ಬೇಕಾಗಿದ್ದು ಬಿಟ್ಟು ಉಳಿದೆಲ್ಲವನ್ನು ಖರೀದಿ ಮಾಡಿದ ನಿವೇದಿತಾ: ಹಾಗಾದರೆ ನಿವೇದಿತಾ ಗೌಡಗೆ ಬೇಕಾಗಿದ್ದೇನು?

Entertainment Featured-Articles Movies News Viral Video

ಬೇಸರವಾದಾಗ ಆ ಬೇಸರವನ್ನು ಕಳೆಯಲು ಅನೇಕರು ಅನೇಕ ರೀತಿಯ ದಾರಿಗಳನ್ನು ನೋಡುತ್ತಾರೆ. ಮನರಂಜನೆಯ ಮೂಲಗಳ ಕಡೆಗೆ ಗಮನ ನೀಡುತ್ತಾರೆ. ಆದರೆ ಬಿಗ್ ಬಾಸ್ ನ ಮಾಜಿ ಸ್ಪರ್ಧಿಯಾಗಿರುವ ನಿವೇದಿತಾ ಗೌಡ ತಮಗೆ ಬೇಸರವಾಯಿತು ಎಂದು ತಾವು ಮಾಡಿದ ಕೆಲಸದ ಕುರಿತಾಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದಷ್ಟು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ನಿವೇದಿತಾ ಗೌಡ ವೀಡಿಯೋವೊಂದನ್ನು ಮಾಡಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಿವೇದಿತಾ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿದ್ದು, ದೊಡ್ಡ ಸಂಖ್ಯೆಯ ಹಿಂಬಾಲಕರನ್ನು ಪಡೆದುಕೊಂಡಿದ್ದಾರೆ.

ಹೌದು, ನಿವೇದಿತಾ ಅವರು ಮೊನ್ನೆಯಷ್ಟೇ ನನಗೆ ಸಖತ್ ಬೋರಾಗಿತ್ತು. ಅದಕ್ಕೆ ನಾನು ಶಾಪಿಂಗ್ ಮಾಡಲು ಹೋಗಿದ್ದೆ ಎಂದು ಹೇಳಿಕೊಂಡಿದ್ದಾರೆ. ಹೀಗೆ ಮಾತು ಶುರು ಮಾಡಿದ ಅವರು ತಾನು ಏನೇನೆಲ್ಲಾ ಖರೀದಿ ಮಾಡಿದೆ ಎನ್ನುವುದನ್ನು ಸಹಾ ಹೇಳಿಕೊಂಡಿದ್ದಾರೆ. ವೀಡಿಯೋದಲ್ಲಿ ಅವುಗಳನ್ನು ತೋರಿಸಿದ್ದಾರೆ. ನಿವೇದಿತಾ ಬಳಿ ಕೆಂಪು ಬಣ್ಣದ ಡ್ರೆಸ್ ಇದ್ದು, ಅದಕ್ಕೆ ಮ್ಯಾಚಿಂಗ್ ಆಗುವ ಹೀಲ್ಸ್ ಬೇಕಾಗಿದ್ದ ಕಾರಣ ಅದನ್ನು ಖರೀದಿ ಮಾಡಲು ಹೋದಾಗ, ಬೇರೆ ಏನೆನೆಲ್ಲಾ ಖರೀದಿ ಮಾಡಬೇಕಾಗಿ ಬಂತು ಎನ್ನುವುದನ್ನು ಹೇಳಿಕೊಂಡಿದ್ದಾರೆ. ತಾನು ಶಾಪಿಂಗ್ ಮಾಡಿದ ವಸ್ತಗಳನ್ನು ತಮ್ಮ ಅಭಿಮಾನಿಗಳಿಗೆ ತೋರಿಸಿದ್ದಾರೆ.

ಕೆಂಪು ಬಣ್ಣದ ಹೀಲ್ಸ್ ಖರೀದಿಸಲು ಹೋದಾಗ ಅಂಗಡಿಯಲ್ಲಿ ಏನೆನೆಲ್ಲಾ ಹೊಸ ವಸ್ತುಗಳು ಬಂದಿದ್ದವೋ ಅದೆಲ್ಲವನ್ನು ಖರೀದಿ ಮಾಡಬೇಕಿನಿಸಿತ್ತು. ನನಗೆ ಬ್ಯಾಗ್ ಗಳು ಎಂದರೆ ಬಹಳ ಇಷ್ಟ, ಅದಕ್ಕೆ ಬ್ಯಾಗ್ ಗಳನ್ನು ಖರೀದಿ ಮಾಡಿದೆ ಎಂದು ಬಹಳ ಖುಷಿಯಿಂದ ಹೇಳಿಕೊಂಡಿದ್ದಾರೆ. ಯಾವ ವಸ್ತುವಿಗಾಗಿ ಶಾಪಿಂಗ್ ಮಾಡಲು ಹೋಗಿದ್ದೆನೋ ಅದನ್ನು ಬಿಟ್ಟು ಬೇರೆ ಎಲ್ಲಾ ವಸ್ತುಗಳನ್ನು ತಂದೆ. ಕೆಂಪು ಬಣ್ಣದ ಹೀಲ್ಸ್ ಗಾಗಿ ಮತ್ತೊಮ್ಮೆ ಶಾಪಿಂಗ್ ಗೆ ಹೋಗಬೇಕು ಎನ್ನುವ ಮಾತನ್ನು ಅವರು ಹೇಳಿದ್ದಾರೆ. ನಿವೇದಿತಾ ಗೌಡ ಅವರ ವೀಡಿಯೋ ವೈರಲ್ ಆಗಿದೆ.

Leave a Reply

Your email address will not be published.