ಭಾರೀ ಗಾತ್ರದ ಉಣ್ಣೆಯನ್ನು ಹೊತ್ತು ಅರಣ್ಯಗಳಲ್ಲಿ ಅಲೆಯುತ್ತಿದ್ದ ಕುರಿ: ನೋಡಿದವರು ಸಹಾ ದಂಗಾಗಿದ್ದರು.
ಆಸ್ಟ್ರೇಲಿಯಾದ ಕಾಡುಗಳಲ್ಲಿ ಸಿಕ್ಕಂತಹ ಒಂದು ಕುರಿ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಸುದ್ದಿಯಾಗಿದೆ. ಬಹಳಷ್ಟು ಜನರು ಈಗಾಗಲೇ ಈ ಕುರಿಯ ಫೋಟೋಗಳು ಹಾಗೂ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾಗಳ ಬೇರೆ ಬೇರೆ ಪ್ಲಾಟ್ ಫಾರಂ ಗಳಲ್ಲಿ ನೋಡಿ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಕುರಿಯೊಂದರ ಮೈ ಮೇಲಿನ ತುಪ್ಪಳ ವನ್ನು ತೆಗೆದಾಗ, ಅದು ಸುಮಾರು 4.5 ಕೆಜಿಗಳಷ್ಟು ಆಗಿರುತ್ತದೆ. ಇಲ್ಲವೇ ಅದೊಂದು ಉತ್ತಮ ಬ್ರೀಡ್ ನ ಕುರಿಯಾಗಿದ್ದರೆ ಇನ್ನೊಂದು ಸ್ವಲ್ಪ ಜಾಸ್ತಿ ತುಪ್ಪಳ ದೊರೆಯಬಹುದು. ಆದರೆ ಆಸ್ಟ್ರೇಲಿಯಾದ ಕಾಡುಗಳಲ್ಲಿ ಕಳೆದು ಹೋಗಿದ್ದ ಈ ಕುರಿಯ ಮೈ ಮೇಲೆ ಇದ್ದ ತುಪ್ಪಳದ ತೂಕ ಮಾತ್ರ ಸಾಮಾನ್ಯ ಖಂಡಿತ ಎಲ್ಲ ಎನ್ನಬಹುದಾಗಿದೆ.
ಬರಾಕ್ ಹೆಸರಿನ ಈ ಕುರಿಯ ಮೈಮೇಲಿಂದ ಒಮ್ಮೆಗೆ ಸುಮಾರು 35 ಕಿಲೋ ಗ್ರಾಂ ತುಪ್ಪಳ ಅಥವಾ ಉಣ್ಣೆಯನ್ನು ತೆಗೆಯಲಾಗಿದೆ. ಆಶ್ಚರ್ಯ ಎನಿಸಿದರೂ ಸಹಾ ಇದು ನಿಜ. ಆಸ್ಟ್ರೇಲಿಯಾದ ಕಾಡುಗಳಲ್ಲಿ ಓಡಾಡುತ್ತಿದ್ದ ಈ ಕುರಿಯನ್ನು ನೋಡಿದಂತಹ ಸಂದರ್ಭದಲ್ಲಿ ಜನರಿಗೆ ಅದೊಂದು ನಡೆದಾಡುತ್ತಿರುವ ಉಣ್ಣೆಯ ದೊಡ್ಡ ಉಂಡೆಯಂತೆ ಕಾಣುತ್ತಿತ್ತು. ಬರಾಕ್ ಕುರಿ ಮೇಲೆ ಯಾವ ಪ್ರಮಾಣದಲ್ಲಿ ಉಣ್ಣೆ ತುಂಬಿತ್ತು ಎಂದರೆ ಇದನ್ನು ನೋಡಿದಾಗ ಒಂದು ಕ್ಷಣ ನೋಡುಗ ದಂಗಾಗುತ್ತಿದ್ದ ಅಥವಾ ದೂರದಿಂದ ನೋಡಿದಾಗ ಭ ಯ ಪಟ್ಟಿದ್ದು ಸಹಾ ಉಂಟು ಎನ್ನಲಾಗಿದೆ.
ಇನ್ನು ಈ ಕುರಿಯ ವಿಷಯಕ್ಕೆ ಬಂದರೆ ಈ ಕುರಿಯು ಐದು ವರ್ಷಗಳ ಹಿಂದೆ ಅರಣ್ಯದಲ್ಲಿ ಮೇಯಲು ಹೋದಾಗ ತನ್ನ ಗುಂಪಿನಿಂದ ಬೇರ್ಪಟ್ಟಿತು. ಅದಕ್ಕೆ ಮರಳಿ ಬರಲು ದಾರಿ ತಿಳಿಯದ ಕಾರಣ ಕಾಡಿನಲ್ಲೇ ಅಲೆದಾಡುತ್ತಾ ಇತ್ತು ಎನ್ನಲಾಗಿದೆ. ಆಗಲೇ ಅದರ ಮೈಮೇಲೆ ಈ ಪ್ರಮಾಣದಲ್ಲಿ ತುಪ್ಪಳ ಸಂಗ್ರಹವಾಗಿದ್ದು, ದಿನಕಳೆದಂತೆ ತುಪ್ಪಳದ ಪ್ರಮಾಣ ಅಧಿಕವಾಗಿದ್ದು, ಕುರಿ ತನ್ನ ದೇಹದ ಮೇಲೆ ಭಾರೀ ಗಾತ್ರದ ತುಪ್ಪಳ ವನ್ನು ಹೊತ್ತು ಕೊಂಡು ತಿರುಗಾಡುತ್ತಿತ್ತು. ಕಾಡಿಗೆ ಹೋಗಿದ್ದ ತಂಡವೊಂದಕ್ಕೆ ಈ ಕುರಿಯು ವಿಕ್ಟೋರಿಯಾ ಸ್ಟೇಟ್ ಫಾರೆಸ್ಟ್ ನಲ್ಲಿ ದೊರೆತಿತ್ತು.
ದೇಹದ ಮೇಲೆ ದೊಡ್ಡ ಪ್ರಮಾಣದ ಉಣ್ಣೆಯ ಭಂಡಾರವನ್ನು ಹೊತ್ತು ತಿರುಗುತ್ತಾ ವಿಚಿತ್ರವಾಗಿ ಕಂಡ ಈ ಕುರಿಯನ್ನು ಅವರು ಪ್ರಾಣಿ ಸಂರಕ್ಷಣಾ ಸಂಸ್ಥೆಗೆ ತಂದೊಪ್ಪಿಸಿದ್ದಾರೆ. ಬರಾಕ್ ಹೆಸರಿನ ಈ ಕುರಿಯ ಬಗ್ಗೆ ಮಿಷನ್ ಫಾರ್ಮ್ ಸ್ಯಾನ್ಚರಿ ನ ಸಂಸ್ಥಾಪಕ ಪಾಮ್ ಅಹೆರ್ನ್ ಅವರು ಮಾತನಾಡುತ್ತಾ ಮೊದಲ ಬಾರಿಗೆ ಈ ಕುರಿಯನ್ನು ನೋಡಿದಾಗ ಇಷ್ಟು ಭಾರೀ ಗಾತ್ರದ ತುಪ್ಪಳದ ಕೆಳಗೆ ಕುರಿಯು ಇನ್ನೂ ಬದುಕಿದೆ ಎನ್ನುವುದನ್ನು ನಂಬಲಾಗಲಿಲ್ಲ ಎಂದು ಹೇಳಿದ್ದಾರೆ. ಐದು ವರ್ಷಗಳಿಂದ ಸಹಾ ಕಾಡಿನಲ್ಲೇ ಇದುದ್ದರಿಂದ ನಿರಂತರವಾಗಿ ಉಣ್ಣೆ ಬೆಳೆದು, ಅದನ್ನು ಕತ್ತರಿಸಿದ ಕಾರಣ ಈ ಗಾತ್ರದಲ್ಲಿ ಬೆಳೆದಿದೆ ಎಂದಿದ್ದಾರೆ.
ಪಾಮ್ ಅಹೆರ್ನ್ ಅವರು ಇದೇ ವೇಳೆ ಈ ಕುರಿಯು ತನ್ನ ಮೈ ಮೇಲಿದ್ದ ಭಾರೀ ಗಾತ್ರದ ಉಣ್ಣೆಯ ಭಾರದ ಕಾರಣದಿಂದ ಸರಿಯಾಗಿ ನಡೆಯುವುದಕ್ಕೆ ಸಹಾ ಕಷ್ಟ ಪಡುತ್ತಿತ್ತು, ಇನ್ನು ಸ್ವಲ್ಪ ದಿನ ಹಾಗೇ ಯಾರೂ ನೋಡದೇ ಇದ್ದಿದ್ದರೆ ಕುರಿಯು ಸಾಯುವ ಅವಕಾಶ ಸಹಾ ಇತ್ತು ಎಂದು ಹೇಳಿದ್ದಾರೆ. ಆದರೆ ಅದರ ಅದೃಷ್ಟ ಸೂಕ್ತ ಸಮಯದಲ್ಲಿ ಅದು ಕಾಣಿಸಿಕೊಂಡಿದ್ದು, ಅದರ ಮೈಮೇಲಿನ ಉಣ್ಣೆಯನ್ನು ಕತ್ತರಿಸಿದ ಮೇಲೆ ಅದು ಸುರಕ್ಷಿತವಾಗಿದೆ ಎಂದಿದ್ದಾರೆ. ಇಂತಹ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿರುವುದು ಇದೇ ಮೊದಲಲ್ಲ ಎನ್ನುವುದು ಕೂಡಾ ವಾಸ್ತವ.
ಈ ಹಿಂದೆ 2015 ರಲ್ಲಿ ಸಹಾ ಒಂದು ಕುರಿಯು ಹೀಗೆ ದೊರೆತಿತ್ತು ಎನ್ನಲಾಗಿದೆ. ಆಗ ಅದರ ಮೈಮೇಲೆ ಬರೋಬ್ಬರಿ 41 ಕೆಜಿ ತೂಕದ ಉಣ್ಣೆಯು ಸಂಗ್ರಹವಾಗಿತ್ತು ಎನ್ನಲಾಗಿದೆ. ಒಟ್ಟಾರೆ ಬರಾಕ್ ಕುರಿಯ ಮೈಮೇಲಿದ್ದ ಮೂವತ್ತೈದು ಕೆಜಿ ತೂಕದ ಉಣ್ಣೆಯನ್ನು ತೆಗೆದು ಅದಕ್ಕೆ ಹೊಸ ಜೀವನವನ್ನು ನೀಡಲಾಗಿದ್ದು, ಅದರ ಹಿಂದಿನ ಹಾಗೂ ಈಗಿನ ಫೋಟೋಗಳು ಹಾಗೂ ವೀಡಿಯೋಗಳು ಜನರ ಗಮನವನ್ನು ಸೆಳೆದಿದ್ದು, ಬಹಳಷ್ಟು ವೈರಲ್ ಸಹಾ ಆಗಿದೆ.