ಬೇಡರ ಕಣ್ಣಪ್ಪ ಪೋಸ್ಟರ್ ಹಾಕಿ ನಿರ್ದೇಶಕಿ ಲೀನಾ ಪರ ದನಿ ಎತ್ತಿದ್ದ ಕನ್ನಡ ನಟ ಕಿಶೋರ್

Entertainment Featured-Articles Movies News

ನಿರ್ದೇಶಕಿ ಲೀನಾ ಮಣಿಮೇಖಲೈ ಈಗಾಗಲೇ ತಮ್ಮ ಕಾಳಿ ಚಿತ್ರದ ಪೋಸ್ಟರ್ ಮೂಲಕ ದೊಡ್ಡ ವಿ ವಾ ದ ವನ್ನೇ ಸೃಷ್ಟಿಸಿದ್ದಾರೆ. ಕಾಳಿ ಮಾತೆಯು ಕೈಯಲ್ಲಿ ಸಿಗರೇಟ್ ಹಿಡಿದಿರುವಂತಹ ಪೋಸ್ಟರ್ ಅನ್ನು ಶೇರ್ ಮಾಡುವ ಮೂಲಕ ಲೀನಾ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧ ಕ್ಕೆ ಯನ್ನು ಉಂಟು ಮಾಡುವ ಕೆಲಸವನ್ನು ಮಾಡಿದ್ದರು. ಅಲ್ಲದೇ ಲೀನಾ ತಾನು ಮಾಡಿರುವ ಕೆಲಸದಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಈಗ ಇವೆಲ್ಲವುಗಳ ಬೆನ್ನಲ್ಲೇ ಕನ್ನಡದ ನಟ ಕಿಶೋರ್‌ ಅವರು ನಿರ್ದೇಶಕಿ ಲೀನಾ ಅವರ ಬೆಂಬಲಕ್ಕೆ ನಿಂತು, ಅವರ ಪರವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ದನಿ ಎತ್ತಿದ್ದಾರೆ.

ನಟ ಕಿಶೋರ್ ಅವರು ಲೀನಾ ಅವರ ಪರವಾಗಿ ದನಿ ಎತ್ತಿರುವ ಕಾರಣದಿಂದ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಲೀನಾ ಮಣಿಮೇಖಲೈ ಅವರು ಕಾಳಿ ಹೆಸರಿನ ಡಾಕ್ಯುಮೆಂಟರಿಯನ್ನು ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದು, ಇದರ ಪೋಸ್ಟರ್ ನಲ್ಲಿ ಕಾಳಿ ಮಾತೆಯನ್ನು ಸಿಗರೇಟ್ ಸೇದುವಂತೆ ತೋರಿಸಲಾಗಿತ್ತು. ಇದಾದ ನಂತರ ಲೀನಾ ಅವರ ವಿ ರು ದ್ಧ ದೇಶ ವ್ಯಾಪಿ ಆ ಕ್ರೋ ಶ ವ್ಯಕ್ತವಾಗಿದ್ದು, ಹಲವು ಕಡೆಗಳಲ್ಲಿ ಲೀನಾ ಅವರ ಮೇಲೆ ದೂರನ್ನು ದಾಖಲು ಮಾಡಲಾಗಿದೆ.

ಹೀಗೆ ಲೀನಾ ಅವರ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬಂದ ಬೆನ್ನಲ್ಲೇ ನಟ ಕಿಶೋರ್ ತಮ್ಮ ಟ್ವಿಟರ್ ಖಾತೆಯ ಮೂಲಕ ಲೀನಾ ಅವರ ಪರವಾಗಿ ಟ್ವೀಟ್ ಮಾಡಿ ಬೆಂಬಲ ನೀಡಿದ್ದಾರೆ. ಕಿಶೋರ್ ಅವರು ವರನಟ ಡಾ.ರಾಜ್‌ಕುಮಾರ್ ಅವರ ಬೇಡರ ಕಣ್ಣಪ್ಪ ಸಿನಿಮಾದ ಪೋಸ್ಟರ್ ಶೇರ್ ಮಾಡಿಕೊಂಡು, ನನ್ನ ದೇವರು, ನನ್ನ ಭಕ್ತಿ , ನನ್ನ ನೈವೇದ್ಯಗಳು ನನ್ನ ಹಕ್ಕು, ಅದು ನನ್ನ ನಾಡಿನ ಸೌಂದರ್ಯ, ನನ್ನ ನಾಡಿನ ಶಕ್ತಿ ಎಂದು ಬರೆದುಕೊಂಡಿದ್ದಾರೆ. ಅವರ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ವೈವಿದ್ಯಮಯ ಪ್ರತಿಕ್ರಿಯೆಗಳು ಹರಿದು ಬರುತ್ತಿದೆ.

ಕಿಶೋರ್ ಅವರು ಮಾಡಿದ ಪೋಸ್ಟ್ ಗೆ ಮಿಶ್ರ ಪ್ರತಿಕ್ರಿಯೆಗಳು ಹರಿದು ಬಂದಿದೆ ಕೆಲವರು ಕಿಶೋರ್ ಅವರ ಹೇಳಿಕೆಯನ್ನು ವಿ ರೋ ಧಿಸಿದ್ದಾರೆ. ‘ ಕಿಶೋರ್ ಅವರಿಗೆ ಮಾಡೋಕೆ ಯಾವುದೇ ಸಿನಿಮಾಗಳು ಇಲ್ಲ. ಆದ್ದರಿಂದಲೇ ಅವರು ಈ ರೀತಿ ಪೋಸ್ಟ್ ಹಾಕುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇನ್ನೂ ಕೆಲವರು ಕಿಶೋರ್ ಅವರು ಹೇಳಿದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ‘ ಬಹಳ ಅದ್ಭುತ ಮಾತುಗಳು ‘ ಎಂದು ನಟನನ್ನು ಹಾಡಿ ಹೊಗಳಿದ್ದಾರೆ.

Leave a Reply

Your email address will not be published.