ಭಾರತೀಯ ರೈಲ್ವೆಗೆ ತಲೆನೋವಾದ ರಸಗುಲ್ಲಾ! ರೈಲುಗಳು ಕ್ಯಾನ್ಸಲ್, ಪ್ರಯಾಣಿಕರ ಪರದಾಟ
ಹಾಲಿನಿಂದ ಸಿದ್ಧಪಡಿಸಲಾದ ರುಚಿಯಾದ, ಸಿಹಿಯಾದ, ರಸಭರಿತವಾದ ರಸಗುಲ್ಲ ವನ್ನು ನೋಡಿದ ಕೂಡಲೇ ಅನೇಕರ ಬಾಯಿಯಲ್ಲಿ ನೀರೂರುತ್ತದೆ. ಆದರೆ ಇದೇ ರಸಗುಲ್ಲಾ ಭಾರತೀಯ ರೈಲ್ವೆಗೆ ಮಾತ್ರ ಬಹಳ ಕಹಿಯಾಗಿ ಪರಿಣಮಿಸಿದೆ. ಈಗ ನಾವು ನಿಮಗೆ ಇಂತಹುದೊಂದು ಕುತೂಹಲಕಾರಿ ವಿಷಯವನ್ನು ಹೇಳಲು ಹೊರಟಿದ್ದೇವೆ. ಹತ್ತು ರೈಲುಗಳ ನಿಲುಗಡೆಗಾಗಿ ಬಿಹಾರದ ಲಖಿಸರಾಯ್ ನ ಬರ್ಹಿಯಾ ರೈಲು ನಿಲ್ದಾಣದಲ್ಲಿ ಜನರು ಸುಮಾರು 40 ಗಂಟೆಗಳ ಕಾಲ ಪ್ರ ತಿ ಭ ಟನೆಯನ್ನು ನಡೆಸಲಾಗಿದೆ.
ಇಲ್ಲಿ ಜನರು ರೈಲ್ವೆ ಹಳಿಗಳ ಮೇಲೆ ಟೆಂಟ್ ಹಾಕಿ ಕೊಂಡು ಕುಳಿತ ಕಾರಣದಿಂದ ಸುಮಾರು 40 ಗಂಟೆಗಳ ಕಾಲ ರೈಲು ಸಂಚಾರ ಸ್ಥಗಿತಗೊಂಡಿತ್ತು. ಇದರಿಂದಾಗಿ ಹೌರಾ ಮತ್ತು ದೆಹಲಿ ರೈಲು ಮಾರ್ಗದ ಹತ್ತಾರು ರೈಲುಗಳನ್ನು ಸುಮಾರು 24 ಗಂಟೆಗಳಿಗೂ ಅಧಿಕ ಕಾಲ ರದ್ದುಗೊಳಿಸಲಾಯಿತು. ಇದೇ ವೇಳೆ ನೂರಕ್ಕೂ ಹೆಚ್ಚು ರೈಲುಗಳನ್ನು ಬೇರೆ ಕಡೆಗೆ ತಿರುಗಿಸಬೇಕಾಯಿತು. ಇದೆಲ್ಲದರ ಪರಿಣಾಮವಾಗಿ ಪ್ರಯಾಣಿಕರಿಗೆ ಹೆಚ್ಚು ಸಮಸ್ಯೆಗಳು ಉಂಟಾಯಿತು.
ಲಖಿಸರಾಯ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಜಯ್ ಕುಮಾರ್ ಪ್ರಕಾರ, ಹೆಚ್ಚಿನ ಸಂಖ್ಯೆಯಲ್ಲಿ ಜನರು ರೈಲ್ವೆ ಹಳಿಗಳ ಮೇಲೆ ಕುಳಿತು ಪ್ರತಿಭಟನೆಯನ್ನು ನಡೆಸಿದ್ದರು. ಈ ಜನರ ಬೇಡಿಕೆ ಏನೆಂದರೆ ಬರ್ಹಿಯಾದಲ್ಲಿ ಹಲವು ಎಕ್ಸ್ ಪ್ರೆಸ್ ರೈಲುಗಳನ್ನು ನಿಲುಗಡೆ ಮಾಡಿಲ್ಲ. ಆದರೆ ಅಲ್ಲಿನ ಜನರು ಅನುಕೂಲಕ್ಕಾಗಿ ನಿಲ್ದಾಣದಲ್ಲಿ ನಿಗದಿತ ನಿಲುಗಡೆ ಮಾಡಬೇಕೆಂದು ಒತ್ತಾಯವನ್ನು ಮಾಡಿದ್ದಾರೆ. ಹಾಗಾದರೆ ಇದಕ್ಕೆ ಕಾರಣವೇನು ಎಂದರೆ ರಸಗುಲ್ಲಾ.
ಲಖಿಸರಾಯ್ ನ ರಸಗುಲ್ಲಾ ಗಳು ವಿಶಿಷ್ಟವಾದ ರುಚಿಯನ್ನು ಹೊಂದಿದೆ ಎನ್ನುವ ವಿಚಾರ ಬಹಳಷ್ಟು ಜನರಿಗೆ ತಿಳಿದಿಲ್ಲ. ಇಲ್ಲಿನ ರಸಗುಲ್ಲಾ ಗಳಿಗೆ ದೊಡ್ಡ ಪ್ರಮಾಣದಲ್ಲಿ ಬೇಡಿಕೆಯಿದೆ. ಆದ್ದರಿಂದಲೇ ಅಕ್ಕಪಕ್ಕದ ರಾಜ್ಯಗಳಿಗೂ ಕೂಡಾ ಸರಬರಾಜು ಆಗುತ್ತದೆ. ವಿಶೇಷವಾಗಿ ಜನರು ಮದುವೆ ಅಥವಾ ಇನ್ನಿತರ ಶುಭ ಸಮಾರಂಭಗಳಲ್ಲಿ ಇಲ್ಲಿನ ರಸಗುಲ್ಲಾ ವನ್ನು ಖರೀದಿ ಮಾಡುತ್ತಾರೆ. ಅತಿಥಿಗಳಿಗೆ ಔತಣ ನೀಡಲು ಜನ ರಸಗುಲ್ಲ ಖರೀದಿ ಮಾಡಲು ಇಲ್ಲಿಗೆ ಬರುತ್ತಾರೆ.
ಇಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ರಸಗುಲ್ಲಾ ಅಂಗಡಿಗಳಿದ್ದು ದೊಡ್ಡ ಸಂಖ್ಯೆಯಲ್ಲಿ ಪ್ರತಿದಿನ ರಸಗುಲ್ಲಾ ಸಿದ್ಧವಾಗುತ್ತದೆ. ಆದರೆ ಇಲ್ಲಿ ರೈಲುಗಳು ನಿಲ್ಲದೇ ಹೋಗುತ್ತಿರುವ ಕಾರಣದಿಂದ ರಸಗುಲ್ಲಾ ವ್ಯಾಪಾರದ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಇದು ಅಲ್ಲಿನ ವ್ಯಾಪಾರಿಗಳಿಗೆ ಕೋಪ ತರಿಸಿದೆ. ಬೇರೆ ಬೇರೆ ಕಡೆಗೆ ರಸಗುಲ್ಲಾ ಸರಬರಾಜು ಮಾಡುವುದು ಅಸಾಧ್ಯವಾಗಿದೆ. ರೈಲುಗಳು ಇಲ್ಲಿ ನಿಲ್ಲದೇ ಹೋಗುವುದರಿಂದ ರಸಗುಲ್ಲಾ ವ್ಯಾಪಾರಿಗಳಿಗೆ ದೊಡ್ಡಮಟ್ಟದಲ್ಲಿ ನಷ್ಟವುಂಟಾಗಿತ್ತು.
ರೋಸಿ ಹೋದ ವ್ಯಾಪಾರಿಗಳು ರೈಲ್ವೆ ಇಲಾಖೆಯ ಮೇಲೆ ಸಿಟ್ಟಾಗಿದ್ದಾರೆ. ಸ್ಥಳೀಯ ವ್ಯಾಪಾರಿಗಳು ಮಾತನಾಡುತ್ತಾ, ರೈಲಿನಲ್ಲಿ ರಸಗುಲ್ಲಾ ಸರಬರಾಜು ಮಾಡುವುದು ತಮಗೆ ಆರ್ಥಿಕವಾಗಿ ಹೆಚ್ಚು ಹೊರೆಯಾಗುವುದಿಲ್ಲ. ಆದರೆ ಬೇರೆ ಸಂಚಾರ ಮಾರ್ಗವನ್ನು ಆಯ್ಕೆ ಮಾಡಿಕೊಂಡರೆ ಅದಕ್ಕೆ ಖರ್ಚಾಗುವ ಹಣ ಹೊರೆಯಾಗಿ ಪರಿಣಮಿಸಿದೆ. ಎಂದು ಹೇಳಿದ್ದಾರೆ. ಇನ್ನು ಈ ಪ್ರ ತಿ ಭ ಟನೆಯ ನಂತರ ರೈಲ್ವೆಯು ಲಿಖಿತ ರೂಪದಲ್ಲಿ ಇನ್ನು ಮುಂದೆ ರೈಲುಗಳನ್ನು ನಿಗದಿತ ನಿಲುಗಡೆ ಮಾಡುವುದಾಗಿ ಆಶ್ವಾಸನೆ ನೀಡಿದೆ.