ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅಪ್ಪು ಅಭಿನಯದ ಲಕ್ಕಿ ಮ್ಯಾನ್ ಗಳಿಸಿದ್ದೆಷ್ಟು? ಹೊಸ ದಾಖಲೆ ಬರೆಯುತ್ತಾ ಲಕ್ಕಿ ಮ್ಯಾನ್?
ಕನ್ನಡ ಸಿನಿಮಾ ರಂಗ ಮತ್ತು ಅಭಿಮಾನಿಗಳು ಎಂದಿಗೂ, ಎಂದೆಂದಿಗೂ ಮರೆಯಲಾಗದ ಮಾಣಿಕ್ಯ ಎಂದರೆ ಅವರು ಪುನೀತ್ ರಾಜ್‍ಕುಮಾರ್. ಅವರು ದೈಹಿಕವಾಗಿ ಎಲ್ಲರನ್ನೂ ಅಗಲಿ ಹೋದರೂ ಕೂಡಾ ಅವರು ಮಾಡಿರುವ ಅತ್ಯುತ್ತಮ ಕೆಲಸಗಳು, ಸಿನಿಮಾಗಳ ಮೂಲಕ ಅವರು ಎಲ್ಲರ ಸ್ಮರಣೆಯಲ್ಲಿ ಸದಾ ಹಸಿರಾಗಿಯೇ ಇದ್ದಾರೆ. ಅಲ್ಲದೇ ಅಭಿಮಾನಿಗಳು ಒಂದಲ್ಲಾ ಒಂದು ರೀತಿಯಲ್ಲಿ ಅವರನ್ನು ಸೋಶಿಯಲ್ ಮೀಡಿಯಾಗಳಲ್ಲಿ ಸ್ಮರಿಸುತ್ತಲೇ ಇರುವುದರಿಂದ ಅಪ್ಪು ಒಂದಲ್ಲಾ ಒಂದು ರೀತಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಪುನೀತ್ ಅವರು ಕೊನೆಯದಾಗಿ ಕಾಣಿಸಿಕೊಂಡ ಕಮರ್ಷಿಯಲ್ ಸಿನಿಮಾ ಯಾವುದು ಎನ್ನುವುದಾದರೆ ಅದು ಲಕ್ಕಿ ಮ್ಯಾನ್ ಸಿನಿಮಾ. ಡಾರ್ಲಿಂಗ್ ಕೃಷ್ಣ, ಸಂಗೀತ ಶೃಂಗೇರಿ ಜೋಡಿಯಾಗಿ ನಟಿಸಿರುವ ಸಿನಿಮಾ ಲಕ್ಕಿ ಮ್ಯಾನ್.
ಲಕ್ಕಿ ಮ್ಯಾನ್ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎಂದಾಗಲೇ ಕುತೂಹಲ ಮೂಡಿತ್ತು. ಅದರಲ್ಲೂ ಪುನೀತ್ ಅವರ ಅಗಲಿಕೆಯ ನಂತರವಂತೂ ಈ ಸಿನಿಮಾದ ಬಿಡುಗಡೆಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳೊಂದಿಗೆ ಕಾಯುತ್ತಿದ್ದರು. ಈ ಸಿನಿಮಾದಲ್ಲಿ ಅತಿಥಿ ಪಾತ್ರವಾದರೂ ಸಹಾ ಪುನೀತ್ ಅವರು ಸಿನಿಮಾದ ಪ್ರಮುಖ ಸನ್ನಿವೇಶಗಳಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ. ಮತ್ತೊಂದು ವಿಶೇಷವೆಂದರೆ ಈ ಸಿನಿಮಾದಲ್ಲಿ ಪುನೀತ್ ರಾಜ್‍ಕುಮಾರ್ ಅವರು ದೇವರ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ.
ಅಲ್ಲದೇ ಇದೇ ಸಿನಿಮಾದಲ್ಲಿ ಪುನೀತ್ ರಾಜ್‍ಕುಮಾರ್ ಮತ್ತು ಪ್ರಭುದೇವ ಇಬ್ಬರೂ ಸಹಾ ಒಂದು ಹಾಡಿಗೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿ ಅಭಿಮಾನಿಗಳಿಗೆ ಮನಸ್ಸಿಗೆ ಖುಷಿಯನ್ನು ನೀಡಿದ್ದಾರೆ. ಆದರೆ ಈ ಸಿನಿಮಾ ನೋಡಲು ಹೋದ ಪುನೀತ್ ಅಭಿಮಾನಿಗಳು ಚಿತ್ರಮಂದಿರದಲ್ಲೇ ಭಾವುಕರಾಗಿದ್ದಾರೆ. ತೆರೆಯ ಮೇಲೆ ತಮ್ಮ ಅಭಿಮಾನ ನಟನನ್ನು ನೋಡಿ ಅವರು ಕಣ್ಣೀರು ಹಾಕಿದ್ದಾರೆ. ಬಹಳಷ್ಟು ಜನ ಅಭಿಮಾನಿಗಳು ಭಾವುಕರಾದ ವೀಡಿಯೋ ಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ, ಅದನ್ನು ನೋಡಿದ ನೆಟ್ಟಿಗರು ಸಹಾ ಭಾವುಕರಾಗಿದ್ದುಂಟು. ಬಹಳಷ್ಟು ಜನರು ಪುನೀತ್ ಅವರಿಗಾಗಿಯೇ ಈ ಸಿನಿಮಾವನ್ನು ನೋಡಲು ಬರುತ್ತಿದ್ದಾರೆ ಎನ್ನುವುದು ಸಹಾ ನಿಜ.
ಸಿನಿಮಾ ಬಿಡುಗಡೆ ನಂತರ ಉತ್ತಮ ಕಲೆಕ್ಷನ್ ಮಾಡುತ್ತಿದೆ ಎನ್ನುವ ಸುದ್ದಿಯೊಂದು ಹೊರ ಬಂದಿದೆ.
ಸೆಪ್ಟೆಂಬರ್ 9 ರಂದು ಸಿನಿಮಾ ತೆರೆಗೆ ಬಂದಿತ್ತು. ಆದರೆ ಸೆಪ್ಟೆಂಬರ್ 8 ರ ಸಂಜೆಯೇ ಕೆಲವು ಕಡೆಗಳಲ್ಲಿ ಪೇಯ್ಡ್ ಪ್ರೀಮಿಯರ್ ಶೋ ಗಳ ವ್ಯವಸ್ಥೆ ಕೂಡಾ ಆಗಿತ್ತು ಎನ್ನುವುದು ವಿಶೇಷ. ರಾಜ್ಯದ ವಿವಿಧೆಡೆ ನಡೆದ ಈ ಶೋ ಗಳು ಹೌಸ್ ಫುಲ್ ಆಗಿತ್ತು. ಅಭಿಮಾನಿಗಳ ಕಣ್ಣಲ್ಲಿ ಕಣ್ಣೀರು ತುಂಬಿತ್ತು. ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ಉತ್ತಮ ಫಲಿತಾಂಶ ನೀಡಿದೆ ಎಂದು ಸಂದರ್ಶನವೊಂದರಲ್ಲಿ ನಟ ಡಾರ್ಲಿಂಗ್ ಕೃಷ್ಣ ಅವರು ಹೇಳಿದ್ದಾರೆ. ಬಿಡುಗಡೆ ನಂತರ ಶುಕ್ರವಾರಕ್ಕಿಂತ ಶನಿವಾರ ಮತ್ತು ಭಾನುವಾರದ ಕಲೆಕ್ಷನ್ ದುಪ್ಪಟ್ಟಾಗಿದೆ ಎನ್ನಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಬಹುದು ಎಂದಿದ್ದಾರೆ.