ಬ್ರಹ್ಮಾಸ್ತ್ರದಲ್ಲಿ ರಣಬೀರ್ ಗೆ ತಾಯಿಯಾದ ನಟನ ಮಾಜಿ ಪ್ರೇಯಸಿ: ಫೋಟೋ ನೋಡಿ ಶಾಕ್ ಮತ್ತು ಥ್ರಿಲ್ ಆದ ನೆಟ್ಟಿಗರು
ಬಾಯ್ಕಾಟ್ ಬ್ರಹ್ಮಾಸ್ತ್ರ ಎಂದು ಒಂದು ಕಡೆ ಕೂಗು ಕೇಳಿ ಬರುತ್ತಿದ್ದರೂ ಸಹಾ ಇನ್ನೊಂದು ಕಡೆ ಅದರ ನಡುವೆಯೇ ಬಿಡುಗಡೆಯಾಗಿ, ಭರ್ಜರಿ ಗೆಲುವನ್ನು ಪಡೆದುಕೊಂಡು ಮುನ್ನುಗ್ಗುತ್ತಿದೆ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಸಿನಿಮಾ. ಬ್ರಹ್ಮಾಸ್ತ್ರ ಕೋಟಿ ಕೋಟಿ ರೂಪಾಯಿಗಳ ಗಳಿಕೆಯನ್ನು ಕಂಡಿದೆ ಎನ್ನುವ ವರದಿಗಳಾಗಿದ್ದು, ಸಿನಿಮಾದ ಕಥೆ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದೆ ಎನ್ನುವ ಸುದ್ದಿಗಳು ಸಹಾ ಸದ್ದು ಮಾಡಿದೆ. ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ದಕ್ಷಿಣದ ಸ್ಟಾರ್ ನಟ ನಾಗಾರ್ಜುನ ಮತ್ತು ಬಾಲಿವುಡ್ ನ ಸ್ಟಾರ್ ನಟ ಶಾರೂಖ್ ಖಾನ್ ಸಹಾ ನಟಿಸಿರುವುದು ಸಿನಿಮಾದ ಮತ್ತೊಂದು ವಿಶೇಷವಾಗಿದ್ದು, ಇದು ವಿಶೇಷ ಆಕರ್ಷಣೆ ಸಹಾ ಆಗಿದೆ.
ಈಗ ಇವೆಲ್ಲವುಗಳ ನಡುವೆಯೇ ಸಿನಿಮಾದ ಕುರಿತಾಗಿ ಒಂದು ಬಹಳ ಆಸಕ್ತಿಕರ ಅಪ್ಡೇಟ್ ಹೊರ ಬಂದಿದ್ದು, ಎಲ್ಲರ ಗಮನವನ್ನು ಸೆಳೆದಿರುವುದು ಮಾತ್ರವೇ ಅಲ್ಲದೇ ಅಚ್ಚರಿಯನ್ನು ಸಹಾ ಮೂಡಿಸುತ್ತಲೇ, ಟ್ರೋಲ್ ಮಾಡುವವರಿಗೆ ಭರ್ಜರಿ ಕಂಟೆಂಟ್ ಸಹಾ ಒದಗಿಸುತ್ತಿದೆ. ಹಾಗಾದ್ರೆ, ಅಂತದ್ದೇನು ವಿಷಯ ಎನ್ನುವ ಕುತೂಹಲ ನಿಮ್ಮದಾದರೆ ಅದಕ್ಕೆ ಉತ್ತರ ಇಲ್ಲಿದೆ. ಬಹ್ರ್ಮಾಸ್ತ್ರ ಸಿನಿಮಾದಲ್ಲಿ ನಟ ರಣಬೀರ್ ಕಪೂರ್ ಅವರ ತಾಯಿಯ ಪಾತ್ರದಲ್ಲಿ ನಟನ ಮಾಜಿ ಪ್ರೇಯಸಿ ಕಾಣಿಸಿಕೊಂಡಿದ್ದಾರೆ ಎನ್ನುವ ವಿಚಾರ ಈಗ ಸಖತ್ ಸೌಂಡ್ ಮಾಡುತ್ತಿದೆ. ಈ ವಿಚಾರ ತಿಳಿದು ಅಭಿಮಾನಿಗಳು ಮತ್ತು ಸಿನಿಮಾ ಪ್ರೇಮಿಗಳು ಸಹಾ ಅಚ್ಚರಿ ಪಡುತ್ತಿದ್ದಾರೆ.
ಬ್ರಹ್ಮಾಸ್ತ್ರ ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ ಸಹಾ ಒಂದು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎನ್ನುವ ವಿಷಯ ಸುದ್ದಿಯಾಗಿತ್ತು. ಅಲ್ಲದೇ ನಟಿಯು ಜಲಾಸ್ತ್ರದ ರೂಪದಲ್ಲಿ ಮಿಂಚಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಬೇರೆಯದ್ದೇ ಸುದ್ದಿ ಹರಿದಾಡಿದ್ದು, ಈ ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ ರಣಬೀರ್ ಕಪೂರ್ ಅವರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೌದು, ಸಿನಿಮಾದಲ್ಲಿ ನಾಯಕ ತಂದೆ ತಾಯಿಯಿಂದ ದೂರವಾದ, ಅವರನ್ನು ಕಳೆದುಕೊಂಡ ಶಿವ ಎನ್ನುವ ಪಾತ್ರವನ್ನು ಪೋಷಿಸಿದ್ದು, ಈ ಪಾತ್ರದ ತಾಯಿಯಾಗಿ ದೀಪಿಕಾ ನಟಿಸಿದ್ದಾರೆ ಎನ್ನಲಾಗಿದೆ.
ಸೋಶಿಯಲ್ ಮೀಡಿಯಾಗಳಲ್ಲಿ ಮತ್ತು ಅಂತರ್ಜಾಲದಲ್ಲಿ ಒಂದು ಫೋಟೋ ವೈರಲ್ ಆಗುತ್ತಿದ್ದು, ಇದರಲ್ಲಿ ದೀಪಿಕಾ ಪಡುಕೋಣೆ ಮಗುವೊಂದನ್ನು ಎತ್ತಿಕೊಂಡಿರುವುದನ್ನು ನೋಡಬಹುದಾಗಿದೆ. ಇದನ್ನು ನೋಡಿ ನೆಟ್ಟಿಗರು ಬ್ರಹ್ಮಾಸ್ತ್ರ ಸಿನಿಮಾದ ಕಥೆ ಯನ್ನು ಊಹೆ ಮಾಡಿದ್ದು, ಅದರ ಪ್ರಕಾರ ನಟಿ ದೀಪಿಕಾ ಪಡುಕೋಣೆ ರಣಬೀರ್ ಗೆ ತಾಯಿಯಾಗಿ ನಟಿಸಿದ್ದಾರೆ ಎನ್ನಲಾಗಿದೆ. ಇನ್ನು ನಟಿ ದೀಪಿಕಾ ಪಡುಕೋಣೆ ರಣಬೀರ್ ಕಪೂರ್ ಅವರ ಮಾಜಿ ಪ್ರೇಯಸಿ ಎನ್ನುವ ವಿಚಾರ ಖಂಡಿತ ರಹಸ್ಯವಾಗಿ ಅಂತೂ ಇಲ್ಲ. ಅವರ ನಡುವಿನ ಸ್ನೇಹ, ಪ್ರೇಮ ಮತ್ತು ಬ್ರೇಕಪ್ ವಿಚಾರಗಳು ಸುದ್ದಿಯಾಗಿದ್ದವು. ಈಗ ಸಿನಿಮಾದಲ್ಲಿ ನಟಿ ರಣಬೀರ್ ಗೆ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ ಎನ್ನುವುದು ಕುತೂಹಲ ಕೆರಳಿಸಿದೆ.