ಬೆಂಕಿಪೊಟ್ಟಣದಂತ ಸಣ್ಣ ಮನೆ ಆದ್ರೆ ಒಳಾಂಗಣ ವಿನ್ಯಾಸ ಮಾತ್ರ ಅದ್ಭುತ:ವೈರಲ್ ಆಗ್ತಿದೆ ಫೋಟೋಗಳು

Entertainment Featured-Articles News
77 Views

ಸ್ವಂತ ಮನೆಯೆನ್ನುವುದು ಅನೇಕರ ಕನಸು, ಆದರೆ ಆ ಕನಸನ್ನು ನನಸು ಮಾಡಿಕೊಳ್ಳಲು ಅನೇಕರು ತಮ್ಮ ಜೀವನದ ಅನೇಕ ವರ್ಷಗಳನ್ನು ಕಳೆಯುತ್ತಾರೆ. ಇನ್ನೂ ಕೆಲವರಿಗೆ ಈ ಕನಸು ಕನಸಾಗಿಯೇ ಉಳಿದು ಬಿಡುತ್ತದೆ. ಆದರೆ ಜಪಾನ್ ನಲ್ಲಿ ಇಂತಹ ಕನಸೊಂದು ನನಸಾಗುತ್ತಿದೆ. ಜಪಾನ್ ನ ರಾಜಧಾನಿ ಟೋಕಿಯೋ ದಲ್ಲಿ ಮಿನಿ ಹೋಮ್ಸ್ ಎನ್ನುವ ಪ್ರಾಜೆಕ್ಟ್ ಜನರ ಸ್ವಂತ ಮನೆಯ ಕನಸನ್ನು ನನಸು ಮಾಡುತ್ತಿದೆ. ಸ್ವೀಡಿಷ್ ಕಂಪನಿಯಾದ IKEA 100 ಚದರ ಅಡಿಯಲ್ಲಿ ಪೂರ್ತಿ ಮನೆಯೊಂದನ್ನು ನಿರ್ಮಾಣ ಮಾಡಿ, ಅದನ್ನು ಮಾರಾಟ ಮಾಡುವ ಮೂಲಕ ಗಮನ ಸೆಳೆದಿದೆ.

ಇನ್ನು ಇಷ್ಟೊಂದು ಚಿಕ್ಕ ಮನೆಯೇ? ಎನ್ನಬಹುದು, ಆದರೆ ಈ ಮನೆಯೊಳಗೆ ಹೋಗಿ ನೋಡಿದಾಗ ಒಳಾಂಗಣ ವಿನ್ಯಾಸವನ್ನು ನೋಡಿ ಖಂಡಿತ ಆಶ್ಚರ್ಯ ಪಡುವಂತೆ ಈ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಷಿಂಜುಕು ನಲ್ಲಿ ನಿರ್ಮಾಣ ಮಾಡಿರುವ ಇಂತಹ ಅಪಾರ್ಟ್ಮೆಂಟ್ ಒಂದು ಲೀಸ್ ಗೆ ದೊರೆಯುತ್ತಿದೆ. ಜನವರಿ 2023 ರವರೆಗೆ ಅದನ್ನು ಬಳಸಬಹುದು ಎನ್ನುವುದಾಗಿ ಕಂಪನಿಯು ಮಾಹಿತಿಯನ್ನು ನೀಡಿದೆ. ಈ ಮನೆಗಳನ್ನು ಷಿಂಜಕು ರೈಲ್ವೆ ನಿಲ್ದಾಣದ ಹತ್ತಿರ ನಿರ್ಮಾಣ ಮಾಡಲಾಗಿದೆ.

ಹೊರಗಿನಿಂದ ನೋಡಿದಾಗ ಬೆಂಕಿಪೊಟ್ಟಣದಂತೆ ಕಾಣುವ ಈ ಮನೆಗಳ ಒಳಗೆ ಹೋಗಿ ನೋಡಿದಾಗ ಇಂಪೀರಿಯಲ್ ಡಿಸೈನ್ ಅದ್ಭುತ ಎನಿಸುತ್ತದೆ. ಮನೆಯಲ್ಲಿ ಅಡುಗೆ ಮನೆ, ಮಲಗುವ ಕೋಣೆ ಮತ್ತು ಸ್ನಾನದ ಕೋಣೆ, ಶೌಚಾಲಯಗಳು ಇವೆ. ಅಷ್ಟೇ ಅಲ್ಲ ಫರ್ನೀಚರ್, ವಾಷಿಂಗ್ ಮೆಷಿನ್, ಪ್ರಿಡ್ಜ್, ಫೋಲ್ಡಬಲ್ ಟೇಬಲ್, ಹೀಗೆ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಸಹಾ ಈ ಮನೆಯಲ್ಲಿ ಅಳವಡಿಸಲಾಗಿದ್ದು, ಒಂದು ಸಕಲ ಸೌಕರ್ಯಗಳನ್ನು ಒಳಗೊಂಡ ಮನೆಗಳು ಇವಾಗಿವೆ.

ಇಂತಹ ಒಂದು ಮನೆಯ ವಿನ್ಯಾಸ ನಿಜಕ್ಕೂ ಬಹಳ ಅದ್ಭತವಾಗಿದೆ. ಇಂಟರ್ನೆಟ್ ನಲ್ಲಿ ಜಪಾನಿನ ಈ ಸಣ್ಣ ಆದರೆ ಅದ್ಭುತವಾದ ಮನೆಗಳ ಒಳಾಂಗಣ ವಿನ್ಯಾಸದ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ‌. ಎಲ್ಲಾ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಈ ಮನೆಯು ಸಹಜವಾಗಿಯೇ ಎಲ್ಲರ ಗಮನವನ್ನು ಸೆಳೆಯುತ್ತಿದ್ದು, ನೆಟ್ಟಿಗರು ಸಹಾ ಇದಕ್ಕೆ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ನೋಡಲು ಈ ಮನೆ ಬಹಳ ಸುಂದರವಾಗಿದ್ದು, ಬಹಳ ಅಚ್ಚುಕಟ್ಟಾಗಿದೆ.

Leave a Reply

Your email address will not be published. Required fields are marked *