ಬಿಗ್ ಬಾಸ್ 9 ಎಫೆಕ್ಟ್: ಒಂದೇ ಸಲಕ್ಕೆ, ಒಂದೇ ವಾಹಿನಿಯ 4 ಸೀರಿಯಲ್ ಗಳ ಅಂತ್ಯ? ಶಾಕ್ ಆದ ಕಿರುತೆರೆ ಪ್ರೇಕ್ಷಕರು

0 0

ಇತ್ತೀಚಿನ ವರ್ಷಗಳಲ್ಲಿ ಸೀರಿಯಲ್ ಗಳು ಎಂದರೆ ಅವು ಖಂಡಿತ ಬೇಗ ಅಂತ್ಯ ಕಾಣುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಸೀರಿಯಲ್ ಗಳು ಈಗ ಮೆಗಾ ಸೀರಿಯಲ್ ಗಳಾಗಿ ವರ್ಷಗಳ ಕಾಲ ಪ್ರಸಾರ ಕಾಣುತ್ತವೆ. ಇನ್ನೂ ವಿಚಿತ್ರ ಏನೆಂದರೆ ಆರಂಭವಾದಾಗಿನ ಕಥೆಗೂ ಇಂದಿನ ಕಥೆಗೂ ಸಂಬಂಧವೇ ಇಲ್ಲದೇ ಸಾಗುವ ಹಲವು ಸೀರಿಯಲ್ ಗಳು ವರ್ಷಗಳಾದರೂ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಆದರೆ ಇಂತಹ ಸನ್ನಿವೇಶದ ನಡುವೆ ಒಂದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಲ್ಕು ಸೀರಿಯಲ್ ಗಳು ಈಗ ಕೊನೆಯಾಗಲಿವೆ ಎನ್ನುವ ಸುದ್ದಿಯೊಂದು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಸದ್ದು ಮಾಡಿದ್ದು, ಕುತೂಹಲ ಕೆರಳಿಸಿದೆ ಹಾಗೂ ವೈವಿದ್ಯಮಯ ಪ್ರತಿಕ್ರಿಯೆಗಳು ಸಹಾ ಹರಿದು ಬರುತ್ತಿವೆ.

ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ನಮ್ಮನೆ ಯುವರಾಣಿ, ಮಂಗಳ ಗೌರಿ ಮದುವೆ, ನನ್ನರಸಿ ರಾಧೆ ಮತ್ತು ಕನ್ಯಾಕುಮಾರಿ ಸೀರಿಯಲ್ ಗಳು ಶೀಘ್ರದಲ್ಲೇ ಕೊನೆಯಾಗಲಿದೆ ಎನ್ನುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿ ಮಾಡಿದೆ. ಆದರೆ ಈ ವಿಚಾರವನ್ನು ಅಧಿಕೃತವಾಗಿ ವಾಹಿನಿಯಾಗಲೀ ಅಥವಾ ಸೀರಿಯಲ್ ನಿರ್ಮಾಣ ತಂಡವಾಗಲೀ ಘೋಷಣೆ ಮಾಡಿಲ್ಲವಾದರೂ, ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ಈ ವಿಚಾರ ಭರ್ಜರಿ ಸದ್ದನ್ನು ಮಾಡಿದೆ. ಬಿಗ್ ಬಾಸ್ 9 ಶೀಘ್ರದಲ್ಲೇ ಆರಂಭವಾಗಲಿರುವ ಕಾರಣದಿಂದ ಕಡಿಮೆ ಟಿ ಆರ್ ಪಿ ಇರುವ ಸೀರಿಯಲ್ ಗಳು ಮುಗಿಯಲಿದೆ ಎನ್ನುವ ಸುದ್ದಿ ಹರಿದಾಡಿದೆ.‌

ಪುಟ್ಟ ಗೌರಿ ಮದುವೆ ಮಂಗಳ ಗೌರಿ ಮದುವೆಯಾಗಿ ದಶಕಗಳಿಂದ ಪ್ರಸಾರವಾಗುತ್ತಿದ್ದು, ಇದೀಗ ನಿರ್ಮಾಪಕ, ನಿರ್ದೇಶಕ ಕೆ ಎಸ್ ರಾಮ್ ಜೀ ಅವರು ಈಗ ತಮ್ಮ ಈ ಸೀರಿಯಲ್ ಅನ್ನು ಮುಗಿಸಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ಕೂಡಾ ಇದೇ ರೀತಿ ಸುದ್ದಿಯಾಗಿತ್ತಾದರೂ ಸೀರಿಯಲ್ ಮುಗಿದಿಲ್ಲ ಎನ್ನುವುದು ಸತ್ಯ. ಇನ್ನು ಈ ಬಾರಿ ಹರಡಿರುವ ಸುದ್ದಿ ಸಹಾ ಹಾಗೇ ಗಾಳಿ ಸುದ್ದಿ ಮಾತ್ರವೇ ಆಗುವುದಾ? ಅಥವಾ ನಿಜವಾಗಿಯೂ ಸೀರಿಯಲ್ ಪ್ರಸಾರ ಕೊನೆಯಾಗುವುದಾ? ಎನ್ನುವುದನ್ನು ಕಾದು ನೋಡುವುದು ಬಿಟ್ಟು ಬೇರೆ ಮಾರ್ಗವಿಲ್ಲ.

ಸೂಪರ್ ನ್ಯಾಚುರಲ್ ಕಥಾನಕದೊಂದಿಗೆ ಪ್ರೇಕ್ಷಕರನ್ನು ರಂಜಿಸುತ್ತಿರುವ ಸೀರಿಯಲ್ ಕನ್ಯಾಕುಮಾರಿ ಶೀಘ್ರದಲ್ಲೇ ಮುಗಿಯಲಿದೆ ಎನ್ನಲಾಗುತ್ತಿದೆ. ಅಗಸ್ತ್ಗಾ ಮತ್ತು ಇಂಚರ ನಡುವಿನ ಪ್ರೇಮಕಥೆಯಾದ ನನ್ನರಸಿ ರಾಧೆ ಸಹಾ ಮುಗಿಯಲಿದೆ ಎನ್ನುವ ಸುದ್ದಿಯಾಗಿದೆ. ಈ ಮೂರು ಸೀರಿಯಲ್ ಗಳ ನಂತರ ಮುಗಿಯಲಿದೆ ಎಂದು ಸದ್ದು ಮಾಡಿರುವ ಮತ್ತೊಂದು ಸೀರಿಯಲ್ ನಮ್ಮನೆ ಯುವರಾಣಿ. ಈ ಎಲ್ಲಾ ಸೀರಿಯಲ್ ಗಳಲ್ಲೂ ಸಹಾ ಕನ್ನಡ ಕಿರುತೆರೆಯ ಮತ್ತು ಸಿನಿಮಾ ರಂಗದಲ್ಲಿ ಹೆಸರು ಮಾಡಿರುವ ಜನಪ್ರಿಯ ಕಲಾವಿದರು ಕಾಣಿಸಿಕೊಂಡಿದ್ದಾರೆ. ಈ ಸೀರಿಯಲ್ ಗಳು ಮುಗಿಯುತ್ತಿದೆ ಎನ್ನುವ ಸುದ್ದಿ ಅಭಿಮಾನಿಗಳಿಗೆ ಅಚ್ಚರಿ ಜೊತೆಗೆ ಶಾಕ್ ಸಹಾ ನೀಡಿದೆ.

Leave A Reply

Your email address will not be published.