ಭಗತ್ ಸಿಂಗ್ ಗೆ ನೇ ಣು ಶಿ ಕ್ಷೆ ಆಗಲೆಂದು ಗಾಂಧೀಜಿ ಬಯಸಿದ್ದರು: ಆ ರೋ ಪ ಗಳ ಸುರಿಮಳೆಗೈದ ನಟಿ ಕಂಗನಾ ರಣಾವತ್

Entertainment Featured-Articles News
85 Views

ಬಾಲಿವುಡ್ ನಟಿ, ಪದ್ಮಶ್ರೀ ಪುರಸ್ಕೃತೆ ನಟಿ ಕಂಗನಾ ರಣಾವತ್ ಇತ್ತೀಚೆಗೆ ಒಂದಲ್ಲಾ ಒಂದು ಹೇಳಿಕೆ ನೀಡುವುದು, ಅದರಿಂದ ಉದ್ಭವಿಸುವ ವಿ ವಾ ದಗಳು ಹಾಗೂ ಚರ್ಚೆಗಳಿಂದಲೇ ಸದಾ ಸದ್ದನ್ನು ಮಾಡುವುದು ಸಹಾ ಸಹಜವಾಗಿದೆ. ಪದ್ಮಶ್ರೀ ಸ್ವೀಕರಿಸಿದ ಬೆನ್ನಲ್ಲೇ ಮಾದ್ಯಮವೊಂದರ ಸಂದರ್ಶನದಲ್ಲಿ ಕಂಗನಾ 1947 ರಲ್ಲಿ ಭಾರತಕ್ಕೆ ದಕ್ಕಿದ್ದು ಸ್ವಾತಂತ್ರ್ಯ ವಲ್ಲ ಅದು ಭಿಕ್ಷೆ ಎಂದು ಹೇಳುವ ಮೂಲಕ ಒಂದು ದೊಡ್ಡ ಸಂಚಲನವನ್ನು ಹುಟ್ಟು ಹಾಕಿದ್ದರು. ಕಂಗನಾ ನೀಡಿದ ಹೇಳಿಕೆಗೆ ವ್ಯಾಪಕ ವಿ ರೋ ಧ ಗಳು ವ್ಯಕ್ತಿವಾಗಿದ್ದವು.

ಕೆಲವು ಕಡೆಗಳಲ್ಲಿ ಕಂಗನಾ ವಿ ರು ದ್ಧ ದೂರುಗಳು ದಾಖಲಾದವು. ದೆಹಲಿಯ ಮಹಿಳಾ ಆಯೋಗ ಕಂಗನಾಗೆ ನೀಡಿರುವ ಪದ್ಮಶ್ರೀ ಯನ್ನು ಹಿಂದಕ್ಕೆ ಪಡೆಯಬೇಕೆಂದು ರಾಷ್ಟ್ರಪತಿಯವರಿಗೆ ಪತ್ರ ಕೂಡಾ ರವಾನಿಸಿತು. ಹೀಗೆ ಕಂಗನಾ ಆಡಿದ ಆ ಮಾತು ಇನ್ನೂ ಕೂಡಾ ಚರ್ಚೆಗಳಲ್ಲಿ ಇರುವಾಗಲೇ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಸ್ವಾತಂತ್ರ್ಯ ದ ವಿಚಾರವಾಗಿ ಮತ್ತೊಂದು ಹೊಸ ಪೋಸ್ಟ್ ಹಾಕುವ ಮೂಲಕ ಕಂಗನಾ ಮತ್ತೊಮ್ಮೆ ವಿ ವಾ ದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಕಂಗನಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ 1940 ರ ಪತ್ರಿಕೆಯ ಒಂದು ಸುದ್ದಿಯ ಫೋಟೋ ಹಂಚಿಕೊಂಡಿದ್ದು, ಇದರಲ್ಲಿ “ಗಾಂಧಿ ಮತ್ತು ಇತರರು ನೇತಾಜಿ ಯನ್ನು ಹಸ್ತಾಂತರಿಸಲು ಒಪ್ಪಿಕೊಂಡರು” ಎನ್ನುವ ಶೀರ್ಷಿಕೆಯನ್ನು ಹೊಂದಿದೆ. ಇನ್ನೊಂದು ಪೋಸ್ಟ್ ನಲ್ಲಿ ಗಾಂಧಿಜಿ, ಸುಭಾಷ್ ಚಂದ್ರ ಭೋಸ್ ಮತ್ತು ಭಗತ್ ಸಿಂಗ್ ಗೆ ಎಂದೂ ಬೆಂಬಲವನ್ನು ನೀಡಲಿಲ್ಲ. ಭಗತ್ ಸಿಂಗ್ ಗೆ ನೇ ಣು ಶಿ ಕ್ಷೆಯಾಗಲಿ ಎಂದು ಗಾಂಧೀಜಿ ಬಯಸಿದ್ದರು ಎನ್ನುವುದಕ್ಕೆ ಸಾಕ್ಷಿಗಳಿವೆ. ಯಾರಿಗೆ ಬೆಂಬಲ ನೀಡಬೇಕು ಆಯ್ಕೆ ಮಾಡಿ.

ಸ್ವಾತಂತ್ರ್ಯ ಕ್ಕಾಗಿ ಹೋರಾಟ ಮಾಡಿದವರನ್ನು ಹೋರಾಟ ಮಾಡಲು ಧೈರ್ಯವಿಲ್ಲದವರು ಅಧಿಕಾರ ದಾಹವುಳ್ಳವರು ಹಾಗೂ ಕುತಂತ್ರಿಗಳು ತಮ್ಮ ಯಜಮಾನರಿಗೆ ಹಸ್ತಾಂತರ ಮಾಡಿದರು. ಅಂತಹವರು ನಮಗೆ ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸಬೇಕು ಎಂದು ಬೋಧಿಸುತ್ತಾರೆ. ನಾವು ಹಾಗೆ ಸ್ವತಂತ್ರ ಪಡೆದಿದ್ದೇವೆ. ಅಂದ ಮೇಲೆ ಅದು ಹೇಗೆ ಸ್ವತಂತ್ರವಾಗುತ್ತದೆ. ಆ ರೀತಿಯಲ್ಲಿ ಪಡೆದಿದ್ದು ಕೇವಲ ಭಿಕ್ಷೆ, ನಿಮ್ಮ ನಾಯಕರನ್ನು ಜಾಣ್ಮೆಯಿಂದ ಆರಿಸಿಕೊಳ್ಳಿ ಎಂದಿದ್ದಾರೆ ಕಂಗನಾ.

Leave a Reply

Your email address will not be published. Required fields are marked *