ಭಾನುವಾರ ಸಂಜೆ ತಪ್ಪದೇ ಈ ತಂತ್ರಗಳನ್ನು ಮಾಡಿ, ಹರಿದು ಬರುತ್ತದೆ ನಿಮ್ಮತ್ತ ಸುಖ, ಸಮೃದ್ಧಿ

0 2

ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ತನ್ನ ಸ್ವಂತ ಮನೆ, ಒಂದು ಉತ್ತಮ ವ್ಯಾಪಾರ, ವ್ಯವಹಾರ, ಒಳ್ಳೆಯ ಉದ್ಯೋಗ, ಕಾರು ಹೀಗೆ ಸುಖ ಜೀವನದ ಅವಶ್ಯಕತೆಗಳನ್ನು ಹೊಂದುವ ಆಸೆ ಅಥವಾ ಇಚ್ಛೆಯನ್ನು ಹೊಂದಿರುತ್ತಾನೆ. ತನ್ನ ಈ ಬಯಕೆಯನ್ನು ಈಡೇರಿಸಿಕೊಳ್ಳಲು ಅವನು ಹಣವನ್ನು ಗಳಿಸಲು, ಹಗಲಿರುಳು ಶ್ರಮಿಸುತ್ತಾನೆ. ಆದರೆ, ಕೆಲವೊಮ್ಮೆ ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಸಹಾ ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ನೀವು ಸಹಾ ಇಂತಹುದೊಂದು ಸಮಸ್ಯೆಯಿಂದ ಬಳಲುತ್ತಿದ್ದರೆ ತಂತ್ರ ಶಾಸ್ತ್ರದಲ್ಲಿ ತಿಳಿಸಿರುವಂತಹ ಈ ಅತ್ಯಂತ ಪರಿಣಾಮಕಾರಿ ತಂತ್ರಗಳನ್ನು ಅನುಸರಿಸಿ.

ಈ ತಂತ್ರಗಳನ್ನು ಕ್ರಮಬದ್ಧವಾಗಿ ಬಳಸುವುದರಿಂದ, ಆಚರಣೆಗೆ ತರುವುದರಿಂದ ವ್ಯಕ್ತಿಯು ತನ್ನ ಪ್ರತಿಯೊಂದು ಕನಸನ್ನು ನನಸು ಮಾಡಿಕೊಳ್ಳಬಹುದು. ಅಲ್ಲದೇ ಅದರಿಂದ ನಿಮ್ಮನ್ನು ಯಾರಿಂದಲೂ ಸಹಾ ತಡೆಯಲು ಆಗುವುದಿಲ್ಲ. ಆದರೆ ನೆನಪಿರಲಿ, ಅವುಗಳನ್ನು ಭಾನುವಾರ ಸಂಜೆ ಮಾತ್ರವೇ ಮಾಡಬೇಕು. ಬನ್ನಿ ಹಾಗಾದರೆ ಭಾನುವಾರ ಸಂಜೆ ಮಾಡಬೇಕಾದ ಈ ಪರಿಹಾರ ಕಾರ್ಯಗಳ ಬಗ್ಗೆ ತಿಳಿಯೋಣ.

ಭಾನುವಾರ ಸಂಜೆ, ಸೂರ್ಯಾಸ್ತವಾದ ನಂತರ ತಡಮಾಡದೇ ಒಂದು ಬೇವಿನ ಮರದ ಬಳಿಗೆ ಹೋಗಿ, ಆ ಮರದ ಕೆಳಗೆ ಸಾಸಿವೆ ಎಣ್ಣೆಯಿಂದ ನಾಲ್ಕು ಮುಖದ ದೀಪವನ್ನು ಬೆಳಗಿಸಿ. ಈ ರೀತಿ ದೀಪವನ್ನು ಬೆಳಗುವುದರಿಂದ ನಿಮ್ಮ ಮನೆಗೆ ಸಂತೋಷ ಮತ್ತು ಸಂಪತ್ತಿನ ಆಗಮನವು ಶೀಘ್ರದಲ್ಲೇ ಆಗುತ್ತದೆ ಎಂದು ಹೇಳಲಾಗಿದೆ. ಅಲ್ಲದೇ ಭಾನುವಾರ ಸಂಜೆ ಮನೆಯ ಮುಖ್ಯ ಬಾಗಿಲಿನ ಎರಡೂ ಬದಿಗಳಲ್ಲಿ ಹಸುವಿನ ತುಪ್ಪದ ದೀಪವನ್ನು ಬೆಳಗಿಸಿದರೆ, ದೇವಿ ಲಕ್ಷ್ಮಿ ಯಾವುದೋ ಒಂದು ರೂಪದಲ್ಲಿ ಮನೆಗೆ ಪ್ರವೇಶಿಸುತ್ತಾಳೆ ಎನ್ನಲಾಗಿದೆ.

ಭಾನುವಾರ ಸಂಜೆ ಶಿವನ ದೇವಸ್ಥಾನಕ್ಕೆ ಹೋಗಿ, ಅಲ್ಲಿ ಗೌರಿ ಶಂಕರನಿಗೆ ರುದ್ರಾಕ್ಷವನ್ನು ಅರ್ಪಿಸಿ. ಹೀಗೆ ರುದ್ರಾಕ್ಷವನ್ನು ಅರ್ಪಿಸುವುದರಿಂದ ಮನೆಯ ಸದಸ್ಯರಿಗೆ ಎದುರಾಗಿರುವ ಹಣದ ಕೊರತೆಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಭಾನುವಾರದ ಸಂಜೆ, ಆಲದ ಎಲೆಯ ಮೇಲೆ ನಿಮ್ಮ ಆಸೆಯನ್ನು ಬರೆಯಿರಿ. ಅನಂತರ ಅದನ್ನು ಪವಿತ್ರ ನದಿಯ ಹರಿಯುವ ನೀರಿನಲ್ಲಿ ತೇಲಿಸಿ ಬಿಡಿ. ಹೀಗೆ ಮಾಡುವುದರಿಂದ ನಿಮ್ಮ ಬಯಕೆಗಳು ಶೀಘ್ರದಲ್ಲೇ ಈಡೇರುತ್ತವೆ ಎನ್ನಲಾಗಿದೆ.

ಭಾನುವಾರ ರಾತ್ರಿ ಮಲಗುವ ಮುನ್ನ ಒಂದು ಲೋಟದಲ್ಲಿ ಹಸುವಿನ ಹಾಲನ್ನು ತುಂಬಿ ಈ ಲೋಟವನ್ನು ಮಲಗುವಾಗ ತಲೆ ಹಾಕುವ ದಿಕ್ಕಿನಲ್ಲಿ ಸ್ವಲ್ಪ ಅಂತರದಲ್ಲಿ ಇಟ್ಟುಕೊಂಡು ಮಲಗಿ. ಗ್ಲಾಸ್ ಇಟ್ಟುಕೊಳ್ಳುವಾಗ ಜಾಗರೂಕರಾಗಿರಿ, ಏಕೆಂದರೆ ನಿದ್ರೆಯ ಸಮಯದಲ್ಲಿ ಹಾಲಿನ ಲೋಟಕ್ಕೆ ನಿಮ್ಮ ಕೈ ತಾಕಿ ಅದು ಬೀಳಬಾರದು. ಮುಂಜಾನೆ ಎದ್ದು, ಸ್ನಾನ ಮುಗಿಸಿ, ಪೂಜೆ ಮಾಡಿದ ನಂತರ ನೀವೇ ಹಾಲನ್ನು ಗ್ರಹಿಸಿ. ಇದರಿಂದ ಎಲ್ಲಾ ಸ್ಥಗಿತಗೊಂಡ ಕೆಲಸಗಳು ಸಹ ಪ್ರಾರಂಭವಾಗುತ್ತವೆ ಎನ್ನಲಾಗಿದೆ.

Leave A Reply

Your email address will not be published.