ಬಿಗ್ ಬಾಸ್ ಓಟಿಟಿ ಕನ್ನಡದ ಮೊದಲನೇ ಸೀಸನ್ ನಲ್ಲಿ ಮೊದಲ ಸ್ಪರ್ಧಿಯಾಗಿ ಮನೆಗೆ ಎಂಟ್ರಿ ನೀಡಿದ್ದು ಆರ್ಯವರ್ಧನ್ ಗುರೂಜಿ. ಹೊರ ಜಗತ್ತಿನಲ್ಲಿ ಸಂಖ್ಯಾ ಶಾಸ್ತ್ರ ಮತ್ತು ಭವಿಷ್ಯ ಹೇಳುವ ವಿಚಾರದಲ್ಲಿ ಅವರು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಆದರೆ ಆರ್ಯವರ್ಧನ್ ಗುರೂಜಿ ಅವರ ಬಳಿ ಭವಿಷ್ಯ ಕೇಳುವುದು ಸಾಮಾನ್ಯ ಜನರಿಗೆ ಸಾಧ್ಯವಾಗದ ಕೆಲಸ ಏಕೆಂದರೆ ಅವರ ಬಳಿ ಭವಿಷ್ಯ ಕೇಳಲು ಹೋಗಬೇಕಾದರೆ ಕೈಯಲ್ಲಿ ಸಾವಿರಗಳಲ್ಲಿ ಹಣ ಇರಬೇಕು ಎಂದು ಜನರು ಮಾತನಾಡಿಕೊಳ್ಳುತ್ತಾರೆ. ಆದರೆ ಈಗ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಆಡಿದ ಮಾತುಗಳು ಜನರ ಮಾತು ನಿಜ ಎನ್ನುವ ಹಾಗೆ ಕಾಣುವಂತೆ ಮಾಡಿದೆ.
ಆರ್ಯವರ್ಧನ್ ಬಿಗ್ ಬಾಸ್ ಮನೆಗೆ ಬಂದ ಮೇಲೆ ಹಣದ ಬದಲಾಗಿ ತನ್ನ ಕುಟುಂಬದ ಬಗ್ಗೆ ಆಲೋಚನೆ ಪ್ರಾರಂಭ ಮಾಡಿದಂತೆ ಕಾಣುತ್ತಿದೆ. ಅವರು ಹಣದ ಬದಲಾಗಿ ಇದೀಗ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೋದ ಮೇಲೆ ಅವರು ತಮ್ಮ ಪತ್ನಿ ಹಾಗೂ ಮಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಆಲೋಚನೆಯನ್ನು ಮಾಡಿದ್ದಾರೆ. ಈ ವಾರ ಬೆಸ್ಟ್ ಕಂಟೆಸ್ಟೆಂಟ್ ಆಗಿರುವ ಅವರನ್ನು ಜನರು ಸೇಫ್ ಮಾಡಿದ್ದು, ಈ ವೇಳೆ ಭಾವುಕರಾದ ಆರ್ಯವರ್ಧನ್ ಗುರೂಜಿ ಅವರು, ಬಿಗ್ ಬಾಸ್ ಮನೆಗೆ ಬಂದಿದ್ದು ಬಹಳ ಸಂತೋಷವಾಗಿದೆ ಎಂದು ಹೇಳಿದ್ದಾರೆ.
ನಾನು ಮಲಗಲು ಮಾತ್ರ ಮನೆಗೆ ಹೋಗುತ್ತಿದೆ. ಊಟ ಕೂಡಾ ಹೊಟೇಲ್ ನಿಂದ ತರಿಸಿಕೊಳ್ಳುತ್ತಿದ್ದೆ. ದುಡ್ಡೇ ಜಗತ್ತೆಂದು ಬ್ಯುಸಿನೆಸ್ ಮೇಲೆಯೇ ಹೆಚ್ಚು ಗಮನವನ್ನು ಹರಿಸಿದ್ದೆ. ಬಿಗ್ ಬಾಸ್ ಮನೆಗೆ ಬಂದ ಮೇಲೆ ಅರ್ಥ ಆಗ್ತಿದೆ ಇದು ನಾಟಕದ ಪ್ರೀತಿಯೋ ಅಥವಾ ಒರಿಜಿನಲ್ ಪ್ರೀತಿಯೋ ಎನ್ನುವುದು. ಒರಿಜಿನಲ್ ಹಾಗೂ ನಾಟಕದ ಪ್ರೀತಿ ಬಗ್ಗೆ ತಿಳಿದ ಮೇಲೆ, ನಾನು ಇಲ್ಲಿಂದ ಹೋದ ಮೇಲೆ ಹೆಂಡತಿ ಮತ್ತು ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಮನೆಗೆ ಹೋದರೆ ಹೆಂಡತಿ ನೋಡಿಕೊಳ್ಳಬೇಕು, ಮಗಳಿಗಾಗಿ ದುಡಿಯಬೇಕು ಎಂದುಕೊಂಡಿದ್ದೆ. ಆದರೆ ಅವರನ್ನು ಪ್ರೀತಿ ಮಾಡಬೇಕೆಂದು ಇಲ್ಲಿ ಗೊತ್ತಾಗಿದೆ ಎಂದಿದ್ದಾರೆ.