ಭಾರತೀಯ ಸೇನೆಗೆ 2 ಬಾರಿ ತಿರಸ್ಕೃತ: ಉಕ್ರೇನ್ ಸೇನೆಗೆ ಭಾರತೀಯ ವಿದ್ಯಾರ್ಥಿ ಸೇರ್ಪಡೆ

Entertainment Featured-Articles News

ತಮಿಳುನಾಡಿನ ಯುವಕನೊಬ್ಬ ಉಕ್ರೇನ್ ನಲ್ಲಿ ಸೈನ್ಯವನ್ನು ಸೇರಿ ರಷ್ಯಾದ ವಿ ರು ದ್ಧ ಹೋರಾಟದಲ್ಲಿ ಭಾಗಿಯಾಗಿರುವ ವಿಷಯವೊಂದು ಇದೀಗ ದೊಡ್ಡ ಸುದ್ದಿಯಾಗಿದ್ದು ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ. ಈ ವಿಷಯ ಅಚ್ಚರಿಯನ್ನು ಮೂಡಿಸಿದರೂ ಸಹಾ ಇದು ನಿಜವಾಗಿದೆ. ತಮಿಳು ನಾಡಿನ ಕೊಯಮತ್ತೂರು ಜಿಲ್ಲೆಯ 21 ವರ್ಷ ವಯಸ್ಸಿನ ಯುವಕ ಸಾಯಿ ನಿಕೇಶ್ ರವಿಚಂದ್ರನ್ ಎನ್ನುವ ಹೆಸರಿನ ವಿದ್ಯಾರ್ಥಿಯೋರ್ವನು ರಷ್ಯಾದ ವಿ ರು ದ್ಧ ಹೋರಾಡಲು ಉಕ್ರೇನ್ ನ ಅರೆ ಸೈನಿಕ ಪಡೆಗೆ ಸೇರ್ಪಡೆಯಾಗಿದ್ದಾನೆ.

ಈ ವಿಚಾರವಾಗಿ ಅಧಿಕಾರಿಗಳು ಸಾಯಿ ನಿಕೇಶ್ ಅವರ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದು ಈ ವೇಳೆ ಆತನ ಪೋಷಕರು ತಮ್ಮ ಮಗ ಈ ಮೊದಲು ಎರಡು ಬಾರಿ ಭಾರತೀಯ ಸೇನೆಯನ್ನು ಸೇರಲು ಎರಡು ಬಾರಿ ಅರ್ಜಿಯನ್ನು ಸಲ್ಲಿಸಿದ್ದನು. ಆದರೆ ಆತ ಎರಡು ಬಾರಿಯೂ ಸಹಾ ತಿರಸ್ಕೃತಗೊಂಡಿದ್ದನು ಎಂದು ಮಾಹಿತಿಯನ್ನು ನೀಡಿದ್ದಾರೆ. ಸಾಯಿ ನಿಕೇಶ್ 2018 ರಲ್ಲಿ ಕಾರ್ಕೀವ್ ನಲ್ಲಿನ ನ್ಯಾಷನಲ್ ಏರೋಸ್ಪೇಸ್ ವಿಶ್ವವಿದ್ಯಾಲಯ ದಲ್ಲಿ ಅಧ್ಯಯನವನ್ನು ಮಾಡಲು ಹೋಗಿದ್ದನು ಎನ್ನಲಾಗಿದೆ.

ಜುಲೈ 2022 ಕ್ಕೆ ಸಾಯಿನಿಕೇಶ್ ನ ಕೋರ್ಸ್ ಪೂರ್ತಿ ಆಗುವುದರಲ್ಲಿತ್ತು ಎನ್ನಲಾಗಿದೆ. ಉಕ್ರೇನ್ ನಲ್ಲಿ ಯು ದ್ಧ ನಡೆಯುತ್ತಿರುವ ಕಾರಣ ಆತನ ಪೋಷಕರು ಮಗನೊಂದಿಗೆ ಸಂಪರ್ಕವನ್ನು ಕಳೆದುಕೊಂಡಿದ್ದರು. ಇದರಿಂದ ಕಂಗಾಲಾದ ಪೋಷಕರು ರಾಯಭಾರಿ ಕಛೇರಿಯ ಸಹಾಯವನ್ನು ಯಾಚಿಸಿದ್ದರು. ಇದಕ್ಕೆ ಸ್ಪಂದಿಸಿದ ರಾಯಭಾರಿ ಕಛೇರಿಯ ನೆರವಿನಿಂದ ಸಾಯಿನಿಕೇಶ್ ನನ್ನು ಸಂಪರ್ಕಿಸಲು ಸಾಧ್ಯವಾಗಿದ್ದು, ಆತ ತಾನು ರಷ್ಯಾ ವಿ ರು ದ್ಧ ಹೋರಾಟಕ್ಕೆ ಉಕ್ರೇನ್ ನ ಅರೆ ಸೈನಿಕ ಪಡೆಯನ್ನು ಸೇರಿರುವುದಾಗಿ ಹೇಳಿದ್ದಾನೆ ಎನ್ನಲಾಗಿದೆ.

ಮಗ ಸಶಸ್ತ್ರ ತರಬೇತಿಯ ಬಗ್ಗೆ ಬಹಳ ಉತ್ಸುಕತೆಯನ್ನು ಹೊಂದಿದ್ದ ಎನ್ನುವ ವಿಚಾರವನ್ನು ಆತನ ಪೋಷಕರು ಗುಪ್ತಚರ ದಳದವರಿಗೆ ತಿಳಿಸಿದ್ದಾರೆ. ಅಲ್ಲದೇ ಆತನ ಕೋಣೆಯಲ್ಲಿ ಭಾರತೀಯ ಸೇನೆ ಮತ್ತು ಅಧಿಕಾರಿಗಳ ಫೋಟೋಗಳನ್ನು ತುಂಬಿಸಿಕೊಂಡಿರುವುದನ್ನು ತೋರಿಸಿದ್ದಾರೆ. ಮಗ ಭಾರತೀಯ ಸೇನೆಯಲ್ಲಿ ಅವಕಾಶ ಸಿಗದೇ ಹೋದಾರ ಚೆನ್ನೈನಲ್ಲಿ ನ ಅಮೆರಿಕ ರಾಯಭಾರಿ ಕಛೇರಿಗೆ ಹೋಗಿ, ಅಮೆರಿಕಾ ಸೇನೆಗೆ ಸೇರುವ ಅವಕಾಶ ಇದೆಯೇ ಎನ್ನುವ ಪ್ರಯತ್ನವನ್ನೂ ಮಾಡಿದ್ದ ಎಂದು ತಿಳಿಸಿದ್ದಾರೆ.

ಇದರ ನಡುವೆ ಐದು ವರ್ಷಗಳ ಏರೋಸ್ಪೇಸ್ ಇಂಜಿನಿಯರಿಂಗ್ ಮಾಡುತ್ತಿದ್ದ. ಯು ದ್ಧ ಆರಂಭದ ಕೆಲವೇ ದಿನಗಳ ಮೊದಲು ಉಕ್ರೇನ್ ನಲ್ಲಿ ವೀಡಿಯೋ ಗೇಮ್ ಡೆವಲಪಿಂಗ್ ಕಂಪನಿಯಲ್ಲಿ ಕೆಲಸ ದೊರೆತಿರುವುದಾಗಿ ಹೇಳಿದ್ದ ಎಂದು ಅವರು ಹೇಳಿದ್ದಾರೆ. ವರದಿಗಳ ಪ್ರಕಾರ ಸಾಯಿ ನಿಕೇಶ್ ಸ್ವಯಂಸೇವಕರಿರುವ ಜಾರ್ಜಿಯನ್ ನ್ಯಾಷನಲ್ ಲೀಜನ್ ಅರ ಸೇನಾ ಘಟಕದಲ್ಲಿ ಸೇರಿ ಉಕ್ರೇನ್ ಪರವಾಗಿ ಸ ಮ ರದಲ್ಲಿ ಭಾಗಿಯಾಗಿದ್ದಾರೆ.

Leave a Reply

Your email address will not be published.