ಬಿಗ್ ಬಾಸ್ 8: ಹೊರಡುವ ಮುನ್ನ ಕಿಚ್ಚ ಸುದೀಪ್ ಅವರ ಮುಂದೆ ಭಾವುಕರಾದ ನಟಿ ಶುಭಾ ಪೂಂಜಾ

Written by Soma Shekar

Published on:

---Join Our Channel---

ಕನ್ನಡ ಬಿಗ್ ಬಾಸ್ ಸೀಸನ್ ಕನ್ನಡ ಎಂಟು, ಎಲ್ಲಾ ಅಡ್ಡಿ, ಆತಂಕಗಳನ್ನು ಮೀರಿ ಪ್ರಸಾರವಾಗಿ ಯಶಸ್ಸನ್ನು ಪಡೆದ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಇನ್ನೇನು ತನ್ನ ಕೊನೆಯ ಹಂತಕ್ಕೆ ತಲುಪಿದೆ. ಬಿಗ್ ಬಾಸ್ ಫಿನಾಲೆ ವಾರ ಆರಂಭವಾಗಿದೆ. ಇನ್ನು ಈ ವಾರಾಂತ್ಯಕ್ಕೆ ಬಿಗ್ ಬಾಸ್ ವಿನ್ನರ್ ಯಾರಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆ ಬೀಳಲಿದೆ. ಇನ್ನು ಫಿನಾಲೆ ವಾರಕ್ಕೆ ಮುನ್ನ ಮನೆಯಿಂದ ಹೊರ ಬಂದವರು ನಟಿ ಶುಭಾ ಪೂಂಜಾ ಹಾಗೂ ಶಮಂತ್ ಬ್ರೋ ಗೌಡ.. ಶುಭ ಅವರು ಶನಿವಾರದ ಎಪಿಸೋಡ್ ನಲ್ಲಿ, ಶಮಂತ್ ಭಾನುವಾರದ ಎಪಿಸೋಡ್ ನಲ್ಲಿ ಎಲಿಮಿನೇಷನ್ ಎದುರಿಸಿ ತಮ್ಮ ಬಿಗ್ ಬಾಸ್ ಜರ್ನಿ ಮುಗಿಸಿ ಹೊರ ಬಂದಾಗಿದೆ. ಇನ್ನು ಮನೆಯಲ್ಲಿ ಆರು ಜನ ಉಳಿದಿದ್ದು, ಇದರಲ್ಲಿ ಒಬ್ಬರು ಮಿಡ್ ವೀಕ್ ಎಲಿಮಿನೇಷನ್ ಎದುರಿಸಿ ಟಾಪ್ ಐದು ಜನ ಉಳಿಯಲಿದ್ದಾರೆ.

ಶನಿವಾರ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಟಿ ಶುಭಾ ಪೂಂಜಾ ಬಿಗ್ ಬಾಸ್ ಮನೆಯಲ್ಲಿ ಬರೋಬ್ಬರಿ ಹದಿನಾರು ವಾರಗಳ ಕಾಲವನ್ನು ಬಹಳ ಖುಷಿಯಿಂದ ಎಂಜಾಯ್ ಮಾಡಿ ಬಂದಿದ್ದಾರೆ. ನಿನ್ನೆ ಅವರನ್ನು ವಾರಾಂತ್ಯದ ಎಪಿಸೋಡ್ ನಲ್ಲಿ ಬಿಗ್ ಬಾಸ್ ವೇದಿಕೆಗೆ ಕರೆಸಿದಾಗ, ನಟ ಕಿಚ್ಚ ಸುದೀಪ್ ಅವರ ಜೊತೆ ಮಾತನಾಡುತ್ತಾ ಶುಭ ಭಾವುಕರಾಗಿ ಕಣ್ಣೀರು ಹಾಕಿದರು. ಹೌದು ಶುಭಾ ಅವರಿಗೆ ಅವರ ಬಿಗ್ ಬಾಸ್ ಜರ್ನಿಯ ನೋವು ನಲಿವಿನ ವಿಟಿ ತೋರಿಸಿದಾಗ ಶುಭಾ ಅವರು ತಮ್ಮ ಜರ್ನಿ ಕಂಡು ಭಾವುಕರಾಗಿ ಬಿಟ್ಟರು, ವೇದಿಕೆ ಮೇಲೆ ಅವರು ಕಣ್ಣೀರು ಹಾಕಿದರು.

ಶುಭಾ ಮಾತನಾಡುವ ವೇಳೆ ತನಗೆ ಮಿಡ್ ವೀಕ್ ಎಲಿಮಿನೇಷನ್ ಇಷ್ಟ ಇರಲಿಲ್ಲ. ಆ ತರ ಮನೆಯಿಂದ ಹೋಗೋಕೆ ನಾನು ಇಷ್ಟ ಪಟ್ಟಿರಲಿಲ್ಲ, ನಾನು ವೀಕೆಂಡ್ ನಲ್ಲಿ ವೇದಿಕೆ ಮೇಲೆ ನಿಮ್ಮ ಜೊತೆ ನಿಂತು ಮಾತನಾಡೋ ಅವಕಾಶವನ್ನು ಮಿಸ್ ಮಾಡ್ಕೊಳ್ಳಿಕ್ಕೆ ಬಯಸಿರಲಿಲ್ಲ ಎಂದು ಹೇಳಿದ್ದಾರೆ. ಆ ಸಂದರ್ಭದಲ್ಲಿ ಸಹಾ ಶುಭಾ ಭಾವುಕರಾಗಿದ್ದು ಉಂಟು. ಇನ್ನು ಕಿಚ್ಚ ಸುದೀಪ್ ಅವರಿಗೆ ಶುಭಾ ಅವರು ತಾನು ಜೀವನದಲ್ಲಿ ಮಾಡಿದ ಬಹಳ ಉತ್ತಮ ನಿರ್ಧಾರ ಬಿಗ್ ಬಾಸ್ ಗೆ ಬಂದಿದ್ದು ಎಂದಿದ್ದಾರೆ. ಏಳು ಸೀಸನ್ ನಲ್ಲಿ ಆಹ್ವಾನ ಬಂದಾಗಲೂ ಒಪ್ಪಿರಲಿಲ್ಲ. ಆದರೆ ಈ ಬಾರಿ ಬಂದಿದ್ದಕ್ಕೂ ಖುಷಿಯಾಗಿದೆ. ನಾನು ಹೋದ ಮೇಲೆ ಬಿಗ್ ಬಾಸ್ ಕೂಡಾ ಬೇಸರ ಮಾಡ್ಕೊತಾರೆ ಎಂದು ನಗೆ ಚಟಾಕಿ ಹಾರಿಸಿದರು ಶುಭಾ.

ಸುದೀಪ್ ಅವರು ಕೊನೆಯದಾಗಿ ವಾಟ್ ನೆಕ್ಸ್ಟ್ ಎಂದು ಕೇಳಿದ ಪ್ರಶ್ನೆಗೆ ಶುಭಾ ಮೊದಲು ಮದುವೆ ನನ್ನ ಫಿಯಾನ್ಸೆ ನನಗಾಗಿ ತುಂಬಾ ದಿನ ಕಾದಿದ್ದಾರೆ, ಅವರೇ ನಾನು ಬಿಗ್ ಬಾಸ್ ಗೆ ಬರೋದಿಕ್ಕೆ ಕಾರಣ. ಇನ್ನು ಅವರನ್ನು ಕಾಯಿಸೋದಿಲ್ಲ. ಮದುವೆ ಆಗಬೇಕು ಎಂದಿರುವ ಶುಭಾ ಪೂಂಜಾ ಇನ್ನು ತಾನು ತ್ರಿದೇವಿ ಎನ್ನುವ ಸಿನಿಮಾ ಕ್ಕೆ ಸಹ ನಿರ್ಮಾಪಕಿಯಾಗಿದ್ದೇನೆ, ಇದು ನಿರ್ಮಾಪಕಿಯಾಗಿ ಮೊದಲ ಪ್ರಯತ್ನ ಎಂದು ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ತಿಳಿಸಿದ ಶುಭಾ, ಬಿಗ್ ಬಾಸ್ ತನ್ನ ಜೀವನದಲ್ಲಿ ಮರೆಯಲಾಗದ ಅನುಭವ, ಬಹಳ ಸಂತೋಷ ಹಾಗೂ ವಿಶಿಷ್ಟ ಅನುಭವ ನೀಡಿದೆ ಎಂದು ಹೇಳಿದ್ದಾರೆ.

Leave a Comment