ಬ್ರೇಕ್ ನಂತರ ಸ್ಟಾರ್ ನಟನ ಜೊತೆ ಭರ್ಜರಿ ಕಮ್ ಬ್ಯಾಕ್ ಗೆ ಸಜ್ಜಾದ ಅನುಷ್ಕಾ ಶೆಟ್ಟಿ

Written by Soma Shekar

Published on:

---Join Our Channel---

ಬಹುಭಾಷಾ ನಟಿ, ವಿಶೇಷವಾಗಿ ತೆಲುಗು ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದ ನಟ ಅನುಷ್ಕಾ ಶೆಟ್ಟಿ ಕಳೆದ ಕೆಲವು ಸಮಯದಿಂದ ಸಿನಿಮಾ ರಂಗದಿಂದ ಒಂದು ಬ್ರೇಕ್ ಪಡೆದುಕೊಂಡಿದ್ದಾರೆ. ಸಿನಿಮಾ ರಂಗದಲ್ಲಿ ನಟಿ ಅನುಷ್ಕಾ ಶೆಟ್ಟಿ ಎಂದರೆ ಬಹು ದೊಡ್ಡ ಅಭಿಮಾನಿಗಳ ಬಳಗವೇ ಇದೆ‌. ನಾಯಕ ನಟರಂತೆ ಸ್ಟಾರ್ ಡಂ ಹೊಂದಿರುವ ನಟಿ ಅನುಷ್ಕಾ ಶೆಟ್ಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ತನ್ನ ಅಂದ ಹಾಗೂ ನಟನೆಯ ಮೂಲಕ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಅನುಷ್ಕಾ ಶೆಟ್ಟಿ ತೆರೆಯ ಮೇಲೆ ಕಂಡು ಬಹು ದಿನಗಳಾಗಿದ್ದರಿಂದ ಅಭಿಮಾನಿಗಳು ನಟಿಯ ಕಮ್ ಬ್ಯಾಕ್ ಗಾಗಿ ಕಾಯುತ್ತಿದ್ದಾರೆ.

ಕಳೆದ ಹದಿನೇಳು ವರ್ಷಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯವಾಗಿರುವ ನಟಿ ಅನುಷ್ಕಾ ಈಗಾಗಲೇ ಬಹುತೇಕ ಸ್ಟಾರ್ ನಟರೆಲ್ಲರ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ನಾಯಕಿ ಪ್ರಧಾನ ಪಾತ್ರದ ಸಿನಿಮಾಗಳಲ್ಲಿ ನಟಿಸಿ ತನ್ನದೇ ಆದ ಛಾಪನ್ನು ಸಹಾ ಮೂಡಿಸಿದ್ದಾರೆ. ನಿಶ್ಯಬ್ದಂ ಸಿನಿಮಾ ನಂತರ ಅನುಷ್ಕಾ ಯಾವುದೇ ಹೊಸ ಸಿನಿಮಾದಲ್ಲಿ ನಟಿಸಿಲ್ಲ. ಆಗಾಗ ಅವರ ಹೊಸ ಸಿನಿಮಾ ಬಗ್ಗೆ ಸುದ್ದಿಯಾಗುತ್ತದೆಯಾದರೂ ಅದರ ಬಗ್ಗೆ ಯಾವುದೇ ರೀತಿಯ ಅಧಿಕೃತ ಘೋಷಣೆ ಮಾತ್ರ ಆಗಿಲ್ಲ.

ಈಗ ಇವೆಲ್ಲವುಗಳ ನಡುವೆ ಟಾಲಿವುಡ್ ಅಂಗಳದಿಂದ ಹೊಸದೊಂದು ಸುದ್ದಿ ಹೊರ ಬಂದಿದೆ. ಅದೇನೆಂದರೆ ನಟಿ ಅನುಷ್ಕಾ ಶೆಟ್ಟಿ ಹೊಸ ಸಿನಿಮಾವೊಂದರ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ ಎನ್ನಲಾಗಿದ್ದು ಅದು ಕೂಡಾ ತೆಲುಗಿನ ಸ್ಟಾರ್ ನಟನ ಜೊತೆಗೆ ನಟಿ ಅನುಷ್ಕಾ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನುವುದು ಇನ್ನೂ ವಿಶೇಷವಾಗಿದ್ದು. ಆ ಸ್ಟಾರ್ ನಟ ಮತ್ತಾರೂ ಅಲ್ಲ ಟಾಲಿವುಡ್ ನ ಮೆಗಾಸ್ಟಾರ್ ಚಿರಂಜೀವಿ ಅವರ ಜೊತೆ ಅನುಷ್ಕಾ ನಾಯಕಿಯಾಗಲಿದ್ದಾರೆ ಎನ್ನಲಾಗಿದೆ.

ನಟಿ ಅನುಷ್ಕಾ ಈ ಹಿಂದೆ ಮೆಗಾಸ್ಟಾರ್ ಅಭಿನಯದ ಸ್ಟಾಲಿನ್ ಸಿನಿಮಾದಲ್ಲಿ ವಿಶೇಷ ಹಾಡಿನಲ್ಲಿ ಚಿರಂಜೀವಿ ಜೊತೆ ಹೆಜ್ಜೆ ಹಾಕಿದ್ದರು. ಅದಾದ ನಂತರ ನಟ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ರಾಣಿ ಲಕ್ಷ್ಮೀಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದುವರೆಗೆ ಯಾವುದೇ ಸಿ‌ನಿಮಾದಲ್ಲಿ ಅನುಷ್ಕಾ ಚಿರಂಜೀವಿ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿಲ್ಲ. ಸದ್ಯಕ್ಕೆ ಮೆಗಾಸ್ಟಾರ್ ಅಭಿನಯದ ಆಚಾರ್ಯ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅಲ್ಲದೇ ಗಾಡ್ ಫಾದರ್, ಬೋಳಾ ಶಂಕರ್ ಪ್ರಗತಿಯಲ್ಲಿದೆ.

Leave a Comment