ಭಾರತದಲ್ಲಿ ಜೀರೋ ಮೈಲ್ ಸ್ಟೋನ್ ಎಲ್ಲಿದೆ ಗೊತ್ತಾ? ಅದರ ಅಸಲಿ ಚರಿತ್ರೆ ನಿಮಗಾಗಿ ಇಲ್ಲಿದೆ

Entertainment Featured-Articles News
52 Views

ಒಂದು ಪ್ರದೇಶದಿಂದ ಅಥವಾ ಸ್ಥಳದಿಂದ ಮತ್ತೊಂದು ಪ್ರದೇಶ ಅಥವಾ ಸ್ಥಳಕ್ಕೆ ಎಷ್ಟು ದೂರವಿದೆ ಎನ್ನುವುದನ್ನು ತಿಳಿದುಕೊಳ್ಳಲು ಪ್ರಸ್ತುತ ಕಾಲದಲ್ಲಿ ನಾವು ಗೂಗಲ್ ಮ್ಯಾಪ್ ಗಳನ್ನು ಬಳಸುತ್ತೇವೆ. ಇದರಿಂದಾಗಿ ಬಹಳ ಸಿಂಪಲ್ಲಾಗಿ ಸ್ಮಾರ್ಟ್ ಫೋನ್ ಗಳ ಮೂಲಕ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಇರುವ ದೂರವು ನಮಗೆ ಕೆಲವೇ ಕ್ಷಣಗಳಲ್ಲಿ ತಿಳಿಯುತ್ತದೆ. ಇದರ ಹೊರತಾಗಿಯೂ ಪ್ರಸ್ತುತ ದಿನಗಳಲ್ಲಿಯೂ ರಸ್ತೆ ಮಾರ್ಗವಾಗಿ ಪ್ರಯಾಣ ಹೋಗುವಾಗ ದೂರವನ್ನು ತಿಳಿಯುವುದಕ್ಕೆ ಪ್ರಮುಖ ಆಧಾರವಾಗಿರುವುದು ರಸ್ತೆಬದಿಯಲ್ಲಿ ಕಾಣುವಂತಹ ಮೈಲಿಗಲ್ಲುಗಳಾಗಿವೆ.

ಇವುಗಳ ಸಹಾಯದಿಂದಲೇ ನಾವು ಹೋಗುತ್ತಿರುವ ಸ್ಥಳ ಇನ್ನೆಷ್ಟು ದೂರದಲ್ಲಿದೆ ಎಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಭಾರತ ದೇಶದಲ್ಲಿ ಒಂದು ಕಡೆ ಜೀರೋ ಮೈಲ್ ಸ್ಟೋನ್ ಇದೆ ಎನ್ನುವ ವಿಷಯ ಬಹಳಷ್ಟು ಜನರಿಗೆ ತಿಳಿದಿಲ್ಲ. ಈ ಮೈಲ್ ಸ್ಟೋನ್ ಇರುವ ಜಾಗದಿಂದಲೇ ದೇಶದ ಬಹಳಷ್ಟು ನಗರಗಳ ದೂರ ಎಷ್ಟು ಎನ್ನುವುದನ್ನು ಲೆಕ್ಕಚಾರ ಹಾಕಲಾಗುತ್ತದೆ. ಹಾಗಾದರೆ ಆ ಪ್ರದೇಶವನ್ನೇ ಏಕೆ ಜೀರೋ ಮೈಲ್ ಸ್ಟೋನ್ ಎಂದು ಏಕೆ ಗುರುತಿಸಲಾಗಿದೆ? ಆ ಪ್ರದೇಶ ಯಾವುದು? ಈ ಕೆಲವು ಆಸಕ್ತಿಕರ ಮಾಹಿತಿಗಳು ನಿಮಗಾಗಿ ಇಲ್ಲಿದೆ.

ಬ್ರಿಟಿಷರು ಭಾರತಕ್ಕೆ ಬಂದ ಮೇಲೆ ಭಾರತದಲ್ಲಿ ಅವರು ತಮ್ಮ ಆಡಳಿತ ನಿರ್ವಹಣೆ ಮತ್ತು ಭದ್ರತೆಯ ದೃಷ್ಟಿಯಿಂದ ಇಡೀ ದೇಶವನ್ನು ಸಮರ್ಪಕವಾದ ರೀತಿಯಲ್ಲಿ ಸರ್ವೇ ಮಾಡಿಸಿದರು. ತ್ರಿಕೋನಮಿತಿ ಆಧಾರವಾಗಿ ಸರ್ವೆಯನ್ನು ಮಾಡಿದ ನಂತರ ಅದರ ಭಾಗವಾಗಿ ನಾಗಪುರದಲ್ಲಿ ಜೀರೋ ಮೈಲ್ ಸ್ಟೋನ್ ಸ್ತೂಪವನ್ನು ಸ್ಥಾಪನೆ ಮಾಡಿದರು. 6.5 ಮೀಟರ್ ಎತ್ತರದ ಈ ಸ್ತೂಪದ ಪಕ್ಕದಲ್ಲೇ ಇರುವ ಕಲ್ಲಿನ ಮೇಲೆ 1907 ಎಂದು ಬರೆಯಲಾಗಿದೆ.‌ ಇದನ್ನು ನೋಡಿ ಬಹುಶಃ ಆ ಸಮಯದಲ್ಲಿ ಸ್ತೂಪವನ್ನು ಸ್ಥಾಪಿಸಲಾಗಿದೆ ಎನ್ನಲಾಗುತ್ತಿದೆ.

ಈ ಸ್ತೂಪದಿಂದ ದಕ್ಷಿಣ ದಕ್ಕಿನಲ್ಲಿ 62 ಮೈಲು ದೂರದಲ್ಲಿ ಕವಾಥ, ಆಗ್ನೇಯದಲ್ಲಿ 312 ಮೈಲು ದೂರದಲ್ಲಿ ಹೈದರಾಬಾದ್, ಪೂರ್ವದಲ್ಲಿ 125 ಮೈಲುಗಳ ದೂರದಲ್ಲಿ ಚಂದಾ, 174 ಮೈಲುಗಳ ದೂರದಲ್ಲಿ ರಾಯ್ಪುರ, 170 ಮೈಲುಗಳ ದೂರದಲ್ಲಿ ಜಬಲ್ಪುರ, ವಾಯುವ್ಯ ದಿಕ್ಕಿನಲ್ಲಿ 79 ಮೈಲುಗಳ ದೂರದಲ್ಲಿ ಸಿಯೋನಿ, 83 ಮೈಲುಗಳ ದೂರದಲ್ಲಿ ಚಿಂದ್ವಾರ, ಪಶ್ಚಿಮದಲ್ಲಿ 101 ಮೈಲುಗಳ ದೂರದಲ್ಲಿ ಬೈಟುಲ್ ನಗರಗಳು ಇವೆ.

ನಾಗಪುರ ವು ದೇಶದಲ್ಲಿ ಬಹುಳಷ್ಟು ನಗರಗಳ ಕಡೆಯಿಂದ ಅಂದರೆ ಚೆನ್ನೈ, ಮುಂಬೈ, ಕೊಲ್ಕತ್ತಾ, ಡಿಲ್ಲಿಯಿಂದ ನೋಡಿದಾಗ ಮಧ್ಯ ಭಾಗದಲ್ಲಿ ಇರುವುದರಿಂದ, ಇಲ್ಲಿನಿಂದಲೇ ದೇಶದ ಪ್ರಮುಖ ಭಾಗಗಳ ದೂರವನ್ನು ಲೆಕ್ಕ ಹಾಕಲಾಗುತ್ತದೆ.‌ ಹೀಗೆ ಜೀರೋ ಮೈಲ್ ಸ್ಟೋನ್ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು, ಇದರ ಮಹತ್ವ ಏನೆಂಬುದು ಈಗ ನಿಮಗೆ ಸಹಾ ತಿಳಿಯತಲ್ಲವೇ? ಇಂತಹ ಜೀರೋ ಮೈಲ್ ಸ್ಟೋನ್ ರಾಜ್ಯದ ರಾಜಧಾನಿಗಳಲ್ಲಿ ಸಹಾ ಕೆಲವು ಕಡೆ ಕಂಡು ಬರುತ್ತದೆ.

Leave a Reply

Your email address will not be published. Required fields are marked *