ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮೆಗಾಸ್ಟಾರ್ ಚಿರಂಜೀವಿ ವಂಶದ ಕುಡಿ ನಟ ಸಾಯಿ ಧರಮ್ ತೇಜ್

Written by Soma Shekar

Published on:

---Join Our Channel---

ಟಾಲಿವುಡ್ ನ ಸ್ಟಾರ್ ನಟ, ಮೆಗಾಸ್ಟಾರ್ ಚಿರಂಜೀವಿ ಅವರ ಮನೆತನದ ಕುಡಿ ಆಗಿರುವ ಯುವ ನಟ ಸಾಯಿ ಧರಮ್ ತೇಜಾ ಅವರು ಪ್ರಯಾಣಿಸುತ್ತಿದ್ದ ಬೈಕ್ ಅಪಘಾತಕ್ಕೆ ಈಡಾಗಿ ನಟ ಗಾಯಗೊಂಡು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೌದು ಈ ಅ ವ ಘ ಡವು ನಿನ್ನೆ (ಶುಕ್ರವಾರ, ಆಗಸ್ಟ್ 10) ಸಂಜೆ ಸಂಭವಿಸಿದೆ ಎನ್ನಲಾಗಿದೆ. ಸಾಯಿ ಧರಮ್ ತೇಜ್ ಅವರು ಹೈದರಾಬಾದ್‌ನ ಮಾಧಾಪುರ್‌ ಮಾರ್ಗದಲ್ಲಿ ಬರುವಾಗ ಈ ಅ ಪ ಘಾತ ಸಂಭವಿಸಿದೆ. ಅ ಫ ಘಾ ತ ತೀವ್ರವಾಗಿಯೆ ಸಂಭವಿಸಿದ್ದು, ಈ ವೇಳೆ ನಟ ತಮ್ಮ ಸ್ಪೋರ್ಟ್ಸ್ ಬೈಕ್ ನಲ್ಲಿ ಬರುತ್ತಿದ್ದರು ಎನ್ನಲಾಗಿದೆ.

ಶುಕ್ರವಾರ ಸಂಜೆ ಅವರು ಬೈಕ್ ನಲ್ಲಿ ವೇಗವಾಗಿ ಬರುವಾಗ, ಸುಮಾರು 8.30 ರ ಸಮಯದಲ್ಲಿ ಐಟಿ ಕಾರಿಡಾರ್‌ನಲ್ಲಿನ ನಾಲೆಡ್ಜ್ ಸಿಟಿ ಸಮೀಪದಲ್ಲಿ ಅಪಘಾತ ಸಂಭವಿಸಿದ್ದು, ಜ್ಯೂಬ್ಲಿ ಹಿಲ್ಸ್‌ ನಿಂದ ನಟ ಗಚಿಬೌಲಿ ಕಡೆಗೆ ಬೈಕ್ ನಲ್ಲಿ ಹೊರಟ್ಟಿದ್ದರು. ಅತಿಯಾದ ವೇಗದಿಂದ ಹೋಗುತ್ತಿದ್ದ ಸ್ಪೋರ್ಟ್ಸ್ ಬೈಕ್‌ನ ನಿಯಂತ್ರಣ ತಪ್ಪಿದ ಕಾರಣ ಗಾಡಿ ಸ್ಕಿಡ್ ಆಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಹಬ್ಬವಾದ ಕಾರಣ ರಸ್ತೆಯಲ್ಲಿ ಹೆಚ್ಚು ಜನ ಸಂಚಾರ ಇರಲಿಲ್ಲ.

ವಾಹನ ದಟ್ಟಣೆ ಅಥವಾ ಜನ ಸಂಚಾರ ಇಲ್ಲದ ಕಾರಣ ಸಾಯಿ ಧರಮ್ ತೇಜಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲದೇ ಹೆಲ್ಮೆಟ್ ಧರಿಸಿದ್ದ ಕಾರಣದಿಂದ ತಲೆಗೆ ಹೆಚ್ಚಿನ ಗಾಯಗಳೇನು ಆಗಿಲ್ಲ. ನಟ ಮದ್ಯಪಾನ ಮಾಡಿರಲಿಲ್ಲ ಎಂದು ಪೋಲಿಸರು ತಿಳಿಸಿದ್ದಾರೆ. ಅವರ ಕೈಗೆ ಮತ್ತು ಎದೆಯ ಭಾಗಕ್ಕೆ ಪೆಟ್ಟಾಗಿದ್ದು ಅಪೋಲೊ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನಡೆದಿದೆ ಎನ್ನಲಾಗಿದೆ‌.

ಅಪಘಾತದ ವಿಷಯ ತಿಳಿದ ಕೂಡಲೇ ಮೆಗಾಸ್ಟಾರ್ ಚಿರಂಜೀವಿ, ಪವನ್ ಕಲ್ಯಾಣ್ ,ವರುಣ್ ತೇಜ್, ವೈಷ್ಣವ್ ತೇಜ್, ಹಾಗೂ ಕುಟುಂಬ ವರ್ಗದವರು ಆಸ್ಪತ್ರೆಯನ್ನು ತಲುಪಿ ಎಲ್ಲರೂ ಅಲ್ಲೇ ಇದ್ದಾರೆಂದು ತಿಳಿದು ಬಂದಿದೆ. ಅಪೋಲೋ ಆಸ್ಪತ್ರೆಯ ವೈದ್ಯರು ಸಾಯಿ ಧರಮ್ ತೇಜ್ ಔಟ್ ಆಫ್ ಡೇಂಜರ್ ಎಂದು ತಿಳಿದಿದ್ದಾರೆ ಎನ್ನಲಾಗಿದ್ದು, ನಟ ಇನ್ನೂ ಕೋಮಾದಲ್ಲಿ ಇದ್ದಾರೆ ಎನ್ನಲಾಗಿದೆ.

ಅ ಪ ಘಾ ತ ಸಂಭವಿಸಿದ ಸ್ಥಳದಲ್ಲಿನ ಸಿಸಿ ಟಿವಿ ಫುಟೇಜ್ ಗಳಲ್ಲಿ ಅಪಘಾತದ ದೃಶ್ಯ ಸೆರೆಯಾಗಿದ್ದು ಪೋಲಿಸರು ಇದನ್ನು ಪರಿಶೀಲನೆ ಮಾಡಿದ್ದು, ರಾಯ್ ದುರ್ಗಾ ಪೋಲಿಸರು ನಟನ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಏಕೆಂದರೆ ಅತಿ ವೇಗದ ಚಾಲನೆ ಮತ್ತು ನಿರ್ಲಕ್ಷ್ಯ ಈ ಅಪ ಘಾತಕ್ಕೆ ಕಾರಣ ಎನ್ನುವುದು ಸಿಸಿಟಿವಿ ಫುಟೇಜ್ ಗಳಿಂದ ತಿಳಿದು ಬಂದಿದೆ ಎನ್ನಲಾಗಿದೆ.

ಈ ಹಿನ್ನಲೆಯಲ್ಲಿ ಎಂದು ಐಪಿಸಿ ಸೆಕ್ಷನ್ 336, ಮೋಟಾರು ವಾಹನ ಕಾಯ್ದೆ 184 ಅಡಿಯಲ್ಲಿ ಸಾಯಿ ಧರಮ್ ತೇಜ್ ವಿರುದ್ಧ ಪ್ರಕರಣ ದಾಖಲಾಗಿದೆ. ಸಾಯಿ ಧರಮ್ ತೇಜ್ ಅವರ ಸ್ಸ್ಪೋರ್ಟ್ಸ್ ಬೈಕ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಆತಂಕದಲ್ಲಿರುವ ಅಭಿಮಾನಿ ಗಳಿಗೆ ಸಾಯಿ ಧರಮ್ ತೇಜ್ ಕುಟುಂಬ ನಟ ಚೇತರಿಸಿಕೊಳ್ಳುತ್ತಿದ್ದಾರೆ ಆತಂಕ ಪಡುವ ಅಗತ್ಯವಿಲ್ಲ ಎಂದು ಸಾಂತ್ವನ ನೀಡಿದ್ದಾರೆ.

Leave a Comment