ಬೇರೆಯವರ ಸೆ ಕ್ಸ್ ಲೈಫ್ ಬಗ್ಗೆ ಕರಣ್ ಗೆ ಏಕೆ ಇಷ್ಟು ಆಸಕ್ತಿ? ಶೋ ನಲ್ಲೇ ಟಾಂಗ್ ನೀಡಿದ ಅಮೀರ್ ಖಾನ್

Entertainment Featured-Articles Movies News

ಬಾಲಿವುಡ್ ಸಿನಿಮಾಗಳ ನಿರ್ಮಾಪಕ ಹಾಗೂ ಟಿವಿ ಶೋ ಗಳ ನಿರೂಪಕ ಕೂಡಾ ಆಗಿರುವ ಕರಣ್ ಜೋಹರ್. ಇವರು ನಿರೂಪಣೆ ಮಾಡುವ ಕಾಫಿ ವಿತ್ ಕರಣ್ ಶೋ ಈಗಾಗಲೇ ಸಾಕಷ್ಟು ಜನಪ್ರಿಯತೆ ಮಾತ್ರವೇ ಅಲ್ಲದೇ ಚರ್ಚೆಗಳಿಗೂ ಕಾರಣವಾಗಿರುವ ಶೋ ಆಗಿದೆ. ಇದಕ್ಕೆ ಪ್ರಮುಖ ಕಾರಣ ಕರಣ್ ಜೋಹರ್ ಕಾರ್ಯಕ್ರಮಕ್ಕೆ ಆಗಮಿಸುವ ಸೆಲೆಬ್ರಿಟಿಗಳ ಖಾಸಗಿ ವಿಶೇಷವಾಗಿ ಅವರ ಲೈಂ ಗಿ ಕ ಜೀವನದ ಕುರಿತಾದ ಪ್ರಶ್ನೆಗಳನ್ನು ಕೇಳುವುದೇ ಆಗಿದೆ‌. ಇದಕ್ಕೆ ಉತ್ತರ ನೀಡುವ ಸೆಲೆಬ್ರಿಟಿಗಳು ಅನಂತರ ಮಾದ್ಯಮಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುವುದು, ಒಂದಷ್ಟು ಟೀಕೆಗಳನ್ನು ಎದುರಿಸುವುದು ಸಹಾ ನಡೆದೇ ಇರುತ್ತದೆ.

ಇದೀಗ ಕಾಫಿ ವಿತ್ ಕರಣ್ ನ ಏಳನೇ ಸೀಸನ್ ನ ಐದನೇ ಸಂಚಿಕೆಗೆ ಬಾಲಿವುಡ್ ನಟ ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಅತಿಥಿಗಳಾಗಿ ಆಗಮಿಸಿದ್ದಾರೆ. ಲಾಲ್ ಸಿಂಗ್ ಚಡ್ಡಾ ಸಿನಿಮಾದ ಬಿಡುಗಡೆ ಹಿನ್ನೆಲೆಯಲ್ಲಿ ಸಿನಿಮಾದ ಪ್ರಚಾರದ ಭಾಗವಾಗಿ ಈ ಜೋಡಿ ಕಾಫಿ ವಿತಗ ಕರಣ್ ಶೋ ಗೆ ಎಂಟ್ರಿ ನೀಡಿದ್ದರು. ಕಾರ್ಯಕ್ರಮದ ಪ್ರೊಮೊ ಬಿಡುಗಡೆ ಆಗಿದ್ದು ಶೋ ನಲ್ಲಿ ಕರೀನಾ ಮತ್ತು ಅಮೀರ್ ಖಾನ್ ತಮ್ಮ ಜೀವನದ ಹಲವು ರಹಸ್ಯಗಳನ್ನು ಹೊರಗಿಡಲಿದ್ದಾರೆ ಎನ್ನುವುದಂತೂ ಸ್ಪಷ್ಟವಾಗಿದೆ. ಅವರು ಆಡಿರುವ ಮಾತುಗಳು ನೆಟ್ಟಿಗರ ಕುತೂಹಲವನ್ನು ಕೆರಳಿಸಿದೆ.

ಶೋ ನಲ್ಲಿ ಎಂದಿನಂತೆ ಕರಣ್ ತನ್ನ ಪ್ರಶ್ನೆಗಳಲ್ಲಿ ಸೆ ಕ್ಸ್ ಕುರಿತಾದ ಪ್ರಶ್ನೆಗಳನ್ನು ಕೇಳಲು ಮುಂದಾಗಿದ್ದಾರೆ. ಕರಣ್ ನಟಿ ಕರೀನಾ ಬಳಿ ಅವರ ಸೆ ಕ್ಸ್ ಲೈಫ್ ಬಗ್ಗೆ ಪ್ರಶ್ನೆಗಳನ್ನು ಕೇಳಲು ಮುಂದಾಗಿದ್ದಾರೆ. ಆಗ ಪ್ರತಿಕ್ರಿಯೆ ನೀಡಿದ ಕರೀನಾ ಉತ್ತರ ನೀಡುವ ಬದಲು ಕರಣ್ ಜೋಹರ್ ಗೆ ನಿಮ್ಮ ಸೆ ಕ್ಸ್ ಲೈಫ್ ಗೆ ಹೇಳಿ ಎಂದು ಮರು ಪ್ರಶ್ನೆಯನ್ನು ಹಾಕಿದ್ದಾರೆ. ಆಗ ಕರಣ್ ಜೋಹರ್ ಈ ಶೋ ನನ್ನ ತಾಯಿ ನೋಡ್ತಾ ಇರ್ತಾರೆ ( ಅಂದ್ರೆ ತನ್ನನ್ನು ಇಂತಹ ಪ್ರಶ್ನೆ ಕೇಳಬಾರದು ಎನ್ನುವ ಅರ್ಥದಲ್ಲಿ ) ಉತ್ತರವನ್ನು ನೀಡಿ, ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನವನ್ನು ಮಾಡಿದ್ದಾರೆ.

ಆಗ ಪ್ರತಿಕ್ರಿಯೆ ನೀಡಿದ ನಟ ಅಮೀರ್ ಖಾನ್, ನೀವು ಬೇರೆಯವರನ್ನು ಇಂತಹ ಪ್ರಶ್ನೆಗಳನ್ನು ಕೇಳುವಾಗ ನಿಮ್ಮ ತಾಯಿ ಶೋ ನೋಡುವುದಿಲ್ಲವೇನು? ಎಂದು ಕರಣ್ ಅವರನ್ನು ಪ್ರಶ್ನೆ ಮಾಡುವ ಮೂಲಕ ಕರಣ್ ಜೋಹರ್ ಗೆ ಸರಿಯಾಗಿ ಟಾಂಗ್ ನೀಡಿದ್ದಾರೆ. ಕರಣ್, ಕರೀನಾ ಮತ್ತು ಅಮೀರ್ ನಡುವಿನ ಈ ಮಾತುಕತೆಯ ಸಣ್ಣ ತುಣುಕುಗಳನ್ನು ಒಳಗೊಂಡ ಪ್ರೊಮೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಕರಣ್ ಜೋಹರ್ ಸಹಾ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರೊಮೊ ವೀಡಿಯೋವನ್ನು ಶೇರ್ ಮಾಡಿಕೊಂಡು, ಇಬ್ಬರು ಖಾನ್ ಗಳು ಜೊತೆಯಲ್ಲಿ, ತಪ್ಪದೇ ಶೋ ನೋಡಿ ಎಂದಿದ್ದಾರೆ.

Leave a Reply

Your email address will not be published. Required fields are marked *