ಬಿಳಿ ಕೂದಲಿಗೆ ಕಲರ್ ಮಾಡಿಸದೇ ಹಸೆ ಮಣೆ ಏರಿದ ನಟನ ಮಗಳು: ಸೌಂದರ್ಯ ಆತ್ಮ ವಿಶ್ವಾಸದಲ್ಲಿದೆ ಹೊರತು..

Written by Soma Shekar

Published on:

---Join Our Channel---

ಮದುವೆ ಎಂದೊಡನೆ ಯುವತಿಯರು ತಿಂಗಳುಗಳ ಮುಂದೆಯೇ ಮದುವೆಯ ದಿನ ತಾವು ಹೇಗೆ ಕಾಣಬೇಕು, ಯಾವ ಡ್ರೆಸ್ ಧರಿಸಬೇಕು , ಯಾವ ಒಡವೆ ಹಾಕಬೇಕು ಎಂದೆಲ್ಲಾ ಆಲೋಚನೆ ಮಾಡಲು ಪ್ರಾರಂಭಿಸುತ್ತಾರೆ. ಇನ್ನು ಮದುವೆ ಹೆಣ್ಣಾದರೆ ಒಂದು ಹೆಜ್ಜೆ ಮುಂದೆ ಇದ್ದು ಮದುವೆ ಶಾಪಿಂಗ್, ಆಭರಣ ಹೀಗೆ ಆಲೋಚನೆಯಲ್ಲಿ ಮುಳುಗುತ್ತಾರೆ. ಇನ್ನು ತಲೆಯಲ್ಲಿ ಒಂದೇ ಒಂದು ಬಿಳಿ ಕೂದಲು ಕಂಡರೂ ಆಕಾಶವೇ ತಲೆಯ ಮೇಲೆ ಬಿತ್ತೇನೋ ಎನ್ನುವಂತೆ ಚಡಪಡಿಸುತ್ತಾರೆ. ಆದರೆ ಇಂತಹವರ ನಡುವೆ ನಟನ ಮಗಳೊಬ್ಬರು ತಮ್ಮ ಬಿಳಿ ಕೂದಲಲ್ಲೇ ಹಸೆ ಮಣೆಯನ್ನು ಏರಿದ್ದಾರೆ.‌

ಹೌದು, ಹಿಂದಿ ಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡ ತಾರಕ್ ಮೆಹ್ತಾ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದಿರುವ ನಟ ದಿಲೀಪ್ ಜೋಶಿಯವರ ಮಗಳು ನಿಯತಿ ಮದುವೆಯ ದಿನ ತಮ್ಮ ತಲೆಗೂದಲಿಗೆ ಕಲರಿಂಗ್ ಏನೂ ಮಾಡಿಸದೇ ಸಹಜವಾದ ತನ್ನ ಬಿಳಿಗೂದಲಿನಲ್ಲೇ ವರನ ಜೊತೆ ಹಸೆ ಮಣೆ ಏರಿ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ನಟ ದಿಲೀಪ್ ಜೋಶಿಯವರು ಮದುವೆಗಾಗಿ ಸುಂದರವಾಗಿ ಸಿದ್ಧಳಾದ ಮಗಳ ಜೊತೆ ಕ್ಲಿಕ್ಕಿಸಿದ ಫೋಟೋ ಶೇರ್ ಮಾಡಿಕೊಂಡಿದ್ದು ಈ ಫೋಟೋಗೆ ಅಪಾರವಾದ ಮೆಚ್ಚುಗೆಗಳು ಹರಿದು ಬರುತ್ತಿವೆ.

ನಿಯತಿ ಅವರು ಯಶೋವರ್ಧನ್ ಮಿಶ್ರಾ ಎನ್ನುವವರ ಜೊತೆಗೆ ಹಸೆಮಣೆ ಏರಿದ್ದಾರೆ. ಗುಜರಾತಿ ಸಂಪ್ರದಾಯದಂತೆ ನಾಸಿಕ್ ನಲ್ಲಿ ನಡೆದ ಮದುವೆಗೆ ಅದ್ದೂರಿ ಮಂಟಪ, ರಂಗು ರಂಗಿನ ಅಲಂಕಾರ, ಭರ್ಜರಿ ಭೋಜನ ಎಲ್ಲವೂ ಚೆನ್ನಾಗಿತ್ತಾದರೂ ಎಲ್ಲಕ್ಕಿಂತ ಹೆಚ್ಚಿನ ಗಮನ ಸೆಳೆದಿರುವುದು ಮಾತ್ರ ನಿಯತಿ ಅವರು ಹೇರ್ ಕಲರಿಂಗ್ ಮಾಡಿಸದೇ ಸಹಜ ರೀತಿಯಲ್ಲಿ ಮದುವೆಗೆ ಸಿದ್ಧವಾಗಿದ್ದು. ಇದನ್ನು ನೋಡಿದ ನೆಟ್ಟಿಗರು ಮೆಚ್ಚುಗೆ ನೀಡಿದ್ದಾರೆ.

ನೆಟ್ಟಿಗರು ನಿಮ್ಮ ಸೌಂದರ್ಯದ ನಿಮಗೆ ಇರುವ ಆತ್ಮ ವಿಶ್ವಾಸವು ನಿಮ್ಮ ಬಿಳಿ ಕೂದಲಿನಲ್ಲೇ ನೀವು ಹಸೆಮಣೆಗೆ ಏರಿರುವುದರಲ್ಲೇ ಕಾಣುತ್ತಿದೆ. ನೀವು ಮದುವೆಗೆ ಈ ರೀತಿ ಸಿದ್ಧವಾಗಿರುವುದು ನಿಜಕ್ಕೂ ಮೆಚ್ಚುವಂತದ್ದು ಎಂದು ಹೇಳಿದ್ದಾರೆ. ಸೆಲೆಬ್ರಿಟಿಗಳ ಮನೆ ಮದುವೆ ಎಂದರೆ ಹೆಣ್ಣು ಮಕ್ಕಳು ಸಹಜವಾಗಿಯೇ ಡಿಸೈನರ್ ಗಳ ಡ್ರೆಸ್, ಮೇಕಪ್ ಆರ್ಟಿಸ್ಟ್ ಗಳು ಎಂದೆಲ್ಲಾ ತಲೆ ಕೆಡಿಸಿಕೊಳ್ಳುವಾಗ ನಿಯತಿ ಅದಕ್ಕೆಲ್ಲಾ ಭಿನ್ನವಾಗಿ ನಿಂತು ಜನ ಮೆಚ್ಚುಗೆ ಪಡೆದಿದ್ದಾರೆ.

Leave a Comment