ಬೋಲ್ಡ್ ಕಂಗನಾ ಲಾಕ್ ಅಪ್ ನಲ್ಲಿ ಹಾಟ್ ನಟಿ ಪೂನಂ ಪಾಂಡೆ: ಸೂಪರ್ ಎಕ್ಸೈಟ್ಮೆಂಟ್ ಎಂದ ನೆಟ್ಟಿಗರು!!

Entertainment Featured-Articles News

ಬಾಲಿವುಡ್ ನಟಿ ಕಂಗನಾ ರಣಾವತ್ ಹೆಸರು ಕೇಳಿದರೆ ನಟಿ ಕಂಗನಾ ಯಾವ ಹೊಸ ಸೂಕ್ಷ್ಮ ವಿಚಾರದ ಬಗ್ಗೆ ವಿ ವಾ ದಾ ತ್ಮಕ ಹೇಳಿಕೆಯನ್ನು ನೀಡುವ ಮೂಲಕ ಮತ್ತೆ ಯಾವ ಹೊಸ ವಿವಾದವನ್ನು ಹುಟ್ಟು ಹಾಕಿದರು ಎನ್ನುವ ಅನುಮಾನ ಮೂಡುತ್ತದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ನಟಿ ಕಂಗನಾ ಸಿನಿಮಾಗಳಿಗಿಂತ ಹೆಚ್ಚಾಗಿ ಸದ್ದು ಮಾಡುವುದು ತಾವು ನೀಡುವ ಬೋಲ್ಡ್ ಹೇಳಿಕೆ ಗಳಿಂದ. ರಾಜಕೀಯ ಹಾಗೂ ಸಿನಿಮಾ ಮಂದಿಯನ್ನು ಕುರಿತು ಟೀಕೆ ಮಾಡುವ ಈ ನಟಿ ಬಾಲಿವುಡ್ ನ ಸ್ಟಾರ್ ಗಳನ್ನು ಸಹಾ ಎದುರು ಹಾಕಿಕೊಳ್ಳಲು ನಟಿ ಹಿಂದು ಮುಂದು ನೋಡುವುದಿಲ್ಲ.

ಇಂತಹ ಬೋಲ್ಡ್ ನಟಿಯ ನಿರೂಪಣೆಯಲ್ಲಿ ಬರಲು ಸಜ್ಜಾಗಿರುವ ರಿಯಾಲಿಟಿ ಶೋ ಲಾಕ್ ಅಪ್. ಕಿರುತೆರೆಯಲ್ಲಿ ದೊಡ್ಡ ಹೆಸರನ್ನು ಮಾಡಿರುವ ನಿರ್ಮಾಪಕಿ ಏಕ್ತಾ ಕಪೂರ್ ಅವರ ಹೋಂ ಪ್ರೊಡಕ್ಷನ್ ಎ ಎಲ್ ಟಿ ಬಾಲಾಜಿ ಯಲ್ಲಿ ಮತ್ತು ಎಂ ಎಕ್ಸ್ ಪ್ಲೇಯರ್ ನಂತರ ಓಟಿಟಿ ಪ್ಲಾಟ್ ಫಾರಂನಲ್ಲಿ ಇದೇ ಫೆಬ್ರವರಿ 27 ರಿಂದ ಲಾಕ್ ಅಪ್ ಶೋ ದಿನದ 24 ಗಂಟೆಗಳ ಕಾಲ ನೋಡಲು ಲಭ್ಯವಾಗಲಿದೆ. ಕಂಗನಾ ರಣಾವತ್ ನಿರೂಪಣೆಯಲ್ಲಿ ಶೋ ಎಂದು ಘೋಷಣೆಯಾಗಿರುವುದರಿಂದ ಸಹಜವಾಗಿಯೇ ಈ ಶೋ ಕುತೂಹಲವನ್ನು ಮೂಡಿಸಿದೆ.

ಈಗ ಈ ಶೋ ಕುರಿತಾಗಿ ಹೊಸ ಸುದ್ದಿಯೊಂದು ಹೊರ ಬಂದಿದೆ. ಈಗಾಗಲೇ ಲಾಕ್ ಅಪ್ ಶೋ ಗೆ ಹೋಗಲಿರುವ ಇಬ್ಬರು ಸ್ಪರ್ಧಿಗಳ ಹೆಸರು ಘೋಷಣೆ ಆಗಿದೆ. ಈಗ ಮೂರನೇ ಸ್ಪರ್ಧಿಯ ಹೆಸರು ಘೋಷಣೆ ಆಗಿದ್ದು ಎಲ್ಲರಿಗೂ ತೀವ್ರ ಕುತೂಹಲವನ್ನು ಮೂಡಿಸಿದೆ. ಶೋ ನ ಮೊದಲ ಸ್ಪರ್ಧಿಯಾಗಿ ನಟಿ ನಿಶಾ ರಾವಲ್, ಎರಡನೆಯ ಸ್ಪರ್ಧಿಯಾಗಿ ಸ್ಟಾಂಡಪ್ ಕಮಿಡಿಯನ್ ಮುನಾವರ್ ಫಾರೂಖಿ ಅವರ ಹೆಸರು ಘೋಷಣೆಯಾಗಿತ್ತು. ಈಗ ಮೂರನೇ ಸ್ಪರ್ಧಿಯ ಹೆಸರು ಘೋಷಣೆ ಆಗಿದೆ.

ಲಾಕ್ ಅಪ್ ರಿಯಾಲಿಟಿ ಶೋ ಗೆ ಹೋಗುತ್ತಿರುವ ಮೂರನೇ ಸ್ಪರ್ಧಿ ನಟಿ ಪೂನಂ ಪಾಂಡೆ ಎನ್ನಲಾಗಿದ್ದು, ನಿರ್ಮಾಪಕರು ಈ ಕುರಿತಾಗಿ ಪ್ರೋಮೋ ಸಹಾ ಬಿಡುಗಡೆ ಮಾಡಿದ್ದಾರೆ. ಪೂನಂ ಪಾಂಡೆ ತಮ್ಮ ಬೋಲ್ಡ್ ನೆಸ್ ನಿಂದ, ಸಾಮಾಜಿಕ ಜಾಲತಾಣಗಳಲ್ಲಿ ನೀಡುವ ವಿ ವಾ ದಾತ್ಮಕ ಹೇಳಿಕೆಗಳಿಂದ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ. ಅಲ್ಲದೇ ಇತ್ತೀಚಿಗೆ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅ ಶ್ಲೀ ಲ ಸಿನಿಮಾ ಪ್ರಕರಣದ ವೇಳೆ ಪೂನಂ ರಾಜ್ ಕುಂದ್ರಾ ವಿ ರು ದ್ಧ ಮಾತನಾಡಿ ಸುದ್ದಿಯಾಗಿದ್ದರು.

ಈಗ ಪೂನಂ ಪಾಂಡೆ ತಾನು ಲಾಕ್ ಅಪ್ ಶೋ ಗೆ ಹೋಗುತ್ತಿರುವ ಬಗ್ಗೆ ಸಂತಸವನ್ನು ಹಂಚಿಕೊಂಡಿದ್ದು, ಭಾರತದ ಅತಿದೊಡ್ಡ ಕಾಂಟ್ರವರ್ಷಿಯಲ್ ಶೋ ನ ಭಾಗಿಯಾಗಲು ಹೊರಟಿರುವುದಕ್ಕೆ ತುಂಬಾ ಉತ್ಸುಕಳಾಗಿದ್ದೇನೆ. ಅಲ್ಲಿ ಏನಾಗುತ್ತೋ ಗೊತ್ತಿಲ್ಲ ಏಕೆಂದರೆ ನಾನು ತಿಳಿದ ಮಟ್ಟಿಗೆ ಅಲ್ಲಿ ಲಕ್ಷುರಿ ಎನ್ನುವುದು ಏನೂ ಇಲ್ಲ, ನಮ್ಮ ನಿತ್ಯ ಅಗತ್ಯಗಳನ್ನು ಪಡೆಯಲು ಸಹಾ ಟಾಸ್ಕ್ ಮಾಡಬೇಕು ಎನ್ನಲಾಗುತ್ತಿದೆ. ಆದ್ದರಿಂದ ನಾನು ಹೇಗೆ ಅಲ್ಲಿ ಹೊಂದಿಕೊಳ್ಳುವೆನೋ ಗೊತ್ತಿಲ್ಲ, ಎಕ್ಸೈಟ್ ಮತ್ತು ನರ್ವಸ್ ಎರಡೂ ಆಗುತ್ತಿದೆ ಎಂದಿದ್ದಾರೆ.

ಇನ್ನು ಈ ಕಾರ್ಯಕ್ರಮದ ಹೈಲೈಟ್ ನಿರೂಪಕಿ ಕಂಗನಾ ರಣಾವತ್ ಆಗಿರುವುದು ಶೋ ಬಗ್ಗೆ ತೀವ್ರ ಕುತೂಹಲವನ್ನು ಮೂಡಿಸಿದೆ. ತನ್ನ ಬೋಲ್ಡ್ ನೆಸ್ ಗೆ ಹೆಸರಾಗಿರುವ ಕಂಗನಾ ರಣಾವತ್ ನಿರೂಪಣೆ ಮಾಡಲಿರುವ ಈ ಶೋ ನಲ್ಲಿ ಮತ್ತೊಬ್ಬ ಬೋಲ್ಡ್ ನಟಿ ಸ್ಪರ್ಧಿಯಾಗಿ ಎಂಟ್ರಿ ನೀಡುತ್ತಿದ್ದು, ಇವರ ನಡುವೆ ಏನೆಲ್ಲಾ, ಹೇಗಲ್ಲಾ ವಿಷಯಗಳು ಮುಂದುವರೆಯಲಿದೆ ಎನ್ನುವ ಕುತೂಹಲ ಮೂಡಿದೆ. ಕಂಗನಾ ನಿರೂಪಣೆ ಎಂದ ಮೇಲೆ ಶೋ ಖಡಕ್ ಇರುತ್ತೆ ಎನ್ನುವುದು ನೆಟ್ಟಿಗರ ಅಭಿಪ್ರಾಯವೂ ಆಗಿದೆ.

Leave a Reply

Your email address will not be published.