ದಕ್ಷಿಣ ಸಿನಿ ರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ನಟಿ ಸಮಂತಾ ಒಂದಲ್ಲಾ ಒಂದು ವಿಷಯವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಸಮಂತಾ ಇದ್ದಲ್ಲಿ ಸುದ್ದಿ ಎನ್ನುವ ಹಾಗೆ ಸಮಂತಾ ಎಲ್ಲೆಲ್ಲೂ ಕಾಣುತ್ತಿದ್ದಾರೆ. ವಿಚ್ಚೇದನದ ನಂತರ ಸಮಂತಾ ಚಾರ್ಮ್ ದುಪ್ಪಟ್ಟಾಗಿದೆ ಎನ್ನುವುದರಲ್ಲಿ ಖಂಡಿತ ಅನುಮಾನವೇ ಇಲ್ಲ. ದಿನದಿಂದ ದಿನಕ್ಕೆ ಸಮಂತಾ ಜನಪ್ರಿಯತೆ ಹಿಂದಿಗಿಂತಲೂ ಹೆಚ್ಚಾಗುತ್ತಿದೆ. ದಕ್ಷಿಣದಲ್ಲಿ ಮಾತ್ರವೇ ಅಲ್ಲದೇ ಬಾಲಿವುಡ್ ನಲ್ಲೂ ಸಹಾ ಸದ್ದು, ಸುದ್ದಿ ಮಾಡುತ್ತಿದ್ದಾರೆ ಸಮಂತಾ ಎನ್ನುವುದು ಸಹಾ ಎಲ್ಲರಿಗೂ ತಿಳಿದ ವಿಷಯವಾಗಿದೆ.
ವೃತ್ತಿ ವಿಚಾರವಾಗಿ ಮಾತ್ರವೇ ಅಲ್ಲದೇ ಸಮಂತಾ ತಮ್ಮ ಖಾಸಗಿ ವಿಚಾರಗಳಿಂದಲೂ ಸಹಾ ಸುದ್ದಿಯಾಗುತ್ತಾರೆ. ಇನ್ನು ಇನ್ಸ್ಟಾಗ್ರಾಂ ನಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ನಟಿ ಸಮಂತಾ ಅಲ್ಲಿ ತಮ್ಮ ಹೊಸ ಹೊಸ ಫೋಟೋ ಶೂಟ್ ಗಳ ಫೋಟೋಗಳನ್ನು, ಸಿನಿಮಾದ ವೀಡಿಯೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಾರೆ. ಈಗ ಸಮಂತಾ ಅವರ ಹೊಸ ಫೋಟೋ ಶೂಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿವೆ. ಸಮಂತಾ ಹೊಸ ಲುಕ್ ನಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ.
ಕಳೆದ ಸಲ ತಮ್ಮ ಹಾಟ್ ಹಾಟ್ ಫೋಟೋಶೂಟ್ ಮೂಲಕ ಅಭಿಮಾನಿಗಳ ಹೃದಯಕ್ಕೆ ಕಿಚ್ಚು ಹಚ್ಚಿದ್ದ ನಿ ಸಮಂತಾ ಈಗ ತಮ್ಮ ಹೊಸ ಫೋಟೋ ಶೂಟ್ ನಲ್ಲಿ ಮುಸ್ಲಿಂ ವರ್ಗದ ಹುಡುಗಿಯಾಗಿ ಬೇಗಂ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಉಡುಗೆ ಧರಿಸಿ ಅಭಿಮಾನಿಗಳ ಮನಸ್ಸನ್ನು ತನ್ನತ್ತ ಸೆಳೆಯುತ್ತಿದ್ದಾರೆ. ಸಮಂತಾ ಅವರ ಈ ಹೊಸ ಲುಕ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದು, ಮೆಚ್ಚುಗೆಗಳನ್ನು ನೀಡುತ್ತಾ ಸಾಗಿದ್ದಾರೆ. ಸಮಂತಾ ಅವರು ಈ ಹೊಸ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗೋದ್ರಲ್ಲಿ ಅನುಮಾನವೇ ಇಲ್ಲ.
ಸಮಂತಾ ಫೋಟೋಗಳಿಗೆ ಅಭಿಮಾನಿಗಳು ಕಾಮೆಂಟ್ ಮಾಡಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಅಲ್ಲದೇ ಅನೇಕರು ಈ ಹೊಸ ಲುಕ್ ಅವರ ಹೊಸ ಸಿನಿಮಾದ ಪಾತ್ರಕ್ಕಾಗಿ ಇರಬಹುದಾ? ಎನ್ನುವ ಅನುಮಾನ ಕೂಡಾ ವ್ಯಕ್ತಪಡಿಸಿದ್ದಾರೆ. ಆದರೆ ಇದೇ ವೇಳೆ ಜಾಹೀರಾತುಗಳಲ್ಲಿ ಸಹಾ ಸಖತ್ ಬ್ಯುಸಿಯಾಗಿರುವ ಸಮಂತಾ ಯಾವುದಾದರೂ ಜಾಹೀರಾತಿಗಾಗಿ ಈ ಲುಕ್ ಇರಬಹುದು ಎಂದು ಕೂಡಾ ಕೆಲವರು ಅಭಿಪ್ರಾಯಪಡುತ್ತಿದ್ದಾರೆ.