ಡಿಸೆಂಬರ್ ಎಂಟರಂದು ತಮಿಳುನಾಡಿನಲ್ಲಿ ನಡೆದ ಹೆಲಿಕಾಪ್ಟರ್ ಅ ವ ಘ ಡ ವು ದೇಶ ವಾಸಿಗಳ ಒಂದು ನೋವು, ದುಃಖ ಹಾಗೂ ಬೇಸರವನ್ನು ಮೂಡಿಸಿತು. ಇದಕ್ಕೆ ಪ್ರಮುಖ ಕಾರಣ, ನಮ್ಮ ಭಾರತೀಯ ರಕ್ಷಣಾ ಪಡೆಯ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಸಹಿತ ಹದಿಮೂರು ಜನ ಸೇನೆಯ ಅಧಿಕಾರಿಗಳು ತಮ್ಮ ಪ್ರಾಣವನ್ನು ಕಳೆದುಕೊಂಡರು. ಈ ಅನಿರೀಕ್ಷಿತ ಅ ವ ಘ ಡವು ಇಡೀ ದೇಶಕ್ಕೆ ಒಂದು ಆ ಘಾ ತವನ್ನು ನೀಡಿತು. ಬಿಪಿನ್ ರಾವತ್ ಅವರ ಈ ಅಕಾಲಿಕ ನಿಧನದಿಂದ ದುಃಖತಪ್ತರಾದ ದೇಶವಾಸಿಗಳು ಶೋಕಾಚರಣೆ ಮಾಡಿದರು.
ದೇಶದ ವಿವಿಧ ಭಾಗಗಳಲ್ಲಿ ಶ್ರದ್ಧಾಂಜಲಿಯನ್ನು ಘಟಿಸಿ ತಮ್ಮ ಗೌರವ ನಮನವನ್ನು ಈ ವೀರ ಯೋಧರಿಗೆ ಅರ್ಪಿಸಿತು. ಹೀಗೆ ಇಡೀ ದೇಶ ದುಃಖದಲ್ಲಿರುವಾಗ, ಅ ಯೋ ಗ್ಯ ತನ ಮೆರೆದ ಯುವಕನೊಬ್ಬನು ಬಿಪಿನ್ ರಾವತ್ ಅವರ ಸಾವಿನ ಸಂಭ್ರಮವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಸಂಭ್ರಮಿಸಿ, ದೇಶ ವಾಸಿಗಳ ಕಟು ಟೀಕೆ ಮತ್ತು ಸಿಟ್ಟಿಗೆ ಗುರಿಯಾಗಿದ್ದು ಮಾತ್ರವೇ ಅಲ್ಲದೇ ಈಗ ತನ್ನ ಈ ಆ ಘಾ ತ ಕಾರಿ ಕೆಲಸಕ್ಕೆ ಜೈಲು ಪಾಲಾಗಿದ್ದಾನೆ.
ರಾಜಸ್ಥಾನ ಮೂಲದ ಜವ್ವಾದ್ ಖಾನ್ ಎನ್ನುವವನು ಸೋಶಿಯಲ್ ಮೀಡಿಯಾದಲ್ಲಿ ಬಿಪಿನ್ ರಾವತ್ ಅವರ ಫೋಟೋ ಶೇರ್ ಮಾಡಿ, ಜಹನ್ನಮ್ ಗೆ ಹೋಗುವ ಮೊದಲೇ ಸುಟ್ಟು ಹೋದಿರಿ ಎಂದು ಬರೆದುಕೊಂಡು, ತನ್ನ ಈ ಅವಹೇಳನಕಾರಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದ. ಈತನ ಪೋಸ್ಟ್ ನೋಡಿದ ನೆಟ್ಟಿಗರು ಸಿಟ್ಟು ಹೊರಹಾಕಿ, ಇವನಿಗೆ ತಕ್ಕ ಜಾಸ್ತಿ ಯಾಗಬೇಕಿದೆ ಎಂದು ದನಿಯನ್ನು ಎತ್ತಿದ್ದಾರೆ. ಕೂಡಲೇ ಸ್ಥಳೀಯ ಪೋಲಿಸರು ಜಾಗೃತರಾಗಿದ್ದಾರೆ.
ಟೋಂಕ್ ನ ಪೋಲಿಸರು ಜವ್ವಾದ್ ಖಾನ್ ನನ್ನು ಬಂಧಿಸಿ, ಟ್ವಿಟರ್ ಮೂಲಕ ತನ್ನ ಹೇಳಿಕೆ ನೀಡಿದ್ದಾರೆ. ರಾಜಸ್ಥಾನದ ರಾಜ ಟಾಕೀಸ್ ಬಳಿಯ ನಿವಾಸಿಯಾಗಿರುವ ಈತ ಅಬ್ದುಲ್ ನಕ್ಕಿ ಖಾನ್ ಎನ್ನುವವರ ಮಗನಾಗಿದ್ದು, ಈತ ಮಾಡಿದ ಅವಹೇಳನಕಾರಿ ಹೇಳಿಕೆ ನಮ್ಮ ಗಮನಕ್ಕೆ ಬಂದು ಆತನನ್ನು ಬಂ ಧಿ ಸಿರುವುದಾಗಿ, ಹೆಚ್ಚಿನ ವಿಚಾರಣೆ ನಡೆಸುತ್ತಿರುವುದಾಗಿ ಟ್ವಟಿರ್ ನಲ್ಲಿ ತಿಳಿಸಲಾಗಿದೆ.