ಭಾರತ ಬಿಟ್ಟು ಲಂಡನ್ ಗೆ ಹಾರಲಿದ್ಯಾ ಮುಖೇಶ್ ಅಂಬಾನಿ ಕುಟುಂಬ:ಹೌದು ಎನ್ನುತ್ತಿದೆ ಬಹುಕೋಟಿ ಮೌಲ್ಯದ ಈ ಸುದ್ದಿ

Written by Soma Shekar

Published on:

---Join Our Channel---

ಮುಖೇಶ್ ಅಂಬಾನಿ ಭಾರತದ ಅತಿ ದೊಡ್ಡ ಶ್ರೀಮಂತರು ಎನ್ನುವ ವಿಚಾರವನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಕೂಡಾ ತನ್ನ ಹೆಸರನ್ನು ಪಡೆದಿರುವ ಮುಖೇಶ್ ಅಂಬಾನಿ ಅವರ ಐಶಾರಾಮೀ ಮನೆ ಆ್ಯಂಟೀಲಿಯಾ ಇಡೀ ವಿಶ್ವದಲ್ಲಿಯೇ ದುಬಾರಿ ಮನೆಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಈಗ ಮುಖೇಶ್ ಅಂಬಾನಿ ತಮ್ಮ ಕುಟುಂಬಕ್ಕಾಗಿ ಹೊಸದೊಂದು ನಿವಾಸವನ್ನು ಖರೀದಿ ಮಾಡಲು ಮುಂದಾಗಿದ್ದಾರೆ. ಹೌದು ಮುಖೇಶ್ ಅಂಬಾನಿ ಅವರು ಲಂಡನ್ ನಲ್ಲಿ ಒಂದು ಐಶಾರಾಮೀ ಪ್ಯಾಲೆಸ್ ಖರೀದಿಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ವರದಿಗಳ ಪ್ರಕಾರ ಬಕ್ಕಿಂಗ್ ಹ್ಯಾಂ ಶೈರ್, ಸ್ಟೋಕ್ ಪಾರ್ಕ್ ನಲ್ಲಿ ವಿಶಾಲವಾದ ಮನೆಯನ್ನು ಖರೀದಿ ಮಾಡಲು ಮುಂದಾಗಿದ್ದಾರೆ ಮುಖೇಶ್ ಅಂಬಾನಿ. ಈ ಹೊಸ ಐಶಾರಾಮೀ ಮನೆಯ ಬೆಲೆ ಬರೋಬ್ಬರಿ 592 ಕೋಟಿ ರೂ.ಗಳು ಎನ್ನಲಾಗಿದೆ. ಲಂಡನ್ ನಲ್ಲಿ ಖರೀದಿ ಮಾಡುತ್ತಿರುವ ಈ ವೈಭವೋಪೇತ ಬಂಗಲೆಯಲ್ಲಿ ಒಟ್ಟು 49 ಬೆಡ್ ರೂಂ ಗಳು ಇವೆ. ಅತ್ಯಾಧುನಿಕ ಚಿಕಿತ್ಸಾಲಯವನ್ನು ಈ ಮ್ಯಾನ್ಷನ್ ನಲ್ಲಿ ಇದ್ದು, ಇತ್ತೀಚಿಗಷ್ಟೇ ಈ ಚಿಕಿತ್ಸಾಲಯವನ್ನು ಸ್ಥಾಪನೆ ಮಾಡಲಾಗಿದೆ. ಕೊರೊನಾ ಮಹಾಮಾರಿಯ ಕಾಲದಲ್ಲಿ ದೀರ್ಘವಾದ ಸಮಯದವರೆಗೆ ಅಂಬಾನಿ ಕುಟುಂಬ ಆ್ಯಂಟೀಲಿಯಾದಲ್ಲೇ ಕಳೆದಿದ್ದರು.

ಅದಾದ ನಂತರ ಲಾಕ್ ಡೌನ್ ನಲ್ಲಿ ಗುಜರಾತಿನ ಜಾಮ್ ನಗರ್ ನಲ್ಲಿ ಸ್ವಲ್ಪ ದಿನ ಕಳೆದಿದ್ದರು. ಲಾಕ್ ಡೌನ್ ನಂತರ ಅಂಬಾನಿ ಕುಟುಂಬ ಮುಂಬೈನಲ್ಲಿರುವ ತಮ್ಮ ಐಶಾರಾಮೀ ಮನೆಯಂತಹ ಜನದಟ್ಟಣೆ ಇರುವ ವಾತಾವರಣದ ಬದಲಾಗಿ, ಒಂದು ವಿಶಾಲವಾದ ಹಾಗೂ ಸಾಕಷ್ಟು ಆರಾಮದಾಯಕವಾಗಿರುವ ತೆರೆದ ವಾತಾವರಣ ಇರುವ ಮನೆಯನ್ನು ಖರೀದಿ ಮಾಡುವ ಆಲೋಚನೆ ಮಾಡಿತ್ತು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಹೊಸ ಮನೆಯ ಹುಡುಕಾಟ ಆರಂಭವಾಗಿತ್ತು.

ಮುಂದಿನ ಏಪ್ರಿಲ್ ನಲ್ಲಿ ಅಂಬಾನಿ ಪರಿವಾರ ಲಂಡನ್ ನ ತಮ್ಮ ಹೊಸ ಐಶಾರಾಮೀ ಪ್ಯಾಲೇಸ್ ನಂತಹ ಮ್ಯಾನ್ಷನ್ ನಲ್ಲಿ ವಾಸವಾಗಲು ಹೊರಟಿದ್ದಾರೆ ಎನ್ನಲಾಗಿದೆ. ಹೊಸ ಮನೆಯಲ್ಲಿ ಪೂಜಾ ಮಂದಿರವನ್ನು ಸಹಾ ಈಗಾಗಲೇ ನಿರ್ಮಾಣ ಮಾಡಿಸಿದ್ದು, ಅಗತ್ಯ ಇರುವ ಎಲ್ಲಾ ಬದಲಾವಣೆಗಳನ್ನು ಮಾಡಿಸುತ್ತಿದ್ದು, ತಮ್ಮ ಅನುಕೂಲಕ್ಕೆ ತಕ್ಕಂತೆ ಹೊಸ ಮನೆಯ ರೂಪು ರೇಷೆಗಳನ್ನು ತಿದ್ದಿ ತೀಡುವ ಕೆಲಸಗಳನ್ನು ಮಾಡಿಸುತ್ತಿದ್ದಾರೆ.

Leave a Comment