ಭಾವುಕರಾಗಿ, ಕಣ್ಣೀರು ಹಾಕುತ್ತಾ ಜನಪ್ರಿಯ ಶೋನಿಂದ ಹೊರನಡೆದ ದಕ್ಷಿಣ ಸಿನಿರಂಗದ ಸ್ಟಾರ್ ನಟಿ!!

Entertainment Featured-Articles News
58 Views

ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದ ನಟಿ ರೋಜಾ ಸೆಲ್ವಮಣಿ. ಈ ನಟಿ ತೆಲುಗಿನಲ್ಲಿ ಸ್ಟಾರ್ ನಟಿಯಾಗಿ ದೊಡ್ಡ ಹೆಸರನ್ನು ಮಾಡಿದ್ದು, ಕನ್ನಡ ಭಾಷೆಯಲ್ಲೂ ಸಹಾ ನಟಿಸಿದ್ದಾರೆ. ದಕ್ಷಿಣದ ಭಾಷೆಗಳಲ್ಲಿ ನಟಿಸಿದ್ದರೂ ಹೆಚ್ಚು ಜನಪ್ರಿಯತೆ ಪಡೆದಿರುವುದು ತೆಲುಗಿನಲ್ಲಿ. ಸಿನಿಮಾ ನಟಿ ಮಾತ್ರವೇ ಅಲ್ಲದೇ ಕಿರುತೆರೆಯಲ್ಲಿ ಸಹಾ ರಿಯಾಲಿಟಿ ಶೋ ಗಳು, ಕೌಟುಂಬಿಕ ವ್ಯಾ ಜ್ಯ ಪರಿಹರಿಸುವ ಶೋ ಗಳು, ಕಾಮಿಡಿ ಶೋ ಜಡ್ಜ್ ಆಗಿ ಜನಪ್ರಿಯತೆ ಪಡೆದಿರುವ ಈ ನಟಿ, ಸಕ್ರಿಯ ರಾಜಕಾರಣಿ ಸಹಾ ಹೌದು.

ನಟಿ ರೋಜಾ ಅವರಿಗೆ ಕೆಲವೇ ದಿನಗಳ ಹಿಂದೆ ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿ ಜಗನ್ ಮೋಹನ್ ಅವರ ಕ್ಯಾಬಿನೆಟ್ ನಲ್ಲಿ ಪ್ರವಾಸ, ಸಂಸ್ಕೃತಿ ಮತ್ತು ಯುವಜನ ಸಂಕ್ಷೇಮ ಮಂತ್ರಿಯಾಗಿ ಸ್ಥಾನವನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತಿರುವ ನಟಿ, ಕಳೆದ ಹಲವು ವರ್ಷಗಳಿಂದ ತಾನು ಜಡ್ಜ್ ಆಗಿ ಕೂರುತ್ತಿದ್ದ ಜನಪ್ರಿಯ ಹಾಸ್ಯ ಕಾರ್ಯಕ್ರಮದಿಂದ ಹೊರ ನಡೆದಿದ್ದು, ಕಾರ್ಯಕ್ರಮದಲ್ಲಿ ಅವರಿಗೆ ಬೀಳ್ಕೊಡುಗೆ ನೀಡಿದ ದೃಶ್ಯ ಯೂಟ್ಯೂಬ್ ನಲ್ಲಿ ವೈರಲ್ ಆಗಿದೆ.

ನಟಿ ರೋಜಾ ಜಬರ್ದಸ್ತ್ ಕಾರ್ಯಕ್ರಮದೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡಿದ್ದರು. ಪ್ರೋಮೋದ ಕ್ಲಿಪ್ ನಲ್ಲಿ ನೋಡಿದಾಗ ಜಬರ್ದಸ್ತ್ ತಂಡವು ನಟಿಗೆ ಬೀಳ್ಕೊಡುಗೆ ನೀಡುವಾಗ ನಟಿ ರೋಜಾ ಭಾವುಕರಾಗಿದ್ದು, ತಾನು ಈ ಕಾರ್ಯಕ್ರಮದ ಜೊತೆ ಬೆಸೆದುಕೊಂಡಿರುವಾಗಲೇ ಎರಡು ಬಾರಿ ಎಂ ಎಲ್ ಎ ಆದೆ, ಈಗ ಮಂತ್ರಿ ಕೂಡಾ ಆಗಿದ್ದೇ‌ನೆ. ಹೊಸ ಜವಾಬ್ದಾರಿಗಳನ್ನು ನಿಭಾಯಿಸಲು ಶೋ ನಿಂದ ಹೊರ ಹೋಗುವುದು ಅನಿವಾರ್ಯವಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.

ವರ್ಷಗಳಿಂದ ಬೇರೆ ಜಡ್ಜ್ ಗಳು ಬದಲಾದರೂ ರೋಜಾ ಮಾತ್ರ ಬದಲಾಗದೇ ಶೋ ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಅವರು ಶೋ ನಿಂದ ಹೊರ ಬರಬೇಕಾದ ಅನಿವಾರ್ಯತೆ ಇದೆ. ಇನ್ನು ರೋಜಾ ಅವರ ಜಾಗಕ್ಕೆ ಇನ್ನು ಮುಂದೆ ತೆಲುಗಿನ ಮತ್ತೊಬ್ಬ ಜನಪ್ರಿಯ ಹಿರಿಯ ನಟಿ ಇಂದ್ರಜಾ ಬರುತ್ತಿದ್ದಾರೆ. ಇಂದ್ರಜ ಈಗಾಗಲೇ ಹಲವು ಸಲ ಶೋ ಗೆ ಅತಿಥಿ ಜಡ್ಜ್ ಆಗಿ ಬಂದಿದ್ದರು. ಇನ್ನು ಮುಂದೆ ರೋಜಾ ಅವರ ಸ್ಥಾನವನ್ನು ಇಂದ್ರಜ ತುಂಬಲಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *