HomeEntertainmentಭಾರತದಲ್ಲಿ ಕೊರೊನಾ ಅಂತ್ಯದ ಕುರಿತು ಅವದೂತ ವಿನಯ್ ಗುರೂಜಿ ಸಂಚಲನ ಭವಿಷ್ಯವಾಣಿ

ಭಾರತದಲ್ಲಿ ಕೊರೊನಾ ಅಂತ್ಯದ ಕುರಿತು ಅವದೂತ ವಿನಯ್ ಗುರೂಜಿ ಸಂಚಲನ ಭವಿಷ್ಯವಾಣಿ

ಕೊರೊನಾ ಎನ್ನುವ ಮಹಾಮಾರಿ ಇಡೀ ವಿಶ್ವಕ್ಕೆ ಒಂದು ಶಾ ಪ ವಾಗಿ ಪರಿಣಮಿಸಿದೆ. ಕಳೆದ ಎರಡು ವರ್ಷಗಳಿಂದ ಜನರ ಜೀವನದ ದಿಕ್ಕೇ ಬದಲಾಗಿ ಹೋಗಿದೆ. ಕೊರೊನಾ ಸಂಪೂರ್ಣವಾಗಿ ಯಾವಾಗ ಹೋಗಲಿದೆ ಎನ್ನುವುದು ಎಲ್ಲರ ನಿರೀಕ್ಷೆಯಾಗಿದೆ. ಕೊರೊನಾ ನಿಯಂತ್ರಣಕ್ಕಾಗಿ ಲಸಿಕೆಯನ್ನು ನೀಡಲಾಗುತ್ತಿದೆ, ಅದರ ನಡುವೆಯೇ ಹೊಸ ಹೊಸ ಕೊರೊನಾ ವೈರಸ್ ತಳಿಗಳ ಸುದ್ದಿಗಳು ಕೂಡಾ ಆಗುತ್ತಿವೆ‌. ಆದರೆ ಒಂದು ಸಮಾಧಾನದ ವಿಷಯ ಏನೆಂದರೆ ಕೊರೊನಾ ವೇಗ ತಗ್ಗಿದೆ. ಮೂರನೇ ಅಲೆ ಇನ್ನೂ ಬಂದಿಲ್ಲ ಎನ್ನುವುದು ಜನರಿಗೆ ಒಂದು ನೆಮ್ಮದಿ ನೀಡಿದೆ..

ಕೊರೊನಾ ವಿಷಯವಾಗಿ ಅನೇಕ ಸ್ವಾಮೀಜಿಗಳು, ಗುರೂಜಿಗಳು, ಅವದೂತರು, ಜ್ಯೋತಿಷಿಗಳು ಸಹಾ ತಮ್ಮದೇ ಆದ ಭವಿಷ್ಯವಾಣಿಗಳನ್ನು ನುಡಿಯುತ್ತಲೇ ಬಂದಿದ್ದಾರೆ. ಕೊರೊನಾ ತೀ ವ್ರ ತೆ ಕುರಿತಾಗಿ, ಅದು ಯಾವಾಗ ಹೋಗುತ್ತದೆ ಎಂದು ಹತ್ತು ಹಲವು ವಿಚಾರಗಳ ಬಗ್ಗೆ ಭವಿಷ್ಯ ವಾಣಿಯನ್ನು ನುಡಿದಿದ್ದು, ಅವರ ಅನುಯಾಯಿಗಳು ಹಾಗೂ ಭಕ್ತರು ಈ ಹೇಳಿಕೆಗಳನ್ನು ನಂಬುವುದು ಮಾತ್ರವೇ ಅಲ್ಲದೇ ಅದಕ್ಕೆ ಪ್ರಾಶಸ್ತ್ಯವನ್ನು ಸಹಾ ನೀಡುತ್ತಾ ಬರುತ್ತಿದ್ದಾರೆ ಎನ್ನುವುದು ಕೂಡಾ ನಿಜ.

ಇನ್ನು ಕೊರೊನಾ ಯಾವಾಗ ಹೋಗುತ್ತದೆ ಎನ್ನುವ ವಿಚಾರದಲ್ಲಿ ಈಗ ಅವದೂತ ವಿನಯ್ ಗುರೂಜಿ ಅವರು ತಮ್ಮ ಅಭಿಪ್ರಾಯದ ಮೂಲಕ ಭವಿಷ್ಯವಾಣಿ ಯೊಂದನ್ನು ಮಾದ್ಯಮಗಳ ಮುಂದೆ ನಡೆದಿದ್ದಾರೆ. ವಿನಯ್ ಗುರೂಜಿ ಅವರು ಮಾದ್ಯಮಗಳ ಮುಂದೆ ಹಲವು ವಿಚಾರಗಳನ್ನು ಮಾತನಾಡಿದ್ದು, ಈ ವೇಳೆ ಕೊರೊನಾ ಅಂತ್ಯದ ಕುರಿತಂತೆ ಬಹಳ ಮುಖ್ಯವಾದ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದು, ಎಲ್ಲರ ಗಮನವನ್ನು ಸೆಳೆದಿದೆ. ವಿನಯ್ ಗುರೂಜಿ ಅವರು ಮಾತನಾಡುತ್ತಾ, ಕೊರೊನಾ ಇನ್ನು ಮೂರ್ನಾಲ್ಕು ತಿಂಗಳು ಇರಬಹುದು ಎಂದಿದ್ದಾರೆ.

ಇದು ನನ್ನ ವೈಯಕ್ತಿಯ ಅಭಿಪ್ರಾಯವಾಗಿದೆ. ನಾನು ಧ್ಯಾನದಲ್ಲಿ ತಿಳಿದ ವಿಷಯವಿದು. ಎಲ್ಲಾ ದೇವರು ಮಾಡಬೇಕು, ಮ್ಯಾಜಿಕ್ ಆಗಲೀ, ಪವಾಡ ಆಗಲೀ ಅಂತಲ್ಲ. ನಮ್ಮ ಪ್ರಯತ್ನವೇ ನಿಜವಾದ ಪವಾಡ, ಎಲ್ಲಾ ಪಕ್ಷಗಳಿಗಿಂತ ಜನರು ಮುಖ್ಯ ಅವರ ರಕ್ಷಣೆ ಮಾಡಬೇಕೆಂದು ಕೆಲಸ ಮಾಡಿದರೆ ಮಾರ್ಚ್, ಮೇ ಒಳಗೆ ನಾವು ಕೊರೊನಾ ಸಮಸ್ಯೆಯಿಂದ ಹೊರ ಬರಬಹುದು ಎಂದಿದ್ದಾರೆ.

- Advertisment -