ಬ್ರಹ್ಮಾಸ್ತ್ರ ಪ್ರಚಾರಕ್ಕೆ ರಾಜಮೌಳಿ ಪಡೆದ ಕೋಟಿಗಳೆಷ್ಟು? ಸಂಚಲನ ಸೃಷ್ಟಿಸಿದೆ ಈ ಹೊಸ ಸುದ್ದಿ

Written by Soma Shekar

Published on:

---Join Our Channel---

ದಕ್ಷಿಣ ಸಿನಿಮಾ ರಂಗದಲ್ಲಿ ಪಾತ್ರವೇ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಸ್ಟಾರ್ ‌ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು. ದಕ್ಷಿಣ ಸಿನಿಮಾ ರಂಗದ ಗತ್ತನ್ನು ದೇಶ ಮಾತ್ರವಲ್ಲದೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಹಾ ಸಾರಿದ್ದಾರೆ ರಾಜಮೌಳಿ. ಸೂಪರ್ ಹಿಟ್ ಸಿ‌ನಿಮಾಗಳನ್ನು ನಿರ್ದೇಶನ ಮಾಡಿ ಅಪಾರ ಅಭಿಮಾನಿಗಳನ್ನು ಹಾಗೂ ಜನಪ್ರಿಯತೆಯನ್ನು ಪಡೆದಿರುವ ರಾಜಮೌಳಿ ಅವರ ಕುರಿತಾಗಿ ಹೊಸ ವಿಷಯವೊಂದು ಹರಿದಾಡಿ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ಸ್ಟಾರ್ ನಟರಿಗಿಂತ ಹೆಚ್ಚು ಸಂಭಾವನೆ ಪಡೆಯುವ ಈ ನಿರ್ದೇಶಕನ ಮೇಲೆಯೇ ಹೊಸದೊಂದು ಆ ಪಾ ದ ನೆ ಕೇಳಿ ಬಂದಿದ್ದು, ಅಚ್ಚರಿ ಮೂಡಿಸಿದೆ.

ಹೌದು, ಬಾಲಿವುಡ್ ನ ಬ್ರಹ್ಮಾಸ್ತ್ರ ಸಿನಿಮಾವನ್ನು ಸ್ಥಳೀಯ ಭಾಷೆಗಳಲ್ಲಿ ಯಶಸ್ಸು ಪಡೆದು, ಸಿನಿಮಾ ಗೆದ್ದು ಮುನ್ನಗ್ಗುವುದಕ್ಕೆ ರಾಜಮೌಳಿ ಅವರು ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎನ್ನುವ ಹೊಸ ವಿಷಯವೊಂದು ಈಗ ಹರಿದಾಡಿದೆ. ಬ್ರಹ್ಮಾಸ್ತ್ರ ಸಿನಿಮಾವನ್ನು ತೆಲುಗು ರಾಜ್ಯಗಳಲ್ಲಿ ಪ್ರಮೋಟ್ ಮಾಡುವ ಜವಾಬ್ದಾರಿ ರಾಜಮೌಳಿ ಅವರು ವಹಿಸಿಕೊಂಡಿದ್ದು ಎಲ್ಲರಿಗೂ ತಿಳಿದೇ ಇದೆ. ತೆಲುಗಿನ ಕಿರುತೆರೆಯಲ್ಲಿ ತಮ್ಮ ಸಿನಿಮಾ ಪ್ರಚಾರ ಕ್ಕೂ ಬರದ ರಾಜಮೌಳಿ ಅವರು ಬ್ರಹ್ಮಾಸ್ತ್ರ ಸಿನಿಮಾದ ಪ್ರಚಾರಕ್ಕಾಗಿ ಬರುವ ಮೂಲಕ ದೊಡ್ಡ ಅಚ್ಚರಿಯನ್ನು ಮೂಡಿಸಿದ್ದರು.

ಅದೂ ಅಲ್ಲದೇ ರಾಜಮೌಳಿ ಮತ್ತು ಜೂನಿಯರ್ ಎನ್ ಟಿ ಆರ್ ಮುಂದಾಳತ್ವದಲ್ಲಿ ಬ್ರಹ್ಮಾಸ್ತ್ರದ ಒಂದು ಈವೆಂಟ್ ಸಹಾ ನಡೆಯಬೇಕಾಗಿತ್ತು. ಆದರೆ ಭದ್ರತೆಯ ದೃಷ್ಟಿಯಿಂದ ಸರ್ಕಾರ ಕಠಿಣ ಎಂದ ಕಾರಣಕ್ಕೆ ಆ ಈವೆಂಟ್ ನಡೆದಿರಲಿಲ್ಲ. ಆದರೆ ರಾಜಮೌಳಿ ಅವರು ಮಾತ್ರ ತಮ್ಮದೇ ಸಿನಿಮಾ ಎನ್ನುವಂತೆ ಬ್ರಹ್ಮಾಸ್ತ್ರದ ಪ್ರಮೋಷನ್ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಸಿನಿಮಾ ಯಶಸ್ಸಿಗೆ ರಾಜಮೌಳಿ ತನ್ನಿಂದ ಆದ ಎಲ್ಲಾ ಪ್ರಯತ್ನ ಮಾಡಿದ್ದರು. ಆದರೆ ಈಗ ರಾಜಮೌಳಿ ಅವರು ತಮ್ಮ ಈ ಕಾರ್ಯಕ್ಕಾಗಿ ಬರೋಬ್ಬರಿ 10 ಕೋಟಿ ರೂ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಹರಿದಾಡಿ ಸಂಚಲನ ಸೃಷ್ಟಿಸಿದೆ.

Leave a Comment