ಬಿಟ್ಟಿಯಾಗಿ ಬೆತ್ತಲಾಗಿಲ್ಲ: ರಣ್ವೀರ್ ಬೆತ್ತಲಾಗಲು ಪಡೆದ ಕೋಟಿಗಳು ಎಷ್ಟೆಂದು ಬಾಯ್ಬಿಟ್ಟ ಚಿತ್ರ ವಿಮರ್ಶಕ

Entertainment Featured-Articles Movies News

ಬಾಲಿವುಡ್ ನ ಸ್ಟಾರ್ ನಟ ರಣವೀರ್ ಸಿಂಗ್ ಅವರ ಬೆ ತ್ತ ಲೆ ಫೋಟೋ ಶೂಟ್ ನಂತರ, ಆ ಫೋಟೋಗಳು ವೈರಲ್ ಆದ ಮೇಲೆ ಅದರ ಬಗ್ಗೆ ಕಳೆದ ಕೆಲವು ದಿನಗಳಿಂದಲೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕೆಲವು ನಟರು ಸಹಾ ಇದರಿಂದ ಪ್ರೇರಣೆ ಪಡೆದು ತಾವು ಬೆ ತ್ತ ಲೆ ಫೋಟೋ ಗಳನ್ನು ಶೇರ್ ಮಾಡಿಕೊಳ್ಳುವತ್ತ ಗಮನ ಹರಿಸಿದ್ದಾರೆ. ಇಷ್ಟು ದಿನ ನಟಿಯರು ಹಾಟ್ ಹಾಟ್ ಫೋಟೋ ಶೂಟ್ ಮಾಡಿಸಿ ಮಿಂಚುತ್ತಿದ್ದರು. ಆದರೆ ರಣವೀರ್ ನಟರು ಸಹಾ ಕಮ್ಮಿಯೇನಿಲ್ಲ ಎನ್ನುವ ಹಾಗೆ ಹಾಟ್ ಫೋಟೋ ಶೂಟ್ ಮಾಡಿಸಿ ಸುದ್ದಿಯಾಗಿದ್ದಾರೆ.

ಜನಪ್ರಿಯ ಮ್ಯಾಗಜೀನ್ ಒಂದರ ಕವರ್ ಪೇಜ್ ಗಾಗಿ ರಣವೀರ್ ಬೆ ತ್ತ ಲೆಯಾಗಿ ಫೋಟೋ ಶೂಟ್ ಮಾಡಿಸಿದ್ದಾರೆ. ಅಲ್ಲದೇ ಯಾರು ಏನೇ ಅಂದರೂ ನಾನು ನಾನು ಅಂಜುವುದಿಲ್ಲ ಎಂದು ಅವರು ಹೇಳಿರುವ ಮಾತು ಸಹಾ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಇವೆಲ್ಲವುಗಳ ನಡುವೆ ನಟ ರಣವೀರ್ ಸಿಂಗ್ ಅವರ ಮೇಲೆ ಎನ್ ಜಿ ಓ ಒಂದು ಮುಂಬೈನ ಚೆಂಬೂರ್ ಪೋಲಿಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡುವ ಮೂಲಕ ಇದು ರಣವೀರ್ ಸಿಂಗ್ ಅವರಿಗೆ ಒಂದು ಸಂಕಷ್ಟ ತಂದಿಟ್ಟರೆ ಇನ್ನೊಂದು ಕಡೆ ಈ ಫೋಟೋಗಳ ಸಂಚಲನ ಸೃಷ್ಟಿಸಿದೆ.

ಮುಂಬೈ ಮೂಲದವರೇ ಆಗಿರುವ ವಕೀಲೆ ವೇದಿಕಾ ಚೌಬೆ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ರಣವೀರ್ ಸಿಂಗ್ ವಿರುದ್ಧ ಸೆಕ್ಷನ್ 292, 293, 509 ಮತ್ತು ಐಟಿ ಕಾಯ್ದೆಯ ಸೆಕ್ಷನ್ 67 (ಎ) ಅಶ್ಲೀಲತೆಗೆ ಮತ್ತು ಅದಸಭ್ಯತೆಗೆ ಸಂಬಂಧಿಸಿದ ಪ್ರಕರಣವನ್ನು ದಾಖಲಿಸಿದ್ದಾರೆ. ಫೋಟೋಗಳಿಂದ ರಣವೀರ್ ಮಹಿಳೆಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಚೌಬೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಆದರೆ ಖ್ಯಾತ ಚಿತ್ರ ವಿಮರ್ಶಕ ಉಮೈರ್ ಸಂದು ಈ ವಿಚಾರವಾಗಿ ಹೊಸ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಉಮೈರ್ ಸಂದು ಅವರು ಹೇಳುವ ಪ್ರಕಾರ ನೋಡಿದರೆ ರಣವೀರ್ ಸಿಂಗ್ ಈ ಬೆ ತ್ತ‌ ಲೆ ಫೋಟೋಶೂಟ್ ಗೆ ಭಾರೀ ಮೊತ್ತವನ್ನೇ ಪಡೆದಿದ್ದಾರೆ ಎನ್ನಲಾಗಿದೆ. ಅವರು ಕ್ಯಾಮರಾ ಮುಂದೆ ಹೀಗೆ ಪೋಸ್ ನೀಡಲು ಬರೋಬ್ಬರಿ 55 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದು ಈಗ ಈ ವಿಷಯದ ಬಗ್ಗೆ ಹೆಚ್ಚಿನ ಚರ್ಚೆಗಳಿಗೆ ಕಾರಣವಾಗಿದೆ. ಅಲ್ಲದೇ ಸೆಲೆಬ್ರಿಟಿಯಾಗಿ ಹಣಕ್ಕಾಗಿ ಹೀಗೆ ಮಾಡುವುದು ಸರಿಯೇ? ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *