ಭಾರತ ಹಿಂದೂ ರಾಷ್ಟ್ರವಾಗುತ್ತಿದ್ದು, ಜನರಿಗೆ ಇಲ್ಲಿ ಅಭದ್ರತೆ ಕಾಡಿದೆ: ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ

Entertainment Featured-Articles News
57 Views

ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಭಾರತವು ಹಿಂದೂ ರಾಷ್ಟ್ರವಾಗುತ್ತಿದ್ದು, ಜನರಿಗೆ ಇಲ್ಲಿ ಅಭದ್ರತೆಯನ್ನು ಕಾಡುತ್ತಿದೆ ಎನ್ನುವ ಮಾತನ್ನು ಹೇಳಿದ್ದಾರೆ. ಭಾರತ ಅಮೇರಿಕಾದ ಮುಸ್ಲಿಂ ಸಂಘಟನೆಯು ಆಯೋಜನೆ ಮಾಡಿದ್ದಂತಹ ವರ್ಚುವಲ್ ಕಾರ್ಯಕ್ರಮದಲ್ಲಿ ಭಾರತದಲ್ಲಿ ಮಾನವ ಹಕ್ಕುಗಳ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಮಾತನಾಡಿದ ವೇಳೆ ಹಮೀದ್ ಹನ್ಸಾರಿ ಅವರು ಕೆಲವು ಸೂಕ್ಷ್ಮವಾದ ಮಾತುಗಳನ್ನು ಆಡುತ್ತಾ, ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದು, ಅವರು ಆಡಿದ ಮಾತುಗಳೀಗ ಚರ್ಚೆಗೆ ಕಾರಣವಾಗಿದೆ.

ಅಮೇರಿಕಾದಲ್ಲಿ ಇರುವ ಒಂದು ಭಾರತ ಮೂಲದ ಮುಸ್ಲಿಂ ಸಂಘಟನೆಯು ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಹಮೀದ್ ಅನ್ಸಾರಿ ಅವರು ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಧರ್ಮದ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆಯುತ್ತಿದೆ. ಅಲ್ಲದೇ ದೇಶದಲ್ಲಿ ಅಲ್ಪ ಸಂಖ್ಯಾತರ ನಂಬಿಕೆಗಳಿಗೆ ಹಿತಾಸಕ್ತಿಗೂ ಸಹಾ ಪ್ರಾಮುಖ್ಯತೆ ನೀಡುತ್ತಿಲ್ಲ. ಅಲ್ಲದೇ ದೇಶದಲ್ಲಿ ಅಲ್ಪ ಸಂಖ್ಯಾತರ ಮೇಲೆ ನಿರಂತರವಾಗಿ ದೌ ರ್ಜ ನ್ಯ ವು ನಡೆಯುತ್ತಿದೆ ಎಂದಿದ್ದಾರೆ.

ಪ್ರಸ್ತುತ ದಿನಗಳಲ್ಲಿ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ದೇಶದಲ್ಲಿ ಎಲ್ಲಾ ಪ್ರಜೆಗಳನ್ನು ಒಂದೇ ಎಂದು ನೋಡುವ ಆಲೋಚನೆ ಬದಲಾಗಿದೆ. ನಾಗರಿಕರ ಕೆಲವು ಹಕ್ಕುಗಳನ್ನು ದ ಮ ನ ಮಾಡುವ ಕೆಲಸವು ದೇಶದಲ್ಲಿ ನಡೆಯುತ್ತಿದೆ. ದೇಶದಲ್ಲಿ ಧಾರ್ಮಿಕ ತಾರತಮ್ಯ ಹೆಚ್ಚಾಗಿದೆ. ನಾಗರಿಕರು ಸ್ವತಂತ್ರವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಅವಕಾಶವಿಲ್ಲ, ನಾಗರಿಕ ಹಕ್ಕುಗಳು ಕ್ಷೀಣಿಸುತ್ತವೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *