ಬೆಳ್ಳಂಬೆಳ್ಳಿಗೆ ಮುಖಕ್ಕೆ ಅದು ಹಚ್ಚಿದರೆ ಕಾಂತಿ ಹೆಚ್ಚುತ್ತೆ: ತಮನ್ನಾ ಕೊಟ್ಟ ಬ್ಯೂಟಿ ಟಿಪ್ ಗೆ ಶಾಕ್ ಆದ್ರು ಜನ

Entertainment Featured-Articles News

ದಕ್ಷಿಣ ಸಿನಿ ರಂಗದ ತೆಲುಗು, ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿ ಹಾಗೂ ಬಾಲಿವುಡ್ ನಲ್ಲೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಮಿಲ್ಕಿ ಬ್ಯೂಟಿ ತಮನ್ನಾ ತಮ್ಮ ಅಂದ, ಗ್ಲಾಮರ್ ಲುಕ್ ಗಳಿಂದಾಗಿಯೇ ದೊಡ್ಡ ಜನಪ್ರಿಯತೆ ಪಡೆದಿದ್ದಾರೆ. ನಟನೆಯಲ್ಲಿ ಸಹಾ ತನ್ನದೇ ಆದ ಛಾಪು ಮೂಡಿಸಿರುವ ನಟಿ ತಮನ್ನಾ ತೆಲುಗು, ತಮಿಳಿನಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ಮಿಲ್ಕಿ ಬ್ಯೂಟಿ ತಮನ್ನಾ ಅವರ ತ್ವಚೆ ಹಾಗೂ ಅವರ ಅಂದದ ಬಗ್ಗೆ, ಆ ಅಂದದ ಹಿಂದಿನ ಸೀಕ್ರೆಟ್ ಏನು ಎಂದು ತಿಳಿಯುವ ಕುತೂಹಲ ಅನೇಕರಿಗೆ ಇದೆ ಎನ್ನುವುದು ವಾಸ್ತವ ವಿಚಾರವಾಗಿದೆ.

ನಟಿ ತಮನ್ನಾ ತಮ್ಮ ತ್ವಚೆಯ ಆರೈಕೆಯ ಕುರಿತಾಗಿ ಇದುವರೆಗೂ ಎಲ್ಲೂ ಸಹಾ ಹೆಚ್ಚಾಗಿ ಯಾವುದೇ ವಿಷಯವನ್ನು ಸಹಾ ಶೇರ್ ಮಾಡಿಕೊಂಡಿಲ್ಲ. ಯಾವಾಗಲೋ ಆಗೊಮ್ಮೆ, ಈಗೊಮ್ಮೆ ಸಣ್ಣ ಪುಟ್ಟ ಬ್ಯೂಟಿ ಟಿಪ್ ಗಳನ್ನು ಹೇಳಿದ್ದು ಬಿಟ್ಟರೆ ಹೆಚ್ಚು ವಿವರವಾಗಿ ಯಾವುದೇ ಟಿಪ್ ನೀಡಿರಲಿಲ್ಲ‌. ಆದರೆ ಇದೀಗ ತಮನ್ನಾ ಅವರು ಮೊದಲ ಬಾರಿಗೆ ಒಂದು ಬ್ಯೂಟಿ ಹ್ಯಾಕ್ ಒಂದು ರೀತಿ ಸೀಕ್ರೇಟ್ ಬ್ಯೂಟಿ ಟಿಪ್ ಅನ್ನು ನೀಡುವ ಮೂಲಕ ಅವರು ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದ್ದಾರೆ.

ಮಿಲ್ಕಿ ಬ್ಯೂಟಿ ತಮನ್ನಾ ಪಿಂಕ್ ವಿಲ್ಲಾ ಸಂದರ್ಶನದಲ್ಲಿ ಒಂದು ಬ್ಯೂಟಿ ಟಿಪ್ ಅನ್ನು ನೀಡಿದ್ದಾರೆ. ತಮನ್ನಾ ತಾನು ಅಷ್ಟೇನು ವಿಚಿತ್ರವಾಗಿ ಮುಖದ ಮೇಲೆ ಪ್ರಯೋಗವನ್ನು ಮಾಡುವುದಿಲ್ಲ. ಒಂದು ಸಲ ಅರ್ಥ್ ಕ್ಲೇ ಮತ್ತು ಸೇಬಿನ ಸೈಡರ್ ವಿನೆಗರ್ ಬಳಸಿ ಹಚ್ಚಿದ್ದೆ. ಅದನ್ನೆಲ್ಲಾ ಏಕೆ ಬಳಸಿದೆ ಎನ್ನೋದು ಗೊತ್ತಿಲ್ಲ. ಆದರೆ ಅದರ ಉಪಯೋಗ ಆಗಿದ್ದು ನಿಜ, ಎಂದು ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳುವ ವಿಚಾರದ ಬಗೆಗೆ ತಮನ್ನಾ ಮಾತನಾಡಿದ್ದಾರೆ.

ಹಾಲಿನಂತೆ ಬಣ್ಣ ಪಡೆದಿರುವ ತಮನ್ನಾ ಮುಖಕ್ಕೆ ಯಾವುದೋ ವಿಶೇಷವಾದ ದುಬಾರಿ ಫೇಸ್ ಪ್ಯಾಕ್ ಬಳಸಬಹುದು ಎಂದುಕೊಂಡರೆ ಅದೇ ವೇಳೆ ಈ ವಿಷಯವಾಗಿ ತಮನ್ನಾ ನೀಡಿದ ಉತ್ತರ ಶಾ ಕಿಂ ಗ್ ಆಗಿದೆ. ಹೌದು ತಮನ್ನಾ ತಮ್ಮ ಮುಖದ ಮೇಲೆ ತಾವು ಮಾಡಿದಂತಹ ಒಂದು ವಿಚಿತ್ರ ಪ್ರಯೋಗದ ಬಗ್ಗೆ ಹೇಳಿದ್ದಾರೆ. ಹೌದು ತಮನ್ನಾ ತಾನು ಮುಖಕ್ಕೆ ಬೆಳಗಿನ ಜಾವದ ಸಮಯದಲ್ಲಿ ಬಾಯಲ್ಲಿ ಬರುವ ಎಂಜಲನ್ನು ಹಚ್ಚಿದ್ದೇನೆ. ಈ ಎಂಜಲಿಗೆ ಮೊಡವೆಗಳನ್ನು ಒಣಗಿಸುವ ಸಾಮರ್ಥ್ಯ ಇದೆ ಎಂದಿದ್ದಾರೆ ತಮನ್ನಾ.

ಇದು ಕೇಳಲು ವಿಚಿತ್ರ ಎನಿಸಬಹುದು ಆದರೆ ಅದು ಬಹಳ ಪರಿಣಾಮಕಾರಿಯಾಗಿದೆ ಎನ್ನುವ ಮಾತನ್ನು ತಮನ್ನಾ ಹೇಳಿದ್ದಾರೆ. ಈ ಮೂಲಕ ಮಿಲ್ಕಿ ಬ್ಯೂಟಿ ತಮನ್ನಾ ಬಹಳ ಸರಳವಾದ ಅದೇ ವೇಳೆ ಒಂದು ವಿಚಿತ್ರವಾದಂತಹ ಬ್ಯೂಟಿ ಟಿಪ್ ಅನ್ನು ನೀಡಿರುವುದು ಎಲ್ಲರ ಗಮನವನ್ನು ಸೆಳೆದಿದೆ. ಕೆಲವರು ಇದನ್ನು ಕೇಳಿ ಇದೆಂತ ಟಿಪ್ ಎಂದರೆ ಇನ್ನೂ ಕೆಲವರು ಹೌದು ಇದು ನಿಜ ಎಂದು ಹೇಳಿದ್ದಾರೆ.

Leave a Reply

Your email address will not be published.