ಬೀದಿ ಬೀದಿಯಲ್ಲಿ ಸೋಪು ಮಾರಾಟಕ್ಕೆ ಇಳಿದ ಒಂದು ಕಾಲದ ಸ್ಟಾರ್ ನಟಿ: ಎಂತ ಪರಿಸ್ಥಿತಿ ಬಂತು??

Entertainment Featured-Articles Movies Sports

ಸಿನಿಮಾ ರಂಗ ಎನ್ನುವ ಬಣ್ಣದ ಲೋಕದಲ್ಲಿ ಅನೇಕರು ಅದೃಷ್ಟದ ಆಟದಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳಾಗಿ ಮೆರೆದು ಅದೃಷ್ಟ ಕೈ ಕೊಟ್ಟಾಗ ಬೀದಿಗೆ ಬಂದ ಉದಾಹರಣೆಗಳು ಸಹಾ ಇದೆ. ಅಂತಹವರ ಪಟ್ಟಿಗೆ ಈಗ ಹೊಸ ಸೇರ್ಪಡೆಯಾಗಿದ್ದಾರೆ ಒಂದು ಕಾಲದ ಬ್ಯುಸಿ ನಟಿ ಐಶ್ವರ್ಯ ಭಾಸ್ಕರನ್ ಅವರು. ಐಶ್ವರ್ಯ ಅವರು ನೇರ ಮಾತಿಗೆ, ಖಡಕ್ ವರ್ತನೆಗೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ಜೊತೆಗೆ ಅವರ ಈ ಮಾತಿನ ಈ ಧಾಟಿಯಿಂದಲೇ ಅವರು ಅನೇಕರನ್ನು ಎದುರು ಹಾಕಿಕೊಂಡಿದ್ದಾರೆ. ದಕ್ಷಿಣದ ನಾಲ್ಕು ಭಾಷೆಗಳಲ್ಲಿ ನಟಿಸಿರುವ ಇವರು ದಕ್ಷಿಣ ಸಿನಿ ರಂಗದ ಸ್ಟಾರ್ ನಟಿಯ ಮಗಳು ಎನ್ನುವುದು ವಾಸ್ತವ.

ಬಹುಭಾಷಾ ನಟಿಯಾಗಿ ಗುರ್ತಿಸಿಕೊಂಡಿದ್ದ ನಟಿ ಐಶ್ವರ್ಯ ಅವರಿಗೆ ಈ ಸಿನಿಮಾಗಳಿಗೆ ಅವಕಾಶ ಇಲ್ಲ, ಇದ್ದ ಹಣ ಖಾಲಿಯಾಗಿದೆ, ಕುಟುಂಬಕ್ಕಾಗಿ ತಮ್ಮೆಲ್ಲಾ ಹಣವನ್ನು ಖಾಲಿ ಮಾಡಿರುವ ಅವರು ಈಗ ಜೀವನ ನಿರ್ವಹಣೆಗಾಗಿ ಸಾಬೂನು ಮಾರಾಟವನ್ನು ಮಾಡುವ ಉದ್ಯೋಗಕ್ಕೆ ಇಳಿದಿದ್ದಾರೆ. ಐಶ್ವರ್ಯ ಅವರು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಬದುಕಿನ ಸತ್ಯವನ್ನು ಹೇಳಿಕೊಂಡಿದ್ದಾರೆ. ತನಗೆ ನಟಿಸುವ ಆಸೆಯಿದೆ ಯಾರಾದರೂ ಅವಕಾಶ ನೀಡಿದರೆ ಖಂಡಿತ ನಟಿಸುವುದಾಗಿ ಹೇಳಿದ್ದಾರೆ.

ನಟಿ ಐಶ್ವರ್ಯ ಅವರು ಕನ್ನಡ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟವರು. ಹೊಸ ಕಾವ್ಯ, ಪಾಂಡವರು, ಒಗ್ಗರಣೆ ಸಿನಿಮಾಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ತೆಲುಗು, ತಮಿಳು ಮತ್ತು ಮಲೆಯಾಳಂ ನಲ್ಲಿ ಸ್ಟಾರ್ ನಟರ ಜೊತೆ ನಾಯಕಿಯಾಗಿ, ಅನಂತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಇದಲ್ಲದೇ ಇವರು ಸೀರಿಯಲ್ ಗಳಲ್ಲಿ ಕೂಡಾ ನಟಿಸಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಆದರೆ ಇಷ್ಟೆಲ್ಲಾ ಜನಪ್ರಿಯತೆಯ ಹೊರತಾಗಿಯೂ ಇಂದು ಅವಕಾಶಗಳಿಲ್ಲದ ಹಾಗೆ ಆಗಿದೆ.

ನಟಿ ಐಶ್ವರ್ಯ ಭಾಸ್ಕರನ್ ಅವರು ಸಂದರ್ಶನದಲ್ಲಿ, ಸಿನಿಮಾ ಕೆರಿಯರ್ ಆರಂಭವಾದ ಕೆಲವೇ ವರ್ಷಗಳಲ್ಲಿ ವಿವಾಹವಾಯಿತು, ಮದುವೆಯಾದ ಮೂರು ವರ್ಷಗಳಿಗೆ ವಿಚ್ಛೇದನ ಸಹಾ ಆಯಿತು. ಮದುವೆ ನಂತರ ಜೀವನ ನರಕದಂತಾಗಿತ್ತು ಎಂದಿರುವ ಐಶ್ವರ್ಯ ಅವರು ಅನಂತರ ಮಗಳು, ಕುಟುಂಬ ಎಂದು ಜೀವನವನ್ನು ನಡೆಸಿಕೊಂಡು, ಹಣವನ್ನೆಲ್ಲಾ ನಾನು ಕುಟುಂಬಕ್ಕಾಗಿಯೇ ಖರ್ಚು ಮಾಡಿದ್ದೇನೇ ಹೊರತು ಕುಡಿದು ಹಾಳು ಮಾಡಲಿಲ್ಲ ಎನ್ನುವ ಮಾತನ್ನು ಸಹಾ ಹೇಳಿದ್ದಾರೆ.

ಮಗಳು ಕರೆ ಮಾಡಿದಾಗ, ಅವಳೊಂದಿಗೆ ಮಾತನಾಡುತ್ತೇನೆ. ಅವಳಿಗೆ ಸಹಾಯ ಮಾಡುವ ಆಸೆಯಿದೆ ಎನ್ನುವುದಾದರೆ ನನ್ನ ಜೊತೆ ಬಂದು ಸೋಪು ವ್ಯಾಪಾರ ಮಾಡು ಎಂದು ಹೇಳುತ್ತೇನೆ ಎನ್ನುವ ಐಶ್ವರ್ಯ ಅವರು ಪ್ರಸ್ತುತ ಸೋಪು ಮಾರಿ ಜೀವನವನ್ನು ನಡೆಸುತ್ತಿದ್ದಾರೆ. ನಟಿಯ ಈ ಸ್ವಾವಲಂಬಿ ಬದುಕನ್ನು ಕಂಡು ನೆಟ್ಟಿಗರು ಮೆಚ್ಚುಗೆಯನ್ನು ನೀಡಿದ್ದಾರೆ. ಸ್ವಾಭಿಮಾನದ ಬದುಕು ಕಟ್ಟಿಕೊಂಡಿರುವ ಅವರಿಗೆ ಶುಭ ಹಾರೈಸಿದ್ದಾರೆ.

Leave a Reply

Your email address will not be published.