ಬೇರಾವ ಸ್ಟಾರ್ ನಟಿಗೂ ಇಲ್ಲದ ಬೇಡಿಕೆ ರಶ್ಮಿಕಾಗೆ ಮಾತ್ರ ಏಕೆ?? ತೆಲುಗಿನಲ್ಲಿ ಬೇರೆ ನಟಿಯರೇ ಇಲ್ಲವೇ??

Entertainment Featured-Articles News

ದಕ್ಷಿಣ ಸಿನಿಮಾ ರಂಗದಲ್ಲಿ ಸದ್ಯಕ್ಕೆ ಬಹು ಬೇಡಿಕೆ ಹೊಂದಿರುವ ಹಾಗೂ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ಹಾಗೂ ಸದಾ ಸುದ್ದಿಗಳಲ್ಲಿ ಹಾಗೂ ಟ್ರೋಲ್ ಗಳಲ್ಲಿಯೂ ಎಲ್ಲರನ್ನು ಹಿಂದಿಕ್ಕಿರುವ ನಟಿ ಎಂದರೆ ಅನುಮಾನವೇ ಇಲ್ಲದೇ ಅದು ನಟಿ ರಶ್ಮಿಕಾ ಮಂದಣ್ಣ ಎಂದು ಹೇಳಬಹುದಾಗಿದೆ. ಹೌದು ಸದ್ಯಕ್ಕಂತೂ ತೆಲುಗು ಸಿನಿಮಾ ರಂಗದಲ್ಲಿ ರಶ್ಮಿಕಾ ಸ್ಟಾರ್ ನಟಿ, ಪುಷ್ಪ ಸಿನಿಮಾದ ನಂತರವಂತೂ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ ನಟಿ ರಶ್ಮಿಕಾ. ಬಾಲಿವುಡ್ ನಲ್ಲಿ ಅವರ ಎರಡು ಸಿನಿಮಾಗಳು ಬಿಡುಗಡೆಗೆ ಕಾದಿವೆ.

ರಶ್ಮಿಕಾ ಸ್ಟಾರ್ ಆಗಿರುವುದೇನೋ ನಿಜ, ಆದರೆ ಎಲ್ಲರೂ, ಎಲ್ಲಾ ಸಿನಿಮಾಗಳಿಗೂ ರಶ್ಮಿಕಾ ಮಂದಣ್ಣ ಅವರನ್ನೇ ನಾಯಕಿಯನ್ನಾಗಿ ಏಕೆ ಮಾಡಲು ಬಯಸಿದ್ದಾರೆ? ಬೇರೆ ಯಾವ ನಟಿಯೂ ಇಲ್ಲವೇನು? ಪ್ರತಿಭಾವಂತರು ಎಂದು ಸಾಬೀತು ಮಾಡಿದ ಹಲವು ನಟಿಯರು ಇರುವಾಗ ರಶ್ಮಿಕಾ ಮಂದಣ್ಣ ಗೆ ಏಕೆ ಇಷ್ಟು ಬೇಡಿಕೆ ? ಎನ್ನುವುದು ಕೆಲವರ ಪ್ರಶ್ನೆಗಳಾಗಿದೆ. ಈ ವಿಚಾರಕ್ಕೆ ಸಂಭಂದಿಸಿದ ಹಾಗೆ ಕೆಲವು ಉತ್ತರಗಳು, ಚರ್ಚೆಗಳು ನಡೆದಿವೆ ಹಾಗೂ ಪೂರಕ ಎನ್ನುವಂತಹ ಕೆಲವು ಕಾರಣಗಳು ಸಹಾ ಹರಿದಾಡಿವೆ.
ಹಾಗಾದರೆ ಏನಿರಬಹುದು ಅವು ಬನ್ನಿ ತಿಳಿಯೋಣ.

ತೆಲುಗು ಸಿನಿಮಾ ರಂಗದಲ್ಲಿ ರಶ್ಮಿಕಾ ನಟಿಸಿರುವ ಎಲ್ಲಾ ಸಿನಿಮಾಗಳು ಸಹಾ ಬಹುತೇಕ ಸೂಪರ್ ಹಿಟ್ ಆಗಿರುವ ಕಾರಣದಿಂದ ರಶ್ಮಿಕಾ ಲಕ್ಕಿ ಚಾರ್ಮ್ ಆಗಿದ್ದಾರೆ ಎಂದು ಅವರಿಗೆ ಅವಕಾಶಗಳು ಹರಿದು ಬರುತ್ತಿವೆ ಎನ್ನಲಾಗಿದೆ. ಆದರೆ ಇದೇ ವೇಳೆ ತೆಲುಗಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿ ನಟನೆ, ಅಂದ ಹಾಗೂ ಡಾನ್ಸ್ ಮೂಲಕ ತಮನ್ನಾ, ಕೀರ್ತಿ ಸುರೇಶ್, ಸಾಯಿ ಪಲ್ಲವಿ , ಪೂಜಾ ಹೆಗ್ಡೆಯಂತಹ ಸ್ಟಾರ್ ನಟಿಯರು ಸಹಾ ಈಗಾಗಲೇ ದೊಡ್ಡ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

ಆದರೂ ಕೂಡಾ ಈ ನಟಿಯರಿಗೆ ಇಲ್ಲದ ಅವಕಾಶಗಳು ರಶ್ಮಿಕಾ ಗೆ ಸಿಗಲು ಕೆಲವು ಪ್ರಮುಖವಾದ ಕಾರುಗಳು ಇವೆ ಎನ್ನುವುದು ಕೆಲವರ ವಾದ ಹಾಗೂ ವಿಶ್ಲೇಷಣೆ ಸಹಾ ಆಗಿದೆ. ಹೌದು, ಕೆಲವೊಂದು ವಿಶ್ಲೇಷಣೆ ಗಳ ಪ್ರಕಾರ ತೆಲುಗಿನ ಸ್ಟಾರ್ ನಟಿಯರ ಕೆಲವು ನಿಯಮಗಳು, ಕಂಡೀಷನ್ ಗಳಿಂದಾಗಿಯೇ ಹಲವು ನಿರ್ಮಾಪಕ ಮತ್ತು ನಿರ್ದೇಶಕರ ಮೊದಲು ಆಯ್ಕೆ ರಶ್ಮಿಕಾ ಮಂದಣ್ಣ ಆಗಿದ್ದಾರೆ ಎನ್ನಲಾಗುತ್ತಿದೆ. ಹಾಗಿದ್ರೆ ಸ್ಟಾರ್ ನಟಿಯರು ಹಾಕಿರುವ ಕಂಡೀಶನ್ ಗಳಾದ್ರು ಏನು??

ಮಹಾನಟಿ ಸಿನಿಮಾ ಮೂಲಕ ತೆಲುಗು ಚಿತ್ರರಂಗ ತನ್ನ ಕಡೆ ತಿರುಗಿ ನೋಡುವಂತೆ ಮಾಡಿ, ‌ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದ ನಟಿ ಕೀರ್ತಿ ಸುರೇಶ್ ಹೊಸ ಸಿನಿಮಾಗಳಲ್ಲಿ ಕೋಟಿ ಕೊಟ್ಟರೂ ಸಹಾ ತುಂಡು ಬಟ್ಟೆಗಳನ್ನು ಹಾಕುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದು, ಅವರನ್ನು ತಮ್ಮ ಸಿನಿಮಾಗಳಲ್ಲಿ ನಾಯಕಿಯನ್ನಾಗಿ ಮಾಡಲು ಕೆಲವು ನಿರ್ಮಾಪಕರು ಆಲೋಚನೆ ಮಾಡುವಂತಾಗಿದೆ. ಇನ್ನು ನಟನೆ, ಡಾನ್ಸ್ ವಿಚಾರದಲ್ಲಿ ತನಗೆ ತಾನೇ ಸಾಟಿ ಎಂದು ಸಾಬೀತು ಮಾಡಿರುವ ನಟಿ ಸಾಯಿ ಪಲ್ಲವಿ ಸಹಾ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ.‌

ಸಾಯಿ ಪಲ್ಲವಿ ತಮ್ಮ ಪಾತ್ರಕ್ಕೆ ಒಂದು ಆದ್ಯತೆ ಇರಬೇಕು, ತುಂಡು ಬಟ್ಟೆಗಳಿಗೆ ನೋ, ಹೆಚ್ಚು ರೋಮ್ಯಾಂಟಿಕ್ ಆಗಿರುವ ದೃಶ್ಯಗಳಿಗೆ ನೋ, ಬಾರೀ ಮೇಕಪ್ ಗೆ ನೋ ಎನ್ನುವ ಷರತ್ತುಗಳನ್ನು ವಿಧಿಸಿದ್ದಾರೆ. ತಮನ್ನಾ ಲಿಪ್ ಲಾಕ್ ಮಾಡೋದಿಲ್ಲ ಎನ್ನುವ ಷರತ್ತು ಹಾಕಿದ್ದಾರೆ. ಮತ್ತೊಂದು ಕಡೆ ನಟಿ ಪೂಜಾ ಹೆಗ್ಡೆ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಅಲ್ಲದೇ ನಿರ್ದೇಶಕ ಸೆಲ್ವಮಣಿ ಕೂಡಾ ಕೆಲವು ದಿನಗಳ ಹಿಂದೆ ಪೂಜಾ ಹೆಗ್ಡೆ ಅವರ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು.

ಹೀಗೆ ತೆಲುಗಿನಲ್ಲಿ ಸ್ಟಾರ್ ನಟಿಯರ ಈ ಷರತ್ತುಗಳೇ ರಶ್ಮಿಕಾ ಮಂದಣ್ಣ ಪಾಲಿಗೆ ಅದೃಷ್ಟದ ಬಾಗಿಲನ್ನು ತೆರೆದಿದೆ ಎನ್ನುವುದು ಕೆಲವರ ವಿಚಾರವಾಗಿದೆ. ಅಲ್ಲದೇ ಇದರಿಂದಾಗಿ ನಟಿ ರಶ್ಮಿಕಾಗೆ ಒಳ್ಳೊಳ್ಳೆ ಸಿನಿಮಾಗಳ ಅವಕಾಶಗಳು ದೊರೆಯುತ್ತಿದೆ ಎನ್ನುತ್ತಿದ್ದಾರೆ. ಆದರೆ ಏನೇ ಆಗಲೀ ರಶ್ಮಿಕಾ ಸಿನಿಮಾಗಳು ಮಾತ್ರ ಸೂಪರ್ ಹಿಟ್ ಆಗುತ್ತಿವೆ. ಅವಕಾಶಗಳು ಕೂಡಾ ಹೆಚ್ಚಾಗುತ್ತಿದೆ ಎನ್ನುವುದು ವಾಸ್ತವದ ವಿಷಯವಾಗಿದೆ. ಪುಷ್ಪ ಸಿನಿಮಾದಲ್ಲಿ ಡಿ ಗ್ಲಾಮ್ ಪಾತ್ರದ ಮೂಲಕ ರಶ್ಮಿಕಾ ತನ್ನ ಸಾಮರ್ಥ್ಯ ಸಾಬೀತು ಮಾಡಿದ್ದಾರೆ.

Leave a Reply

Your email address will not be published.