ಫೇಸ್ ಬುಕ್ ಪ್ರೇಮ ಕಥೆ: ಭಾರತಕ್ಕೆ ಬಂದ ಸ್ವೀಡಿಷ್ ಯುವತಿ, ಪ್ರೇಮಿಯ ಜೊತೆ ಹಿಂದೂ ಪದ್ಧತಿಯಲ್ಲಿ ಮದುವೆ

0
367

ಅಂತರ್ಜಾಲ ಅಥವಾ ಇಂಟರ್ನೆಟ್ ಇಂದು ಜಗತ್ತನ್ನು ಕೈ ಬೆರಳಿನ ಅಂಚಿನಲ್ಲೇ ನೋಡುವಂತೆ ಮಾಡಿದ್ದು, ಸಾಗರದಾಚೆ ಇರುವವರ ನಡುವಿನ ದೂರವನ್ನು ಸಹಾ ಕಡಿಮೆ ಮಾಡಿದೆ. ಆದರೆ ಅದೇ ವೇಳೆ ಅಂತರ್ಜಾಲವನ್ನು ಯಾರು ಹೇಗೆ ಬಳಸುತ್ತಾರೆ ಎನ್ನುವುದು ಮಾತ್ರ ಅವರ ವಿಚಕ್ಷಣಾ ಶಕ್ತಿಗೆ ಬಿಟ್ಟ ವಿಚಾರವಾಗಿದೆ. ಇಂಟರ್ನೆಟ್ ನಿಂದಾ ಸಾಮಾಜಿಕ ಜಾಲತಾಣಗಳ ವೇದಿಕೆಗಳ ಮೂಲಕ ಸಹಾ ಪ್ರೇಮ ಕಥೆಗಳು ಅರಳಿರುವುದು ಸಾಕಷ್ಟು ಉದಾಹರಣೆಗಳಿವೆ. ಈಗ ಅಂತಹ ಪ್ರೇಮ ಕಥೆಗಳ ಸಾಲಿಗೆ ಹೊಸ ದೊಂದು ಜೋಡಿಯ ಕಥೆ ಸೇರ್ಪಡೆ ಆಗಿದೆ.

2012 ರಲ್ಲಿ ಸ್ವೀಡಿಷ್ ಯುವತಿ(Swedish Girl) ಮತ್ತು ಭಾರತದ ಯುವಕನ(Indian Boy) ನಡುವೆ ಫೇಸ್ ಬುಕ್ ಮೂಲಕ ಸ್ನೇಹ ಮೂಡಿತು. ಅನಂತರ ಆ ಸ್ನೇಹ ಪ್ರೇಮವಾಗಿ, ಈಗ ಆ ಪ್ರೇಮ ವಿವಾಹ ಬಂಧನಕ್ಕೆ ಬದಲಾಗಿದ್ದು, ಈ ಜೋಡಿಯ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಾ ಸಾಗಿದೆ. ಪ್ರೇಮಕ್ಕೆ ದೇಶ, ಭಾಷೆ, ಧರ್ಮ, ಜಾತಿ ಮತ್ತು ಗಡಿಗಳೆಂಬ ತಡೆಯಿಲ್ಲ ಎನ್ನುವುದನ್ನು ಸಾಬೀತು ಮಾಡಿರುವ ಈ ಘಟನೆಯ ವಿವರಗಳೇನು ಎಂದು ತಿಳಿದರೆ ನಿಮಗೆ ಅಚ್ಚರಿಯಾಗುತ್ತದೆ. ಬನ್ನಿ ಹಾಗಾದರೆ ಏನೀ ವಿಷಯ ಎನ್ನುವುದನ್ನು ತಿಳಿಯೋಣ.

2012 ರಲ್ಲಿ ಫೇಸ್ ಬುಕ್ ಮೂಲಕ ಪರಿಚಯವಾದ ಕ್ರಿಸ್ಟಿನ್(Christine) ಮತ್ತು ಪವನ್ ಕುಮಾರ್ (Pavan Kumar) ಪರಿಚಯವಾಗಿತ್ತು. ವೀಡಿಯೋ ಕಾಲ್ ನಲ್ಲಿ ಇವರು ಮಾತನಾಡಿದ್ದರು.‌ ಕಳೆದ ವರ್ಷ ಆಗ್ರಾದಲ್ಲಿ(Agra) ಇವರು ಮೊದಲ ಬಾರಿಗೆ ಭೇಟಿಯಾಗಿದ್ದರು. ಮದುವೆಯಾಗಲು ಅವರು ನಿರ್ಧಾರ ಮಾಡಿದರು. 2023 ಜನವರಿ 28 ಕ್ಕೆ ಅವರ ಮದುವೆ ನಿರ್ಧಾರವಾಯಿತು. ಕ್ರಿಸ್ಟೆನ್ ಮದುವೆಗಾಗಿ ಉತ್ತರ ಪ್ರದೇಶದ(Uttar Pradesh) ಇಟಾಹ್ ಗೆ ಬಂದಿಳಿದರು. ಕ್ರಿಸ್ಟೆನ್ ಮತ್ತು ಪವನ್ ಮದುವೆ ಎಟಾದ ಶಾಲೆಯೊಂದರಲ್ಲಿ ಹಿಂದೂ ಸಂಪ್ರದಾಯದಂತೆ ನಡೆದಿದೆ.

ಇವರ ಮದುವೆಗೆ ಅವರ ಬಂಧು ಮಿತ್ರರೆಲ್ಲರೂ ಹಾಜರಾಗಿದ್ದರು. ಬಿ.ಟೆಕ್ ಪದವಿ ಪಡೆದಿರುವ ಪವನ್ ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿದ್ದಾರೆ. ಪವನ್ ಮತ್ತು ಕ್ರಿಸ್ಟೆನ್ ಮದುವೆಯನ್ನು ಅವರ ಕುಟುಂಬದಲ್ಲಿ ಎಲ್ಲರೂ ಒಪ್ಪಿ ಮಾಡಿದ್ದಾರೆ. ಕ್ರಿಸ್ಟೆನ್ ತಾನು ಮೊದಲು ಕೂಡಾ ಭಾರತಕ್ಕೆ ಬಂದಿದ್ದೆ. ನನಗೆ ಈ ದೇಶ ಬಹಳ ಕಷ್ಟವಾಯಿತು. ಈಗ ಇಲ್ಲಿಯವರನ್ನೇ ಮದುವೆಯಾಗಿರುವುದು ಇನ್ನಷ್ಟು ಸಂತೋಷವನ್ನು ನೀಡಿದೆ ಎಂದು ಹೇಳಿದ್ದಾರೆ. ಈ ಜೋಡಿಯ ಫೋಟೋ ವೈರಲ್ ಆದ ಮೇಲೆ ಅನೇಕರು ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here