ಬೆಳ್ಳಿತೆರೆಯಲ್ಲಿ ಅಬ್ಬರಿಸಲು ಸಜ್ಜಾದ ಸೂಪರ್ ಹೀರೋ ಶಕ್ತಿಮಾನ್: ಸೂಪರ್ ಹೀರೋ ಆಗಿ ಮಿಂಚೋ ನಟ ಯಾರು??

Entertainment Featured-Articles News

ಸುಮಾರು ಎರಡು ದಶಕಗಳ ಹಿಂದೆ ದೂರದರ್ಶನದ ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಶಕ್ತಿಮಾನ್ ಸೀರಿಯಲ್ ಅಂದಿನ ಮಕ್ಕಳ ಫೇವರಿಟ್ ಸೀರಿಯಲ್ ಆಗಿತ್ತು. ಭಾರತದ ಮೊಟ್ಟ‌ಮೊದಲ ಸೂಪರ್ ಹೀರೋ ಆಗಿ ಶಕ್ತಿಮಾನ್ ಕಿರುತೆರೆಗೆ ಎಂಟ್ರಿ ನೀಡಿದ್ದ. ಆಗ ಶಕ್ತಿಮಾನ್ ಸೀರಿಯಲ್ ಮಕ್ಕಳ ಹೃದಯವನ್ನು ಗೆದ್ದಿತ್ತು, ಯಾವ ಮಟ್ಟಕ್ಕೆ ಸೀರಿಯಲ್ ಜನಪ್ರಿಯತೆ ಪಡೆದಿದ್ದು ಎಂದರೆ ಭಾನುವಾರ ಬಂತೆಂದರೆ ಮಕ್ಕಳು ತಮ್ಮ ಫೇವರಿಟ್ ಸೂಪರ್ ಹೀರೋ ಶಕ್ತಿಮಾನ್ ನನ್ನು ನೋಡಲು ಕಾಯುತ್ತಿದ್ದರು, ಟಿವಿ ಗಳ ಮುಂದೆ ಮಕ್ಕಳು ಅಲುಗಾಡದೇ ಕೂರುತ್ತಿದ್ದರು.

1997 ರಿಂದ 2005 ರ ವರೆಗೆ ಕಿರುತೆರೆಯಲ್ಲಿ ಶಕ್ತಿಮಾನ್ ಜನರಿಗೆ ದೊಡ್ಡ ಮಟ್ಟದ ಮನರಂಜನೆಯನ್ನು ನೀಡಿದ್ದು ಕೂಡಾ ವಾಸ್ತವ. ಆಗ ಶಕ್ತಿಮಾನ್ ರೂಪದಲ್ಲಿ ಬಾಲಿವುಡ್ ನಟ ಮುಖೇಶ್ ಖನ್ನಾ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಅಂದು ಈ ಪಾತ್ರ ಯಾವ ಮಟ್ಟಕ್ಕೆ ಮಕ್ಕಳ ಮೇಲೆ ಮೋಡಿ ಮಾಡಿತ್ತು ಎಂದರೆ ಮುಖೇಶ್ ಖನ್ನಾ ಅವರನ್ನು ಶಕ್ತಿಮಾನ್ ಎಂದೇ ಗುರುತಿಸಲಾಗುತ್ತಿತ್ತು. ಶಕ್ತಿಮಾನ್ ಕಾಸ್ಟ್ಯೂಮ್ಸ್ ಮತ್ತು ಗೆಟಪ್ ಒಂದು ಹೊಸ ಟ್ರೆಂಡ್ ಅನ್ನು ಹುಟ್ಟು ಹಾಕಿತ್ತು.

ಅನೇಕ ಕಂಪನಿಗಳು ತಮ್ಮ ಉತ್ಪನ್ನಗಳ ಮೇಲೆ ಶಕ್ತಿಮಾನ್ ಫೋಟೋಗಳನ್ನು ಬಳಸಿದ್ದು ಸಹಾ ವಾಸ್ತವ. ಹೀಗೆ ಭಾರತದ ಮೊಟ್ಟ ಮೊದಲ ಸೂಪರ್ ಹೀರೋ ಆಗಿ ಬಿರುಗಾಳಿ ಎಬ್ಬಿಸಿದ್ದ ಸೂಪರ್ ಹೀರೋ ಇದೀಗ ಮತ್ತೊಮ್ಮೆ ಜನರನ್ನು ರಂಜಿಸಲು ಸಜ್ಜಾಗುತ್ತಿದ್ದಾನೆ ಎನ್ನಲಾಗಿದ್ದು, ಈ ಬಾರಿ ಶಕ್ತಿಮಾನ್ ಕಿರುತೆರೆಯಲ್ಲಿ ಅಲ್ಲ ಬದಲಿಗೆ ಬೆಳ್ಳಿ ತೆರೆಯ ಮೇಲೆ ಬರಲಿದ್ದಾನೆ ಎನ್ನಲಾಗಿದೆ. ಮುಖೇಶ್ ಖನ್ನಾ ಅವರು 2020 ರಲ್ಲೇ ಶಕ್ತಿಮಾನ್ ಅನ್ನು ತೆರೆ ಮೇಲೆ ತರಲಾಗುವುದು ಎನ್ನುವ ಮಾತನ್ನು ಹೇಳಿದ್ದರು.

ಇದೀಗ ಈ ವಿಷಯವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ ಸೋನಿ ಪಿಕ್ಚರ್ಸ್. ಅಲ್ಲದೇ ಘೋಷಣೆಯ ಜೊತೆಗೆ ಒಂದು ಪ್ರಮೋಶನಲ್ ವೀಡಿಯೋವನ್ನು ಸಹಾ ಶೇರ್ ಮಾಡಲಾಗಿದೆ. ಭಾರತ ಮಾತ್ರವೇ ಅಲ್ಲದೇ ವಿದೇಶಗಳಲ್ಲಿ ಸಹಾ ಈಗಾಗಲೇ ಸೂಪರ್ ಹೀರೋಗಳ ಕಥೆಗಳು ದೊಡ್ಡ ಮಟ್ಟದ ವಿಜಯವನ್ನು ಪಡೆದಿರುವುದು ನಮಗೆಲ್ಲಾ ತಿಳಿದೇ ಇದೆ. ನಮ್ಮಲ್ಲೂ ಕೂಡಾ ನಟ ಹೃತಿಕ್ ರೋಶನ್ ಅವರ ಕ್ರಿಶ್ ಸಿನಿಮಾ ಇದಕ್ಕೆ ಒಂದು ಅತ್ಯುತ್ತಮವಾದ ಉದಾಹರಣೆ ಕೂಡಾ ಹೌದು.

ಬೆಳ್ಳಿ ತೆರೆಗೆ ಈಗ ಭಾರತದ ಮೊದಲು ಸೂಪರ್ ಹೀರೋ ಶಕ್ತಿಮಾನ್ ಅನ್ನು ಬೆಳ್ಳಿತೆರೆಗೆ ತರಲು ಸೋನಿ ಪಿಕ್ಚರ್ಸ್ ಸಿದ್ಧವಾಗಿದೆ. ಇದಕ್ಕಾಗಿ ಬ್ರೂಯಿಂಗ್ ಥಾಟ್ಸ್
ಪ್ರೈವೇಟ್ ಲಿಮಿಟೆಡ್ ಮತ್ತು ಮುಖೇಶ್ ಖನ್ನಾ ಅವರ ಭೀಷ್ಮಾ ಇಂಟರ್ನ್ಯಾಷನಲ್ ಜೊತೆ ಕೈ ಜೋಡಿಸಲು ಬಹಳ ಉತ್ಸುಕರಾಗಿದ್ದೇವೆ ಎನ್ನುವ ಸಾಲನ್ನು ಸೋನಿ ತನ್ನ ಪೋಸ್ಟ್ ಜೊತೆಗೆ ಶೇರ್ ಮಾಡಿಕೊಂಡಿದೆ. ಶಕ್ತಿಮಾನ್ ಸಿನಿಮಾಕ್ಕಾಗಿ ಸಜ್ಜಾಗಿದೆ, ಶೀಘ್ರದಲ್ಲೇ ಉಳಿದ ಮಾಹಿತಿಗಳನ್ನು ಸಹಾ ಹಂಚಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಇನ್ನು ಬೆಳ್ಳಿತೆರೆಯ ಮೇಲೆ ಯಾರು ಶಕ್ತಿಮಾನ್ ಆಗಿ ಮಿಂಚಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಬಾಲಿವುಡ್ ನ ನಟರಾದ ಸಲ್ಮಾನ್ ಖಾನ್, ರಣವೀರ್ ಸಿಂಗ್, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಹೃತಿಕ್ ರೋಷನ್ ಹೆಸರು ಸಹಾ ಶಕ್ತಿಮಾನ್ ಪಾತ್ರಕ್ಕಾಗಿ ಹರಿದಾಡಿವೆ. ಹೃತಿಕ್ ರೋಶನ್ ಈಗಾಗಲೇ ಕ್ರಿಶ್ ಆಗಿ ತೆರೆಯ ಮೇಲೆ ಬಂದಿರುವ ಕಾರಣ ಅವರು ಶಕ್ತಿಮಾನ್ ಆಗೋದು ಅನುಮಾನ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.

Leave a Reply

Your email address will not be published. Required fields are marked *