪಾಯಿ ಬೆಲೆಯ ಈ ನೀಲಿ ಪೆನ್ನುಗಳನ್ನು ಕೊಂಡುಕೊಳ್ಳಿ‌ ಧನ್ಯವಾದಗಳು, ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಬರೆದಿರುವ ಫಲಕ ಒಂದು ಇದೆ.

ಇನ್ನು ಫೋಟೋ ಶೇರ್ ಮಾಡಿಕೊಂಡವರು, ಅಜ್ಜಿಯ ಬಾಕ್ಸ್ ಮೇಲೆ ಬರೆದುಕೊಂಡ ಸಾಲುಗಳನ್ನು ನೋಡಿ ಆಶ್ಚರ್ಯವಾಯಿತು. ನಾನು ಅವರಿಂದ ಪೆನ್ನುಗಳನ್ನು ಕೊಂಡಾಗ ಅವರ ಮುಖದಲ್ಲಿ ಕಂಡ ನಗು ಹಾಗೂ ಧನ್ಯತಾ ಭಾವ ಕಂಡು ಖುಷಿಯಾಯಿತು. ಅವರ ಆ ಸಂತೋಷ ಹಾಗೂ ನಗು ಇನ್ನೂ ಹೆಚ್ಚು ಪೆನ್ನುಗಳನ್ನು ಖರೀದಿ ಮಾಡುವಂತೆ ಮಾಡಿತು. ಅವರು ನಮಗೆ ಹೆಚ್ಚು ಪೆನ್ನು ಖರೀದಿ ಮಾಡಿ ಎಂದು ಬಲವಂತ ಖಂಡಿತ ಮಾಡಲಿಲ್ಲ ಎಂದು ಅಪಾರವಾದ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಪುಣೆಯ ರಸ್ತೆ ರಸ್ತೆಗಳಲ್ಲಿ ಓಡಾಡಿ ಪೆನ್ನು ಮಾರುವ ಅಜ್ಜಿಯನ್ನು ನೋಡಿ ಅನೇಕರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.

Leave a Comment