ಬೇಸರವಾಗಿದೆ ಎಂದು 3.5 ಕೋಟಿ ಸಂಬಳದ ಉದ್ಯೋಗಕ್ಕೆ ರಾಜೀನಾಮೆ ನೀಡಿದ ನೆಟ್ ಫ್ಲಿಕ್ಸ್ ಉದ್ಯೋಗಿ

Entertainment Featured-Articles News Wonder

ವಿಶ್ವದಾದ್ಯಂತ ಮನುಷ್ಯನ ಜೀವನ ಕೊರೊನಾಗೆ ಮೊದಲು ಮತ್ತು ಕೊರೊನಾ ನಂತರ ಎಂದು ಎರಡು ರೀತಿಯಲ್ಲಿ ಬದಲಾಗಿದೆ. ಕೊರೊನಾ ನಂತರ ಜನ ಜೀವನ ಖಂಡಿತ ಹಿಂದಿನ ಹಾಗಿಲ್ಲ. ಇಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ‌. ಮನುಷ್ಯನ ಮೇಲೆ ಕೊರೊನಾ ವೈರಸ್ ದೈಹಿಕವಾಗಿ, ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಕೂಡಾ ಪರಿಣಾಮ ಬೀರಿದೆ. ಇಂತಹ ಒಂದು ಪರಿಣಾಮದ ಭಾಗವಾಗಿಯೇ ವಿಶ್ವದಲ್ಲಿ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸವನ್ನು ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿತು. ವರ್ಕ್ ಫ್ರಂ ಹೋಂ ಅನೇಕರ ಜೀವನದ ಒಂದು ಭಾಗವಾಗಿಯೇ ಹೋಯಿತು.

ವರ್ಕ್ ಫ್ರಂ ಹೋಂ ಎನ್ನುವ ಅವಕಾಶ ಕೊಟ್ಟಾಗ ಉದ್ಯೋಗಿಗಳು ಖುಷಿ ಪಟ್ಟಿದ್ದರು. ಆದರೆ ಆ ಖುಷಿ ಈಗ ಬದಲಾಗುತ್ತಿದೆ. ಬಹಳಷ್ಟು ಜನ ಉದ್ಯೋಗಿಗಳ ಆಲೋಚನೆಗಳಲ್ಲಿ ಬದಲಾವಣೆಗಳು ಮೂಡಿವೆ. ಕೆಲವರಿಗೆ ಮನೆಯಲ್ಲೇ ಇದ್ದು ಕೆಲಸ ಮಾಡುವುದು ಬೋರ್ ಆಗಿದೆ‌. ಆ ಉದ್ಯೋಗದ ಮೇಲೆ ಅನಾಸಕ್ತಿ ಮೂಡಿದೆ‌. ಇಂತಹ ಒಂದು ಪರಿಸ್ಥಿತಿಯಿಂದ ಹೊರ ಬರಲು ವ್ಯಕ್ತಿಯೊಬ್ಬರು ವರ್ಷಕ್ಕೆ ಕೋಟಿಗಳ ವೇತನವನ್ನು ನೀಡುವ ಉದ್ಯೋಗಕ್ಕೆ ಗುಡ್ ಬೈ ಹೇಳಿ ಹೊರ ನಡೆದಿದ್ದಾರೆ‌.

ಅಮೇರಿಕಾಕ್ಕೆ ಸೇರಿದ ಮೈಕಲ್ ಲಿನ್ ಎನ್ನುವ ಹೆಸರಿನ ಇಂಜಿನಿಯರ್ ಅಮೆಜಾನ್ ನಲ್ಲಿ ತನ್ನ ಉದ್ಯೋಗವನ್ನು ಆರಂಭಿಸಿದ್ದರು. ಅನಂತರ ಉತ್ತಮ ಸಂಬಳ ಸಿಗುತ್ತದೆ ಎನ್ನುವ ಕಾರಣಕ್ಕೆ ಅಮೆಜಾನ್ ಉದ್ಯೋಗವನ್ನು ತೊರೆದು ನೆಟ್ ಫ್ಲಿಕ್ಸ್ ನಲ್ಲಿ ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿ 2017 ರಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ಇಲ್ಲಿ ಅವರ ವೇತನ ವಾರ್ಷಿಕ 3.5 ಕೋಟಿ ರೂ.ಗಳಾಗಿತ್ತು. ವಿವಿಧ ರೀತಿಯ ಆಹಾರ ಪದಾರ್ಥ, ಕಾರು, ಬಂಗಲೆಯಂತಹ ವಿವಿಧ ಸೌಲಭ್ಯಗಳನ್ನು ನೆಟ್ ಫ್ಲಿಕ್ಸ್ ಆತನಿಗೆ ನೀಡಿತ್ತು.

ಆದರೆ ಇಂತಹ ಎಲ್ಲಾ ಸೌಲಭ್ಯ ಗಳ ಹೊರತಾಗಿಯೂ
ಮೈಕಲ್ ತನ್ನ ಕೆಲಸಕ್ಕೆ ರಾಜೀನಾಮೆಯನ್ನು ನೀಡಿದ್ದಾನೆ. ಕೊರೊನಾ ಸಮಯದಲ್ಲಿ ನೀಡಲಾದ ಮನೆಯಿಂದಲೇ ಕೆಲಸ ಮಾಡುವ ವಿಧಾನದಿಂದ ತನಗೆ ಅದು ರೊಟೀನ್ ಎನಿಸಿದೆ ಎಂದು, ಇದರಿಂದ ಸಹೋದ್ಯೋಗಿಗಳ ಜೊತೆಗೆ ಬೆರೆತು ಕೆಲಸ ಮಾಡುವುದು, ಕಛೇರಿಯಲ್ಲಿ ಎಲ್ಲರೊಡನೆ ಕುಳಿತು ಮಾತನಾಡುವುದು, ಇಂತಹ ಹ್ಯಾಪಿ ಮೂಮೆಂಟ್ ಗಳನ್ನೆಲ್ಲಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ ಆತ ತನ್ನ ಉದ್ಯೋಗಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ.

ಅದೂ ಅಲ್ಲದೇ ಈಗ ಉದ್ಯೋಗದ ಹೊರೆ ಹೆಚ್ಚಾಗಿದೆ. ಜೀವನದಲ್ಲಿ ಹಣ ಏನೋ ಬರುತ್ತಿದೆ ಆದರೆ ಅಮೂಲ್ಯವಾದ ಕ್ಷಣಗಳೆಲ್ಲಾ ಎಲ್ಲೋ ಕಳೆದು ಹೋಗಿದೆ. ಅಲ್ಲದೇ ಸಂತೋಷವನ್ನು ಸಹಾ ಮಿಸ್ ಮಾಡಿಕೊಳ್ಳುತ್ತಿದ್ದು, ಅದಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಈಗ ಸ್ನೇಹಿತರು, ತಂದೆ ತಾಯಿಗಳು ಈಗ ಇದನ್ನು ಒಪ್ಪದೇ ಇರಬಹುದು. ಆದರೆ ಮುಂದೆ ಅವರು ಅರ್ಥ ಮಾಡಿಕೊಳ್ಳುತ್ತಾರೆ ಎನ್ನುವ ಮಾತನ್ನು ಹೇಳಿದ್ದಾರೆ.

Leave a Reply

Your email address will not be published.