ಬೇಸರದಿಂದ ನಟಿ ಶೃತಿಯ ಪ್ರಶ್ನೆ: ದೈಹಿಕ ಹಾಗೂ ಮಾನಸಿಕ ಅ ತ್ಯಾ ಚಾ ರ ಕ್ಕೆ ಕೊನೆ ಯಾವಾಗ??

Written by Soma Shekar

Published on:

---Join Our Channel---

ಮೈಸೂರು ನಗರದಲ್ಲಿ ಯುವತಿಯೊಬ್ಬಳ ಜೊತೆಗೆ ನಡೆದಂತಹ ಒಂದು ಅನಿರೀಕ್ಷಿತ,‌ ಆ ಘಾ ತಕಾರಿ ಘಟನೆ ಸಹಜವಾಗಿಯೇ ಒಂದು ತಲ್ಲಣವನ್ನು ಹುಟ್ಟು ಹಾಕಿದೆ. ರಾಜ್ಯದ ಎಲ್ಲೆಡೆ ಈ ಘಟನೆಯ ಕುರಿತಾಗಿ ತೀವ್ರವಾದ ಅಸಮಾಧಾನವು ಸಾಮಾನ್ಯ ಜನರಿಂದ ಹಿಡಿದು, ಸೆಲೆಬ್ರಿಟಿಗಳು ಹಾಗೂ ರಾಜಕೀಯ ಗಣ್ಯರವರೆಗೂ ಹರಿದು ಬರುತ್ತಿದೆ. ಅ ತ್ಯಾ ಚಾರ ಮಾಡಿದವರನ್ನು ಕಠಿಣವಾಗಿ ವಾಗಿ ಶಿಕ್ಷಿಸಬೇಕು ಎನ್ನುವ ಕೂಗೊಂದು ಕೇಳಿ ಬರುತ್ತಿದೆ. ಈಗ ಇದೇ ವಿಚಾರವಾಗಿ ಕನ್ನಡ ಚಿತ್ರರಂಗದ ಹಿರಿಯ ನಟಿ ಶೃತಿ ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಒಂದು ಪೋಸ್ಟ್ ಹಾಕಿದ್ದು, ಅದರಲ್ಲಿ ದೈಹಿಕ ಹಾಗೂ ಮಾನಸಿಕ ಅ ತ್ಯಾ ಚಾರಕ್ಕೆ ಕೊನೆ ಯಾವಾಗ? ಎಂದು ಪ್ರಶ್ನೆಯನ್ನು ಮಾಡಿದ್ದಾರೆ.

ಮೈಸೂರಿನಲ್ಲಿ ನಡೆದಿರುವ ಘಟನೆಯ ಬಗ್ಗೆ ತೀವ್ರವಾಗಿ ಬೇಸರಗೊಂಡಿರುವ ನಟಿ ಶೃತಿ ಅವರು ತಮ್ಮ ಪೋಸ್ಟ್ ನಲ್ಲಿ, ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ನಡಿಯುತಿರುವ ದೈಹಿಕ ಹಾಗು ಮಾನಸಿಕ ಅ ತ್ಯಾ ಚಾ ರ ಕ್ಕೆ ಕೊನೆ ಯಾವಾಗ?? . ಇಂತ ಪುರುಷರ ಮನಸ್ಥಿತಿ ಬದಲಾಗುವುದೆಂದು ? ಇಂತ ಅನಿಷ್ಟ ಕಾ ಮು ಕರನ್ನ ಬಂಧಿಸುವ , ಅವರನ್ನು ಶಿಕ್ಷಿಸುವ ಕಾನೂನು ಮತ್ತಷ್ಟು ಗಟ್ಟಿ ಆಗಬೇಕು ಎನ್ನುವುದು ಎಷ್ಟು ಸತ್ಯವೋ , ಇಂಥಹ ಪುರುಷರು ಬೆಳೆಯುವ ಮನೆಯ ವಾತಾವರಣ , ಸಂಸ್ಕಾರ , ಪೋಷಕರ ಜವಾಬ್ದಾರಿ ಅಲ್ಲಿಯೂ ಕೂಡ ಮತ್ತಷ್ಟು ಗಟ್ಟಿಯಾಗಬೇಕು ಎನ್ನುವುದು ನನ್ನ ಅಭಿಪ್ರಾಯ ಹೌದಲ್ಲವೇ.. ಹುಟ್ಟಿನಿಂದ ಸಾವಿನವರೆಗೆ ಹೆಣ್ಣುಮಕ್ಕಳು ಅನುಭವಿಸುವ ಕಷ್ಟ ನೂರಾರು ಆದರೂ ಹಲವಾರು ಮಹಿಳೆಯರು ಅದನ್ನು ಹಿಮ್ಮೆಟ್ಟಿ ಇಡೀ ಭಾರತವೇ ಮೆಚ್ಚುವಂತ ಸಾಧನೆಯನ್ನು ಮಾಡುತ್ತಿದ್ದಾರೆ.”

*ಇಂಥ ಸಂದರ್ಭದಲ್ಲಿ ಸಾಮೂಹಿಕ ಅತ್ಯಾಚಾರದ ಘಟನೆಗಳು ಮಹಿಳೆಯ ಮಾನಸಿಕ ಸೈರ್ಯವನ್ನು ಕುಗ್ಗಿಸುತ್ತದೆ . ಹಾಗಾಗದಿರಲಿ” ಎಂದು ಅವರು ಬರೆದುಕೊಂಡಿದ್ದಾರೆ. ನಟಿ ಶೃತಿ ಅವರ ಪೋಸ್ಟ್ ಗೆ ಬಹಳಷ್ಟು ಜನರು ಪ್ರತಿಕ್ರಿಯೆಗಳನ್ನು ನೀಡುವ ಮೂಲಕ ಅವರ ಮಾತಿಗೆ ಸರಿ ಎನ್ನುತ್ತಿದ್ದಾರೆ. ಇನ್ನೂ ಅನೇಕರು ಇಂತಹ ದು ಷ್ಕೃ ತ್ಯಗಳನ್ನು ಮಾಡುವವರನ್ನು ಕಠಿಣವಾಗಿ ಶಿಕ್ಷಿಸಬೇಕು ಎಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಇನ್ನು ನಟಿ ರಮ್ಯಾ ಅವರು ಸಹಾ ಈ ವಿಷಯವಾಗಿ ಪೋಸ್ಟ್ ಮಾಡುತ್ತಾ ಪ್ರತಿಯೊಂದಕ್ಕೂ ಅ ಪ ರಾ ಧಕ್ಕೂ ಸಹಾ ಮಹಿಳೆಯನ್ನೇ ಟಾರ್ಗೆಟ್ ಮಾಡಲಾಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

Leave a Comment