ಭಾರವಾದ ಮನಸ್ಸಿನಿಂದ ಸೊಸೆ ಸಮಂತಾ ಬಗ್ಗೆ ಭಾವುಕರಾದ ನಟ ನಾಗಾರ್ಜುನ

Entertainment Featured-Articles News
41 Views

ತಮ್ಮ ಮಗ ನಾಗಚೈತನ್ಯ ಹಾಗೂ ಸೊಸೆ ಸಮಂತಾ ವಿಚ್ಛೇದನದ ವಿಷಯವಾಗಿ ಹಿರಿಯ ನಟ ನಾಗಾರ್ಜುನ ಅವರು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಹಲವು ದಿನಗಳಿಂದಲೂ ನಾಗಚೈತನ್ಯ ಮತ್ತು ಸಮಂತ ನಡುವಿನ ಭಿನ್ನಾಭಿಪ್ರಾಯಗಳು, ಅವರು ಬೇರೆಯಾಗಲಿದ್ದಾರೆ ಎನ್ನುವ ವಿಚಾರಗಳು ಮಾದ್ಯಮಗಳಲ್ಲಿ ಸದ್ದು ಮಾಡುತ್ತಲೇ ಇದ್ದವು. ಆದರೆ ಕುಟುಂಬ ವರ್ಗದವರಾಗಲೀ, ನಾಗಚೈತನ್ಯ ಅಥವಾ ಸಮಂತಾ ಆಗಲೀ ಎಲ್ಲೂ ಈ ವಿಷಯ ಬಾಯಿ ಬಿಡದೇ ಕಳೆದೊಂದು ತಿಂಗಳಿನಿಂದಲೂ ಸಹಾ ಸುದ್ದಿ ಮಾದ್ಯಮಗಳಲ್ಲಿ ಏನೇ ಸುದ್ದಿಯಾದರೂ ಮೌನವಾಗಿಯೇ ಇದ್ದರು.

ಆದರೆ ಇಂದು ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ಕೂಡಾ ತಾವು ಬೇರೆಯಾಗುವ ನಿರ್ಧಾರವನ್ನು ಮಾಡಿರುವ ವಿಷಯವನ್ನು ಅಧಿಕೃತವಾಗಿ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಬರೆದುಕೊಂಡು ಎಲ್ಲಾ ವದಂತಿಗಳಿಗೆ ತೆರೆ ಎಳೆಯುತ್ತಲೇ, ಇಷ್ಟು ದಿನ ಹರಡಿದ್ದ ವದಂತಿಗಳೇ ನಿಜ ಎನ್ನುವ ವಾಸ್ತವ ಜನರು ಹಾಗೂ ಅಭಿಮಾನಿಗಳ ಮುಂದೆ ಇಟ್ಟು, ಇಷ್ಟು ದಿನ ಹರಡಿದ್ದ ಗಾಳಿ ಸುದ್ದಿಯೇ ಸತ್ಯ ಎನ್ನುವ ಸ್ಪಷ್ಟನೆ ನೀಡಿದರು‌.

ಇದಾದ ನಂತರ ನಟ ನಾಗಾರ್ಜುನ ಅವರು ಟ್ವಿಟರ್ ನಲ್ಲಿ ಒಂದು ಪೋಸ್ಟ್ ಹಾಕುವ ಮೂಲಕ ಈ ವಿಚಾರದಲ್ಲಿ ಮೌನವನ್ನು ಮುರಿದಿದ್ದಾರೆ. ಅವರು ತಮ್ಮ ಪೋಸ್ಟ್ ಮೂಲಕ ತಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ. ಇಷ್ಟು ದಿನ ಯಾವುದೇ ವಿಚಾರಗಳಿಗೂ, ಪ್ರಶ್ನೆಗಳಿಗೂ ಉತ್ತರ ನೀಡದೇ ಇದ್ದವರು ಇಂದು ಮಗ ಸೊಸೆಯ ವಿಚಾರವಾಗಿ ಮಾತನಾಡಿದ್ದಾರೆ. ಅವರ ವಿಚ್ಛೇದನದ ಬಗ್ಗೆ ಬೇಸರವನ್ನು ಹೊರ ಹಾಕಿದ್ದಾರೆ.

ನಾಗಾರ್ಜುನ ಅವರು ತಮ್ಮ ಪೋಸ್ಟ್ ನಲ್ಲಿ, “ಭಾರವಾದ ಹೃದಯದಿಂದ ನಾನು ಇದನ್ನು ಹೇಳುತ್ತೇನೆ! ಸ್ಯಾಮ್ ಮತ್ತು ಚೈ ನಡುವೆ ನಡೆದದ್ದು ಅತ್ಯಂತ ದುರದೃಷ್ಟಕರ. ಹೆಂಡತಿ ಮತ್ತು ಗಂಡನ ನಡುವೆ ಏನಾಗುತ್ತದೆ ಎಂಬುದು ತುಂಬಾ ವೈಯಕ್ತಿಕವಾಗಿದೆ. ಸ್ಯಾಮ್ ಮತ್ತು ಚೈ ಇಬ್ಬರೂ ನನಗೆ ಪ್ರಿಯರು, ನನ್ನ ಕುಟುಂಬವು ಯಾವಾಗಲೂ ಸ್ಯಾಮ್‌ನೊಂದಿಗೆ ಕಳೆದ ಕ್ಷಣಗಳನ್ನು ಇಷ್ಟ ಪಡುತ್ತದೆ ಮತ್ತು ಅವಳು ಯಾವಾಗಲೂ ನಮಗೆ ಪ್ರಿಯಳಾಗಿರುತ್ತಾಳೆ! ದೇವರು ಅವರಿಬ್ಬರಿಗೂ ಶಕ್ತಿಯನ್ನು ನೀಡಲಿ” ಎಂದಿದ್ದಾರೆ.

ನಾಗಾರ್ಜುನ ಅವರು ಹಾಕಿರುವ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು ಕೇವಲ ನಾಲ್ಕು ವರ್ಚಗಳಷ್ಟೇ ಆಗಿದೆ ಅವರು ಮದುವೆಯಾಗಿ, ಪ್ರೇಮಕ್ಕೆ, ವಿವಾಹಕ್ಕೆ ಬೆಲೆಯೇ ಇಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ. ಹೀಗೆ ಬೇರೆಯಾಗುವುದಕ್ಕೆ ಪ್ರೀತಿ, ಕೋಟಿ ಕೋಟಿ ಖರ್ಚು ಮಾಡಿ ಮದುವೆ ಇದೆಲ್ಲಾ ಬೇಕಾ ಎಂದು ಕೆಲವರು ಅಸಮಾಧಾನವನ್ನು ಹೊರ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಾಗಚೈತನ್ಯ ಮತ್ತು ಸಮಂತಾ ಫೋಟೋಗಳನ್ನು ಹಾಕಿ ಅನೇಕರು ಒಂದು ಪ್ರೇಮಾನುಬಂಧ ಮುಗಿದ ಕಥೆ ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *