ಬೆಳ್ಳಿತೆರೆಯ ಮೇಲೊಂದು ಅತ್ಯದ್ಭುತ ಪಾತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ ಕನ್ನಡತಿ ಅನುಷ್ಕಾ ಶೆಟ್ಟಿ

Written by Soma Shekar

Published on:

---Join Our Channel---

ನಟಿ ಅನುಷ್ಕಾ ಶೆಟ್ಟಿ ಬಾಹುಬಲಿ ಸಿನಿಮಾದ ನಂತರ ಅಷ್ಟಾಗಿ ಯಾವುದೋ ದೊಡ್ಡ ಸಿನಿಮಾ ಪ್ರಾಜೆಕ್ಟ್ ನಲ್ಲಿ ಕಾಣಿಸಿಕೊಂಡಿಲ್ಲ. ಅಲ್ಲದೇ ಬಾಹುಬಲಿಯಂತಹ ಸೂಪರ್ ಡೂಪರ್ ಹಿಟ್ ಸಿನಿಮಾ ನಂತರ ಅನುಷ್ಕಾ ಅವರು ನಟಿಸಿದ ಭಾಗಮತಿ ಮತ್ತು ನಿಶ್ಯಬ್ಧಂ ಎರಡೂ ಸಿನಿಮಾಗಳು ಕೂಡಾ ದೊಡ್ಡ ಮಟ್ಟದ ಯಶಸ್ಸನ್ನು ಕಾಣಲಿಲ್ಲ. ಭಾಗಮತಿ ಒಂದು ಹಂತಕ್ಕೆ ಯಶಸ್ಸು ಪಡೆದರೂ ಅದು ಅನುಷ್ಕಾ ಅವರ ಸಿನಿಮಾ ಪಡೆಯಬೇಕಿದ್ದ ನಿಜವಾದ ಗೆಲುವು ಅದಾಗಿರಲಿಲ್ಲ. ಆದ್ದರಿಂದಲೇ ಅವರ ಅಭಿಮಾನಿಗಳು ಅನುಷ್ಕಾ ತಮ್ಮ ಯಾವ ಹೊಸ ಸಿನಿಮಾದ ಮೂಲಕ ಭರ್ಜರಿ ಎಂಟ್ರಿ ನೀಡಲಿದ್ದಾರೆ ಎನ್ನುವ ನಿರೀಕ್ಷೆಯನ್ನು ಇಟ್ಟು ಕೊಂಡಿದ್ದಾರೆ.

ಈಗ ಅಭಿಮಾನಿಗಳು ಹಾಗೂ ಸಿನಿಮಾ‌ ಮಂದಿಗೆ ಖುಷಿ ನೀಡುವ ವಿಚಾರವೊಂದು ಟಾಲಿವುಡ್ ಅಂಗಳದಲ್ಲಿ ಹರಿದಾಡಿ, ಅದು ಎಲ್ಲಾ ಕಡೆ ಸುದ್ದಿಯಾಗಿದೆ.‌ 2005 ರಲ್ಲಿ ರಜನೀಕಾಂತ್ ಹಾಗೂ ಜ್ಯೋತಿಕಾ, ನಯನ ತಾರ ಜೊತೆಯಾಗಿ ನಟಿಸಿದ್ದ ಚಂದ್ರಮುಖಿ ಸಿನಿಮಾ ತಮಿಳು ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ ಕನ್ನಡದಲ್ಲಿ ಆಪ್ತ ಮಿತ್ರ ಹೆಸರಿನಲ್ಲಿ ದೊಡ್ಡ ಹೆಸರನ್ನು ಮಾಡಿತ್ತು.

ಅದಾದ ನಂತರ ತೆಲುಗಿನಲ್ಲಿ ನಾಗವಲ್ಲಿ ಎನ್ನುವ ಹೆಸರಿನಲ್ಲಿ ಚಂದ್ರ ಮುಖಿ ಸಿನಿಮಾದ ಮುಂದುವರೆದ ಭಾಗ ಸಿನಿಮಾ ಆಗಿತ್ತು. ಅದರಲ್ಲಿ ನಟಿ ಅನುಷ್ಕಾ ಶೆಟ್ಟಿ ಅವರು ನಾಗವಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ತಮಿಳಿನಲ್ಲಿ ಚಂದ್ರಮುಖಿ ಸೀಕ್ವೆಲ್ ಎಂದು ನಟ, ನಿರ್ದೇಶಕ ರಾಘವ ಲಾರೆನ್ಸ್ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದಲ್ಲಿ ಅನುಷ್ಕಾ ನಾಗವಲ್ಲಿ ಆಗಲಿದ್ದಾರೆ ಎನ್ನಲಾಗಿದೆ.

ಚಂದ್ರಮುಖಿ ಸಿನಿಮಾದ ಸೀಕ್ವೆಲ್ ಎಂದ ಕೂಡಲೇ ನಾಗವಲ್ಲಿ ಪಾತ್ರದ ವಿಚಾರ ಬಂದಾಗ ಬಹಳಷ್ಟು ಜನರು ಅನುಷ್ಕಾ ಶೆಟ್ಟಿ ಅವರ ಹೆಸರನ್ನು ಸೂಚಿಸಿದ್ದಾರೆ ಎನ್ನಲಾಗಿದೆ. ಆದ ಕಾರಣ ರಾಘವ ಲಾರೆನ್ಸ್ ಅವರು ನಾಗವಲ್ಲಿ ಪಾತ್ರದ ಕುರಿತಾಗಿ ಅನುಷ್ಕಾ ಅವರ ಜೊತೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ನಟಿ ಅನುಷ್ಕಾ ಈ ಪಾತ್ರಕ್ಕೆ ಒಪ್ಪಿದರೆ ತೆರೆಯ ಮೇಲೆ ನಾಗವಲ್ಲಿಯಾಗಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ಅನುಷ್ಕಾ ಅವರ ಸಿನಿ ಪಯಣವನ್ನು ನೋಡಿದಾಗ ಅರುಂಧತಿ, ಭಾಗಮತಿ, ಬಾಹುಬಲಿಯ ದೇವಸೇನಾ ಗಳಂತಹ ಐತಿಹಾಸಿಕ ಪಾತ್ರಗಳೇ ಅವರಿಗೆ ಹೆಚ್ಚಿನ ಹೆಸರನ್ನು ತಂದು ಕೊಟ್ಟಿದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ. ಅಂದ ಮೇಲೆ ನಾಗವಲ್ಲಿಯಾಗಿ ಎರಡನೇ ಬಾರಿ ಅವರು ತೆರೆಯ ಮೇಲೆ ಬಂದರೆ ಅಭಿಮಾನಿಗಳ ಕಣ್ಣಿಗೆ ನಿಜಕ್ಕೂ ಅದೇ ಹಬ್ಬವೇ ಸರಿ.

Leave a Comment