HomeEntertainmentಬ್ರೇಕಿಂಗ್ ಸುದ್ದಿ: ವಿಚಾರಣೆಗೆ ಹಾಜರಾಗುವಂತೆ ಬಾಲಿವುಡ್ ನಟಿ ಐಶ್ವರ್ಯ ರೈ ಗೆ ED ನೋಟೀಸ್!!

ಬ್ರೇಕಿಂಗ್ ಸುದ್ದಿ: ವಿಚಾರಣೆಗೆ ಹಾಜರಾಗುವಂತೆ ಬಾಲಿವುಡ್ ನಟಿ ಐಶ್ವರ್ಯ ರೈ ಗೆ ED ನೋಟೀಸ್!!

ಬಾಲಿವುಡ್ ನಟಿ ಐಶ್ವರ್ಯ ರೈ ಮತ್ತೊಮ್ಮೆ ಮುನ್ನಲೆಗೆ ಬಂದಿದ್ದಾರೆ. ನಟಿ ಐಶ್ವರ್ಯ ರೈ ಈಗ ಸುದ್ದಿಯಾಗಿರುವುದು ತಮ್ಮ ಯಾವುದೇ ಹೊಸ ಸಿನಿಮಾ ಅಥವಾ ಹೊಸ ಜಾಹೀರಾತು ಇಲ್ಲವೇ ಹೊಸ ಬ್ರಾಂಡ್ ನ ರಾಯಭಾರಿಯಾಗಿ ಅಲ್ಲ. ಬದಲಾಗಿ ಅ ಕ್ರ ಮ ಹಣ ವರ್ಗಾವಣೆ ಪ್ರಕರಣದ ವಿಚಾರವಾಗಿ. ಹೌದು ಬಾಲಿವುಡ್ ನಟಿ ಹಾಗೂ ಬಚ್ಚನ್ ಕುಟುಂಬದ ಸೊಸೆಯಾಗಿರುವ ಐಶ್ವರ್ಯ ರೈ ಅವರಿಗೆ ‘ಪನಾಮ ಪೇಪರ್ಸ್ ಲೀಕ್’ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ( ED ) ನೋಟಿಸ್ ಜಾರಿ ಮಾಡಿದೆ ಎನ್ನುವ ವಿಚಾರ ಈಗ ಹೊರ ಬಂದಿದೆ.

ನಟಿ ಐಶ್ವರ್ಯ ರೈ ತನ್ನ ಹೇಳಿಕೆಯನ್ನು ದಾಖಲು ಮಾಡಲು ಅಥವಾ ಬೇರೊಂದು ದಿನಾಂಕಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡುವ ಮನವಿಯನ್ನು ಮಾಡಲು ಇಂದು ಏಜನ್ಸಿಯ ಮುಂದೆ ಹಾಜರಾಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ರಾಷ್ಟ್ರೀಯ ಮಾದ್ಯಮವೊಂದರ ವರದಿಯ ಪ್ರಕಾರ ಇಡಿ ಈ ವಿಷಯದಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆ 2002 ( PMLA) ಅಡಿಯಲ್ಲಿ ಮನಿ ಲ್ಯಾಂಡರಿಂಗ್ ಪ್ರಕರಣವನ್ನು ದಾಖಲು ಮಾಡಿದೆ ಎನ್ನಲಾಗಿದೆ.

ಪನಾಮ ಪೇಪರ್ಸ್ ಸೋರಿಕೆ ಏಪ್ರಿಲ್ 2016 ರಲ್ಲಿ ಪ್ರಕಟವಾದ 11.5 ಮಿಲಿಯನ್ ಲೀಕ್ ಆದ ಎನ್ ಕ್ರಿಪ್ಟ್ ಮಾಡಿದ ಗೌಪ್ಯ ದಾಖಲೆಗಳಾಗಿವೆ. ಈ ಸೋರಿಕೆಯು ಸಾಗರದಾಚೆಗಿನ 214,488 ಹಣಕಾಸಿನ ಘಟಕಗಳ ವಿವರಗಳನ್ನು ಬಹಿರಂಗ ಪಡಿಸಿತ್ತು. ಕೆಲವು ದಾಖಲೆಗಳು 1970 ಕ್ಕೂ ಹಿಂದಿನ ದಶಕದ್ದವು ಎನ್ನಲಾಗಿದ್ದು ಅವು ಪನಾಮಾನಿಯನ್ ಆಫ್‌ಶೋರ್ ಕಾನೂನು ಸಂಸ್ಥೆ ಮತ್ತು ಕಾರ್ಪೊರೇಟ್ ಸೇವಾ ಪೂರೈಕೆದಾರ ಮೊಸಾಕ್ ಫೋನ್ಸೆಕಾ ಅವರಿಂದ ಮಾಡಲ್ಪಟ್ಟಿದೆ ಎನ್ನಲಾಗಿದೆ.

ವೈಯಕ್ತಿಕ ಹಣಕಾಸು ಮಾಹಿತಿಯನ್ನು ಹೊಂದಿರುವ ಡಜನ್ ಗಟ್ಟಲೆ ದಾಖಲೆಗಳಲ್ಲಿ ಸೋರಿಕೆಯಾದ ಹೆಸರುಗಳಲ್ಲಿ ಪ್ರಸ್ತುತ ಹಾಗೂ ಮಾಜಿ ನಾಯಕರು, ರಾಜಕಾರಣಿಗಳು, ಸಾರ್ವಜನಿಕ ಅಧಿಕಾರಿಗಳು, ಸೆಲೆಬ್ರಿಟಿಗಳು, ಕಾರ್ಪೋರೇಟ್ ವರ್ಗದವರು ಸೇರಿದ್ದಾರೆ. ಅದರಲ್ಲಿ ಬಚ್ಚನ್ ಕುಟುಂಬದ ಹೆಸರು ಕೂಡಾ ಇದೆ. ಇದೇ ವಿಚಾರವಾಗಿ ಈಗ ಐಶ್ವರ್ಯ ರೈ ಅವರಿಗೆ ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡಲಾಗಿದೆ.

- Advertisment -