ಬಿಳಿ ಕೂದಲಿನ ಸಮಸ್ಯೆಯೇ? ಕಲರ್ ಮಾಡುವ ಬದಲು ಈ 3 ಪರಿಣಾಮಕಾರಿ ಟಿಪ್ಸ್ ಬಳಸಿ, ಸಮಸ್ಯೆ ದೂರ ಮಾಡಿ

Entertainment Featured-Articles Health News

ವರ್ಷಗಳ ಹಿಂದೆ 40, 50 ವಯಸ್ಸು ಆದಾಗ ತಲೆಗೂದಲು ನರೆಯಲು ಅಥವಾ ಬೆಳ್ಳಗೆ ಆಗಲು ಆರಂಭಿಸುತ್ತಿತ್ತು. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ 15, 20 ವರ್ಷ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗಲು ಆರಂಭಿಸಲಾಗಿದೆ. ಇದಕ್ಕೆ ಕಾರಣ ಕಲುಷಿತ ವಾತಾವರಣ ಹಾಗೂ ಬದಲಾಗಿರುವ ಆಹಾರ ಪದ್ಧತಿಗಳು. ಆದ ಕಾರಣ ಕೂದಲು ಬಲಹೀನವಾಗಿ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲಿನ ಸಮಸ್ಯೆಯು ಕಾಡತೊಡಗಿದೆ. ಇನ್ನು ತಲೆಯಲ್ಲಿ ಬಿಳಿ ಕೂದಲು ಕಾಣಿಸಿಕೊಂಡ ಕೂಡಲೇ ಅನೇಕರು ತಲೆಗೆ ಬಣ್ಣವನ್ನು ಹಾಕಲು ಮುಂದಾಗುತ್ತಾರೆ.‌ ಆದರೆ ಇದರಿಂದ ಅನೇಕ ಸೈಡ್ ಎಫೆಕ್ಟ್ ಗಳಿಗೆ ಗುರಿಯಾಗುವ ಸಾಧ್ಯತೆಗಳು ಇವೆ.

ಆಧುನಿಕ ಬಣ್ಣಗಳಲ್ಲಿ ರಾಸಾಯನಿಕಗಳು ಇರುವ ಕಾರಣ ಇದು ಆರೋಗ್ಯದ ಮೇಲೆ, ಚರ್ಮದ ಮೇಲೆ ಮತ್ತು ಕೂದಲಿನ ಮೇಲೆ ಸಹಾ ಕೆ ಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ ಎಂದು ಹೇಳುತ್ತಾರೆ ತಜ್ಞರು. ಹಾಗಾದರೆ ರಾಸಾಯನಿಕಗಳ ಪರಿಣಾಮ ಇಲ್ಲದೇ ಕೂದಲನ್ನು ಕಪ್ಪಾಗಿ ಮಾಡಲು ವಿಧಾನಗಳು ಇದೆಯೇ?? ಎನ್ನುವುದಾದರೆ ಖಂಡಿತ ಇದೆ. ಇಂದು ನಾವು ಅದನ್ನೇ ನಿಮಗೆ ಹೇಳಲು ಹೊರಟ್ಟಿದ್ದು, ಇವುಗಳನ್ನು ಸರಿಯಾಗಿ ಬಳಸಿದರೆ ನಿಮ್ಮ ಕೂದಲು ಕಪ್ಪಾಗುವುದರಲ್ಲಿ ಅನುಮಾನ ಇಲ್ಲ.

ಕರಿಬೇವು : ಕರಿಬೇವಿನಲ್ಲಿ ಬಯೋ ಆ್ಯಕ್ಟೀವ್ ಪದಾರ್ಥಗಳು ಇದ್ದು, ಇವು ಕೂದಲಿಗೆ ಅಗತ್ಯ ಇರುವಂತಹ ಪೋಷಕಾಂಶಗಳನ್ನು ಒದಗಿಸುತ್ತದೆ.‌ ಇದು ಕೂದಲು ಚಿಕ್ಕ ವಯಸ್ಸಿನಲ್ಲೇ ಬಿಳಿಯ ಬಣ್ಣಕ್ಕೆ ತಿರುಗುವ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ‌. ಕರಿಬೇವಿನ ಪೇಸ್ಟ್ ತಯಾರಿಸಿ ಅಥವಾ ಕರಿಬೇವು ಹಾಕಿರುವ ತಲೆಗೆ ಕೂದಲಿಗೆ ಬಳಸುವ ಎಣ್ಣೆಯನ್ನು ಉಪಯೋಗಿಸುವುದರಿಂದ ತಲೆಗೂದಲು ನರೆಯುವ ಸಮಸ್ಯೆಯನ್ನು ತಡೆಯಬಹುದಾಗಿರುತ್ತದೆ.

ನಿಂಬೆ ಕಾಯಿ : ನಿಂಬೆಯಲ್ಲಿರುವ ಅಂಶಗಳು ಕೂದಲನ್ನು ಕಪ್ಪಾಗಿಸುವುದರಲ್ಲಿ ಪರಿಣಾಮಕಾರಿ ಎಂದು ತಜ್ಞರು ಹೇಳಿದ್ದಾರೆ.‌ ಆಯುರ್ವೇದದ ಪ್ರಕಾರ, 15 ಎಂ ಎಲ್ ನಿಂಬೆರಸ, 20 ಗ್ರಾಂ ಸೀಬೆ ಹಣ್ಣಿನ ಪುಡಿಯನ್ನು ತೆಗೆದುಕೊಂಡು, ಎರಡರ ಮಿಶ್ರಣವನ್ನು ಮಾಡಿ, ಪೇಸ್ಟ್ ಸಿದ್ಧಪಡಿಸಿ, ಅದನ್ನು ತಲೆಗೂದಲಿಗೆ ಅಪ್ಲೈ ಮಾಡಿ, ಒಂದು ಗಂಟೆ ಕಾಲ ಹಾಗೇ ಬಿಟ್ಟು ನಂತರ ತಲೆಗೆ ಸ್ನಾನ ಮಾಡಬೇಕು. ಆಗಾಗ ಹೀಗೆ ಮಾಡುವುದರಿಂದ ಬಿಳಿಯ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ.

ತುಳಸಿ : ಕೇಶ ತಜ್ಞರ ಪ್ರಕಾರ, ತುಳಿಸಿ ಎಲೆಗಳಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳನ್ನು ಹೊಂದಿದ್ದು, ಇದು ತಲೆಗೂದಲು ಕಪ್ಪಗಾಗುವುದಕ್ಕೆ ನೆರವನ್ನು ನೀಡುತ್ತದೆ.
ಹೀಗೆ ತುಳಸಿ ಎಲೆಗಳು ಸಹಾ ಕೇಶ ರಕ್ಷಣೆಗೆ ಹಾಗೂ ಆರೈಕೆಗೆ ಸಹಾ ನೆರವಾಗಿದೆ ಎಂದು ಹೇಳಿದ್ದಾರೆ. ಹೀಗೆ ನಾವು ಕೆಲವು ನಮ್ಮಲ್ಲಿ ಲಭ್ಯವಿರುವ ವಸ್ತುಗಳಿಂದಲೇ ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಇಲ್ಲಿ ನೀಡಲಾಗಿರುವ ಮಾಹಿತಿಯು ಸಹಾ ತಜ್ಞರು ಹೇಳಿದಂತಹ ವಿಚಾರಗಳಷ್ಟೇ ಆಗಿದ್ದು, ಬಳಸುವ ಮುನ್ನ ಒಮ್ಮೆ ತಜ್ಞರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು.

Leave a Reply

Your email address will not be published.