ಭಾವೀ ಪತಿಗೆ ಷರತ್ತು ವಿಧಿಸಿದ ಸಾರಾ ಆಲಿ ಖಾನ್: ಷರತ್ತಿಗೆ ಒಪ್ಪದಿದ್ದರೆ ಮದುವೆಗೆ ನೋ ನೋ
ಮದುವೆ ವಿಚಾರ ಬಂದಾಗ ಪ್ರತಿಯೊಬ್ಬರಿಗೂ ಕೂಡಾ ನೂರಾರು ಕನಸುಗಳು ಹಾಗೂ ತಾವು ಮದುವೆಯಾಗುವವರ ಬಗ್ಗೆ ಕೆಲವು ನಿರೀಕ್ಷೆಗಳು ಇರುತ್ತವೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಮದುವೆ ಎನ್ನುವುದು ಒಂದು ಸುಂದರ ಸ್ವಪ್ನ, ಹುಟ್ಟಿ ಬೆಳೆದ ಮನೆಯಿಂದ ದೂರ, ಹೊಸ ಮನೆ, ಹೊಸ ಜನರ ನಡುವೆ ಹೊಸ ಬದುಕನ್ನು ಕಟ್ಟಿಕೊಳ್ಳುವತ್ತ ಅಡಿ ಇಡುವುದರಿಂದ ಮದುವೆ ಎಂದಾಗ ಸಹಜವಾಗಿಯೇ ಒಂದು ಭ ಯ, ಆ ತಂ ಕ ಹಾಗೂ ಅದರ ಜೊತೆಗೆ ಹೊಸ ನಿರೀಕ್ಷೆಗಳು ಕೂಡಾ ಇರುತ್ತವೆ. ಆದರೆ ಬಾಲಿವುಡ್ ಬೆಡಗಿ ಸಾರಾ ಆಲಿ ಖಾನ್ ಈ ವಿಚಾರದಲ್ಲಿ ಸ್ವಲ್ಪ ಭಿನ್ನವಾಗಿದ್ದಾರೆ.
ಹೌದು, ಸಾರಾ ಈ ವಿಚಾರದಲ್ಲಿ ಯಾಕೆ ಭಿನ್ನ ಎನ್ನುವುದಾದರೆ, ಸಾರಾ ಗೆ ಮದುವೆಯ ಬಗ್ಗೆ ಕನಸುಗಳೇನೋ ಇದೆ, ಆದರೆ ಅದರ ಜೊತೆಗೆ ಸಾರಾ ಒಂದು ಷರತ್ತನ್ನು ಕೂಡಾ ತಾನು ಮದುವೆಯಾಗುವ ಹುಡುಗನಿಗೆ ವಿಧಿಸಿದ್ದು, ಅದನ್ನು ಒಪ್ಪಿದ್ದರೆ ಮಾತ್ರ ಮದುವೆ ಎಂದಿದ್ದಾರೆ. ಸಾರಾ ಆಲಿ ಖಾನ್ ಅತರಂಗೀ ರೇ ಸಿನಿಮಾದಲ್ಲಿ ನಟಿಸಿದ್ದು, ಚಿತ್ರದ ಟ್ರೇಲರ್ ನಲ್ಲಿ ಸಾರಾ ಅಲಿ ಖಾನ್ ನಟನೆಯನ್ನು ನೋಡಿ ಪ್ರೇಕ್ಷಕರಿಗೆ ಒಳ್ಳೆ ಪ್ರತಿಕ್ರಿಯೆಗಳು ಬರುತ್ತಿವೆ. ಆನಂದ್ ಎಲ್ ರಾಯ್ ನಿರ್ದೇಶನದ ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಹಾಗೂ ತಮಿಳು ನಟ ಧನುಶ್ ಅವರು ಸಹಾ ನಟಿಸಿದ್ದಾರೆ.
ಪ್ರಸ್ತುತ ಈ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ ಸಾರಾ ಆಲಿ ಖಾನ್. ಸಿನಿಮಾ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಸಾರಾ ಈ ವೇಳೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಆಗಲೇ ಅವರು ತಾವು ಮದುವೆಯಾಗಲು ಬಯಸುವ ಹುಡುಗನ ಬಗ್ಗೆ ಹಾಗೂ ತನ್ನ ಷರತ್ತಿನ ಬಗ್ಗೆ ಹೇಳಿಕೊಂಡಿದ್ದಾರೆ. ನಟಿ ಸಾರಾ ಆಲಿ ಖಾನ್ ಬಾಲಿವುಡ್ ನ ಸ್ಟಾರ್ ಗಳಾದ ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ದಂಪತಿಯ ಮಗಳು. ಸೈಫ್ ಅಮೃತ ಸಿಂಗ್ ಗೆ ವಿಚ್ಛೇದನ ನೀಡಿದ ನಂತರ ಕರೀನಾ ಕಪೂರ್ ಅನ್ನು ವಿವಾಹವಾಗಿದ್ದಾರೆ.
ಸಾರಾ ಆಲಿ ಖಾನ್ ಹಾಗೂ ಅವರ ತಾಯಿ ಅಮೃತಾ ಸಿಂಗ್ ಜೊತೆಯಾಗಿಯೇ ಇದ್ದಾರೆ. ಸೈಫ್ ಅಮೃತಾ ರಿಂದ ದೂರವಾದ ಮೇಲೆ ಅಮ್ಮನಿಗೆ ಸಾರಾ ಹಾಗೂ ಅವರ ಸಹೋದರ ಇಬ್ಬರೇ ಜಗತ್ತು ಎಂದರೆ ತಪ್ಪಾಗಲಾರದು. ಹೀಗಾಗಿ ಸಾರಾ ಮದುವೆಯ ವಿಚಾರದಲ್ಲಿ ಸಹಾ ಒಂದು ನಿರ್ಧಾರವನ್ನು ಮಾಡಿದ್ದಾರೆ. ಸಾರಾ ಮಾತನಾಡುತ್ತಾ, ನನ್ನ ಅಮ್ಮನನ್ನು ಎಂದು ಒಂಟಿಯಾಗಿ ಬಿಡುವುದಿಲ್ಲ. ಆದ್ದರಿಂದಲೇ ನನ್ನನ್ನು ಮದುವೆಯಾಗುವ ಹುಡುಗ ನನ್ನ ಹಾಗೂ ನನ್ನ ಅಮ್ಮನ ಜೊತೆಗೆ ಇರಬೇಕು ಎಂದು ಹೇಳಿದ್ದಾರೆ.