ಬ್ಯುಸಿ ಶೆಡ್ಯೂಲ್ ನಿಂದ ಬ್ರೇಕ್ ಪಡೆದು, ಗೋವಾದಲ್ಲಿ ಸ್ನೇಹಿತರ ಜೊತೆ ಎಂಜಾಯ್ ಮಾಡುತ್ತಿರುವ ಕಿರುತೆರೆಯ ಜನಪ್ರಿಯ ನಟ

0 0

ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಜನಪ್ರಿಯ ಧಾರಾವಾಹಿಗಳು ಈಗಾಗಲೇ ಜನರ ಮನಸ್ಸನ್ನು ಗೆದ್ದಿವೆ. ಈ ಜನಪ್ರಿಯ ಧಾರಾವಾಹಿಗಳ ಪ್ರಮುಖ ಪಾತ್ರಗಳ ಮೂಲಕ ಬಹಳಷ್ಟು ಜನ ಕಲಾವಿದರು ಕಿರುತೆರೆಯ ಪ್ರೇಕ್ಷಕರ ಮೆಚ್ಚಿನ ಕಲಾವಿದರಾಗಿ ಹೊರಹೊಮ್ಮಿದ್ದಾರೆ. ಕಿರುತೆರೆಯ ಪ್ರೇಕ್ಷಕರು ಈ ಕಲಾವಿದರನ್ನು ಅವರ ಅಸಲಿ ಹೆಸರಿಗೆ ಬದಲಾಗಿ ಧಾರಾವಾಹಿಗಳಲ್ಲಿ ಅವರ ಪಾತ್ರಗಳ ಹೆಸರುಗಳ ಮೂಲಕವೇ ಗುರುತಿಸುವಷ್ಟು ಮಟ್ಟಕ್ಕೆ ಅವರು ಜನಪ್ರಿಯತೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಂತಹದೊಂದು ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟ ಅಭಿಷೇಕ್ ದಾಸ್. ಹೌದು ಕನ್ನಡ ಕಿರುತೆರೆಯಲ್ಲಿ ಯಶಸ್ಸನ್ನು ಪಡೆದುಕೊಂಡು ಟಿಆರ್ಪಿಯಲ್ಲಿ ಉತ್ತಮ ಸ್ಥಾನವನ್ನು ಪಡೆದಿರುವ ಗಟ್ಟಿಮೇಳ ಧಾರಾವಾಹಿಯಲ್ಲಿ ನಾಯಕ ವೇದಾಂತ್ ವಸಿಷ್ಠ ನ ಸಹೋದರ ವಿಕ್ರಾಂತ್ ವಸಿಷ್ಠ ಅಥವಾ ವಿಕ್ಕಿ ಪಾತ್ರದಲ್ಲಿ ಅಭಿಷೇಕ್ ಅವರು ನಟಿಸುತ್ತಿದ್ದಾರೆ.

ವಿಕ್ಕಿಯ ಪಾತ್ರದ ಮೂಲಕ ಈಗಾಗಲೇ ದೊಡ್ಡ ಮಟ್ಟದಲ್ಲಿ ಹೆಸರನ್ನು ಪಡೆದಿರುವ ಈ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರ ನಟನೆಯ ಅಂಬಿ ನಿನಗೆ ವಯಸ್ಸಾಯ್ತು ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅಭಿಷೇಕ್ ದಾಸ್ ಅವರಿಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟಿದ್ದು ಮಾತ್ರ ಗಟ್ಟಿಮೇಳ ಧಾರಾವಾಹಿಯ ಪಾತ್ರ ಎಂದರೆ ತಪ್ಪಾಗುವುದಿಲ್ಲ. ಇದೀಗ ಬಹಳ ದಿನಗಳ ನಂತರ ಅಭಿಷೇಕ್ ತಮ್ಮ ಬಿಡುವಿಲ್ಲದ ಶೂಟಿಂಗ್ ಶೆಡ್ಯೂಲ್ ನಿಂದ ಒಂದು ಸಣ್ಣ ಬ್ರೇಕ್ ಪಡೆದುಕೊಂಡು, ತಮ್ಮ ಸ್ನೇಹಿತರ ಜೊತೆಗೆ ಗೋವಾದಲ್ಲಿ ಸಂತೋಷದ ಸಮಯವನ್ನು ಕಳೆಯುತ್ತಿದ್ದಾರೆ. ಲಾಕ್ ಡೌನ್ ನಿರ್ಬಂಧಗಳು ಸಡಿಲಗೊಂಡ ಹಿನ್ನೆಲೆಯಲ್ಲಿ ಟ್ರಾವೆಲಿಂಗ್ ಇಷ್ಟಪಡುವ ಅಭಿಷೇಕ್ ದಾಸ್ ಅವರು ತಮ್ಮ ಸ್ನೇಹಿತರೊಟ್ಟಿಗೆ ಗೋವಾಕ್ಕೆ ತೆರಳಿ ಆಹ್ಲಾದಕರ ವಾತಾವರಣದಲ್ಲಿ ಖುಷಿ ಪಡುತ್ತಿದ್ದಾರೆ.

ಬ್ರೇಕ್ ಮುಗಿಸಿಕೊಂಡು ಮತ್ತೆ ಅವರು ಕೆಲಸದಲ್ಲಿ ತೊಡಗಿಕೊಳ್ಳಲಿದ್ದಾರೆ. ಇನ್ನು ಅಭಿಷೇಕ್ ಅವರು ಈ ಹಿಂದೆ ನಟಿಸಿದ್ದ ಸರಯೂ ಧಾರಾವಾಹಿ ಇದೀಗ ಮತ್ತೊಮ್ಮೆ ಪ್ರಸಾರವನ್ನು ಆರಂಭಿಸಿರುವ ವಿಷಯವಾಗಿ ನಟ ಅಭಿಷೇಕ್ ಅವರು ಬಹಳ ಖುಷಿ ಪಟ್ಟಿದ್ದಾರೆ ಎನ್ನಲಾಗಿದೆ. ಅಭಿಷೇಕ್ ಅವರು ಕಿರುತೆರೆ ಹಾಗೂ ಸ್ಯಾಂಡಲ್ವುಡ್ ಎರಡನ್ನೂ ಬಹಳ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ. ಸಿನಿಮಾಗಳಲ್ಲಿ ಸಹಾ ತೊಡಗಿಕೊಂಡಿರುವ ಅವರು ಪ್ರಜ್ವಲ್ ದೇವರಾಜ್ ಅವರ ನಾಯಕ ನಟನಾಗಿರುವ ಅವರ ಹೊಸ ಸಿನಿಮಾ ಮಫ್ತಿ ಯಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ..

Leave A Reply

Your email address will not be published.