ಬಿಗ್ ಬಾಸ್ 9, ಆರಂಭದಲ್ಲೇ ಬಿಗ್ ಶಾಕ್: ಈ ಬಾರಿ ಮನೆಗೆ ಹಳೇ ಮುಖಗಳು ಮತ್ತೆ ಕೊಡ್ತಿವೆ ಎಂಟ್ರಿ!! ಯಾರು ಈ ಸ್ಪರ್ಧಿಗಳು?

Written by Soma Shekar

Updated on:

---Join Our Channel---

ಕಲರ್ಸ್ ಕನ್ನಡ ವಾಹಿನಿ ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ಮನರಂಜನೆಯನ್ನು ಒದಗಿಸುವಲ್ಲಿ ಅಗ್ರ ಪಂಕ್ತಿಯಲ್ಲಿ ಇರುವ ಖಾಸಗಿ ವಾಹಿನಿಯಾಗಿದ್ದು, ಕಾಲ ಕಾಲಕ್ಕೆ ಪ್ರೇಕ್ಷಕರ ಮುಂದೆ ಮನರಂಜನಾ ಸರಕನ್ನು ಪ್ರಸ್ತುತ ಪಡಿಸುತ್ತಲೇ ಬರುತ್ತಿದೆ. ಸೀರಿಯಲ್ ಗಳು, ರಿಯಾಲಿಟಿ ಶೋ ಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ಕಲರ್ಸ್ ಕನ್ನಡದಲ್ಲಿ ಜನರ ಅಚ್ಚುಮೆಚ್ಚಿನ ಕಾರ್ಯಕ್ರಮದಲ್ಲಿ ಯಾವುದು ಎಂದರೆ ಅನುಮಾನವೇ ಇಲ್ಲದೇ ಅನೇಕರಿಂದ ತಕ್ಷಣ ಬರುವ ಉತ್ತರ ಬಿಗ್ ಬಾಸ್ ಶೋ ಎಂದು. ಹೌದು, ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಅಪಾರ ಜನಾದರಣೆಯನ್ನು ಪಡೆದಿರುವ ಬಿಗ್ ಬಾಸ್ ಈ ಬಾರಿ ಸೀಸನ್ 9 ರೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

ಇದೇ ಸೆಪ್ಟೆಂಬರ್ 24 ಕ್ಕೆ ಬಿಗ್ ಬಾಸ್ ಸೀಸನ್ 9 ರ ಗ್ರಾಂಡ್ ಪ್ರೀಮಿಯರ್ ಗೆ ಮುಹೂರ್ತ ಫಿಕ್ಸ್ ಆಗಿದ್ದಾಗಿದೆ. ಎಂದಿನಂತೆ ಕಿಚ್ಚ ಸುದೀಪ್ ಅವರ ಭರ್ಜರಿ ನಿರೂಪಣೆಯಲ್ಲಿ ಅದ್ದೂರಿ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಇನ್ನೊಂದು ಕಡೆ ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಎಂಟ್ರಿ ನೀಡ್ತಾರೆ ಎನ್ನುವುದರ ಊಹೆಗಳು, ಸಂಭಾವ್ಯ ಸೆಲೆಬ್ರಿಟಿಗಳ ಹೆಸರುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅದರಲ್ಲಿ ಜೊತೆ ಜೊತೆಯಲಿ ಸೀರಿಯಲ್ ಖ್ಯಾತಿಯ ಅನಿರುದ್ಧ್ ಅವರ ಹೆಸರು ಕೇಳಿ ಬಂದಿತ್ತಾದರೂ ನಟ ತಾನು ಬಿಗ್ ಬಾಸ್ ಹೋಗ್ತಿಲ್ಲ ಎನ್ನುವ ಅಧಿಕೃತ ವಿಷಯ ತಿಳಿಸಿದ್ದಾರೆ.

ಇನ್ನು ಬಿಗ್ ಬಾಸ್ ಕನ್ನಡ ಓಟಿಟಿ ಮೊದಲ ಸೀಸನ್ ಈ ವಾರ ಮುಗಿಯಲಿದ್ದು, ಇದರ ವಿನ್ನರ್ ಘೋಷಣೆಯ ಜೊತೆಗೆ, ಇಲ್ಲಿಂದ ಟಿವಿ ಬಿಗ್ ಬಾಸ್ ಗೆ ಕೂಡಾ ಎಂಟ್ರಿ ಕೊಡೋ ನಾಲ್ಕು ಜನರ ಯಾರು ಎನ್ನೋದು ಪ್ರೇಕ್ಷಕರಿಗೆ ತಿಳಿಯಲಿದೆ. ಆದರೆ ಈಗ ಒಂದು ಹೊಸ ವಿಷಯ ಸಖತ್ ಸೌಂಡ್ ಮಾಡುತ್ತಿದ್ದು, ಬಿಗ್ ಬಾಸ್ ಸೀಸನ್ 9 ರಲ್ಲಿ ಹೊಸಬರು, ಓಟಿಟಿ ಯಿಂದ ಆಯ್ಮೆಯಾದ ಸ್ಪರ್ಧಿಗಳು ಮಾತ್ರವೇ ಅಲ್ಲದೇ ಒಂದಷ್ಟು ಜನಪ್ರಿಯ ಹಾಗೂ ಬಿಗ್ ಬಾಸ್ ನ ಹಳೆಯ ಮುಖಗಳು ಕೂಡಾ ಬಿಗ್ ಬಾಸ್ ಮನೆಯೊಳಕ್ಕೆ ಎಂಟ್ರಿ ನೀಡಲಿದೆ ಎನ್ನುವ ಕುತೂಹಲಕಾರಿ ಸುದ್ದಿ ಸದ್ದು ಮಾಡಿದೆ.

ಹೌದು, ಮಾದ್ಯಮವೊಂದರ ಸುದ್ದಿಯ ಪ್ರಕಾರ ಹಿಂದಿನ ಬಿಗ್ ಬಾಸ್ ಸೀಸನ್ ಗಳಲ್ಲಿ ಮಿಂಚಿದ್ದ ಕೆಲವು ತಾರೆಯರು ಈ ಸೀಸನ್ ನಲ್ಲಿ ಮತ್ತೊಮ್ಮೆ ಮನೆಗೆ ಎಂಟ್ರಿ ಕೊಡ್ತಾರೆ ಎನ್ನಲಾಗಿದೆ. ಅದರಲ್ಲಿ ಈಗ ನಾಲ್ಕು ಜನರ ಹೆಸರುಗಳು ಸುದ್ದಿಯಾಗಿದ್ದು, ಅನುಪಮಾ ಗೌಡ, ನಾಗಿಣಿ ಖ್ಯಾತಿಯ ನಟಿ ದೀಪಿಕಾ ದಾಸ್, ಕಳೆದ ಸೀಸನ್ ನಲ್ಲಿ ಬಿಗ್ ಬಾಸ್ ಸ್ಪರ್ಧಿಗಳಾಗಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ನಂಬರ್ಗಿ ಹಾಗೂ ನಟಿ ವೈಷ್ಣವಿ ಗೌಡ ಅವರು ಈ ಬಾರಿ ಮತ್ತೊಮ್ಮೆ ಮನೆಯನ್ನು ಪ್ರವೇಶ ಮಾಡಬಹುದು ಎನ್ನಲಾಗಿದೆ. ಈ ಸುದ್ದಿ ಈಗ ಸಾಕಷ್ಟು ಅಚ್ಚರಿಯ ಜೊತೆಗೆ ಕುತೂಹಲವನ್ನು ಸಹಾ ಮೂಡಿಸಿದೆ.

Leave a Comment